Dating App : ಯುವಕರಿಬ್ಬರು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮೊದಲಿಗೆ ಪರಿಚಯವಾದರು. ಆ ಇಬ್ಬರಲ್ಲಿ ಓರ್ವ ಯುವಕ ವೈದ್ಯನಾಗಿದ್ದ. ಇಬ್ಬರು ಮುಖತಃ ಭೇಟಿ ಮಾಡಲು ಬಯಸಿದ್ದರು. ಇದಕ್ಕಾಗಿ ಇಬ್ಬರು ಓಯೋ ರೂಮ್ ಒಂದನ್ನು ಕಾಯ್ದಿರಿಸಿದರು. ಬಳಿಕ ಇಬ್ಬರು ರೂಮ್ನಲ್ಲಿ ಭೇಟಿಯಾದರು. ಆದರೆ, ಆ ಬಳಿಕ ನಡೆದಿದ್ದು ಮಾತ್ರ ಯಾರೂ ಊಹಿಸಿದ ಅಚ್ಚರಿ ಘಟನೆ. ಅಷ್ಟಕ್ಕೂ ಆ ರೂಮಿನಲ್ಲಿ ಏನಾಯಿತು ಎಂದು ತಿಳಿಯಬೇಕಾದರೆ, ಈ ಸ್ಟೋರಿಯನ್ನು ಪೂರ್ತಿ ಓದಿ.
ವಿಜಯವಾಡದ ಸಾಲಿಪೇಟ್ ಗ್ರಾಮದ 23 ವರ್ಷದ ಯುವಕನೊಬ್ಬ ಮಾಧಾಪುರದ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ ಗ್ರೈಂಡರ್ ಹೆಸರಿನ ಡೇಟಿಂಗ್ ಆ್ಯಪ್ನಲ್ಲಿ ಯುವಕನೊಬ್ಬ ಪರಿಚಯವಾದ. ಇಬ್ಬರು ಕೆಲವು ದಿನಗಳ ಕಾಲ ಚಾಟಿಂಗ್ ಮಾಡುತ್ತಿದ್ದರು. ಹೀಗಿರುವಾಗ ಒಂದು ದಿನ, ಪರಿಚಿತ ಯುವಕ ಮುಖತಃ ಭೇಟಿಯಾಗಲು ಪ್ರಸ್ತಾಪ ಮಾಡಿದನು. ಅದಕ್ಕೆ ವೈದ್ಯನು ಕೂಡ ಒಪ್ಪಿದನು.
ಇದಾದ ಬಳಿಕ ಪರಿಚಿತ ಯುವಕ ಈ ತಿಂಗಳ 21 ರಂದು ಓಯೋದಲ್ಲಿ ರೂಮ್ ಒಂದನ್ನು ಕಾಯ್ದಿರಿಸಿದನು. ಬಳಿಕ ರೂಮಿನ ಲೊಕೇಶನ್ ಅನ್ನು ವೈದ್ಯನಿಗೆ ಕಳುಹಿಸಿದನು. ಅದೇ ಲೊಕೇಶನ್ಗೆ ಬಂದ ವೈದ್ಯನನ್ನು ಕರೆದುಕೊಂಡು ಪರಿಚಿತ ಯುವಕ ರೂಮಿನ ಒಳಗಡೆ ಹೋದನು.
ರೂಮಿಗೆ ಹೋದ ಇಬ್ಬರು ಸ್ವಲ್ಪ ಹೊತ್ತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಿಚಿತ ಯುವಕ, ಲೈಂಗಿಕ ಕ್ರಿಯೆ ನಡೆಸುವಂತೆ ವೈದ್ಯನ ಮೇಲೆ ಒತ್ತಡ ಹೇರಿದನು. ಆದರೆ, ಸಂತ್ರಸ್ತ ವೈದ್ಯ ಅದಕ್ಕೆ ನಿರಾಕರಿಸಿದನು. ಇದರಿಂದ ಆಕ್ರೋಶಗೊಂಡು ಪರಿಚಿತ ಯುವಕ, ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾನೆ.
ಇದಿಷ್ಟೇ ಅಲ್ಲದೆ, ಲೈಂಗಿಕ ಕ್ರಿಯೆ ನಡೆಸದಿದ್ದರೆ ನಿನ್ನ ತಂದೆಗೆ ಕರೆ ಮಾಡಿ ನೀನೊಬ್ಬ ಸಲಿಂಗಕಾಮಿ ಎಂದು ಹೇಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದ್ಯಾವುದೂ ನಡೆಯಬಾರದೆಂದರೆ, ಹಣ ನೀಡುವಂತೆ ವೈದ್ಯನ ಬಳಿಕ ಪರಿಚಿತ ಯುವಕ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ವೈದ್ಯ ತನ್ನ ಜೇಬಿನಲ್ಲಿದ್ದ 5,000 ರೂ.ಗಳನ್ನು ಆತನಿಗೆ ನೀಡಿದ್ದಾನೆ.
ಈ ಘಟನೆ ನಡೆದ ಮಾರನೇ ದಿನ ಪರಿಚಿತ ಯುವಕ, ಯುವ ವೈದ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಹೋಗಿ ಗಲಾಟೆ ಕೂಡ ಮಾಡಿದ್ದಾನೆ. ಬಳಿಕ ವೈದ್ಯ ವಾಸ ಮಾಡುತ್ತಿದ್ದ ಫ್ಲ್ಯಾಟ್‌ಗೂ ಕೂಡ ಹೋಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ವೈದ್ಯ, ತನ್ನ ಬಳಿ ಇದ್ದ 3,000 ರೂ.ಗಳನ್ನು ಆತನಿಗೆ ಕೊಟ್ಟು ಕಳುಹಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪರಿಚಿತ ಯುವಕ, ವೈದ್ಯನಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ. ತನಗೆ ಹೆಚ್ಚಿನ ಹಣ ಬೇಕು, ಇಲ್ಲದಿದ್ದರೆ ನೀನು ಸಲಿಂಗಕಾಮಿ ಎಂದು ಎಲ್ಲರಿಗೂ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆತನ ಕಿರುಕುಳ ಸಹಿಸದ ವೈದ್ಯ, ಈ ತಿಂಗಳ 22 ರಂದು ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣವನ್ನು ಮಾಧಾಪುರ ಪೊಲೀಸರಿಗೆ ವರ್ಗಾಯಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಗುರುವಾರ ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್)