ನ್ಯೂಸ್

ಅನುಮಾನಾಸ್ಪದ ಸಾವು: ಫ್ಲ್ಯಾಟ್​​ವೊಂದರಲ್ಲಿ ತಾಯಿ-ಮಗನ ಶವ ಪತ್ತೆ

ಮುಂಬೈ: ಫ್ಲ್ಯಾಟ್​​ವೊಂದರಲ್ಲಿ ತಾಯಿ ಹಾಗೂ ಮಗನ ಶವ ಪತ್ತೆಯಾಗಿರುವ ಘಟನೆ ಮುಂಬೈನ ವಿಕ್ರೋಲಿಯಲ್ಲಿ ನಡೆದಿದೆ.

ಅಭಿಷೇಕ್ ತಾವ್ಡೆ(22) ಹಾಗೂ ಉಮಾ (54) ಎಂಬುವರ ಶವಗಳು ದೊರಕಿವೆ. ಅಭಿಷೇಕ್ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಆತನ ತಾಯಿಯ ಬಾಯಿಯಲ್ಲಿ ನೊರೆಯೊಂದಿಗೆ ಹಾಲ್​ನಲ್ಲಿ ಪತ್ತೆಯಾಗಿದ್ದಾರೆ.

ಅಭಿಷೇಕ್ ನಿರುದ್ಯೋಗಿಯಾಗಿದ್ದು, ಅವರ ತಾಯಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಅಭಿಷೇಕ್‌ನ ತಂದೆ ಬಹಳ ಹೊತ್ತಿನವರೆಗೆ ಫ್ಲ್ಯಾಟ್​​ನ ಬಾಗಿಲು ಬಡಿದಾಗ ಓಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡು ಆತ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ನಂತರ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಿ ಫ್ಲ್ಯಾಟ್​​ನ ಬಾಗಿಲು ಒಡೆದಾಗ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)