ನ್ಯೂಸ್

70ರ ವೃದ್ಧನಿಗೆ 22ರ ಯುವತಿ ಜತೆ ಮದುವೆ! ವೈರಲ್​ ಆಯ್ತು ವಿಡಿಯೋ

ಜಕಾರ್ತಾ: ಮದುವೆಯಾಗುವ ವಧು ವರನ ನಡುವೆ 10-20 ವರ್ಷ ವಯಸ್ಸಿನ ವ್ಯತ್ಯಾಸ ಇರುವ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಈ ಮದುವೆ ಹಾಗಲ್ಲ. ಇಲ್ಲಿ ವಧು ವರನ ನಡುವಿನ ವಯಸ್ಸಿನ ವ್ಯತ್ಯಾಸ ಬರೋಬ್ಬರಿ 48 ವರ್ಷ!

ಹೌದು ನೈಜೀರಿಯಾದ ಪಶ್ಚಿಮ ಜಾವಾದ ತಸಿಕ್ಮಲಯದಲ್ಲಿ ಜನವರಿ 22ರಂದು ಒಂದು ಮದುವೆಯಾಗಿದೆ. ರಾಣಿ ಹೆಸರಿನ 22 ವರ್ಷದ ಯುವತಿ ರೆಡ್ಜಾ ಹೆಸರಿನ 70 ವರ್ಷದ ವೃದ್ಧನೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಾಳೆ. ತನ್ನ ಮದುವೆಯ ದಿನದ ಅದ್ಭುತ ಕ್ಷಣಗಳನ್ನು ಫೆಬ್ರವರಿ 24ರಂದು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾಳೆ. ಆಕೆ ವಿಡಿಯೋ ಅಪ್​ಲೋಡ್​ ಮಾಡಿದ ಕೆಲವೇ ದಿನಗಳಲ್ಲಿ 1 ಕೋಟಿಗೂ ಅಧಿಕ ಮಂದಿ ಆ ವಿಡಿಯೋ ನೋಡಿ ಲೈಕ್​ ಮಾಡಿದ್ದಾರೆ. ಇದು ಕೇವಲ ವಿಡಿಯೋಗೋಸ್ಕರ ಮಾಡಿದ ಮದುವೆಯೇ? ಅವರು ನಿಮ್ಮ ತಂದೆಯೇ ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಬಂದಿದೆ.

ಸಾವಿರಾರು ಪ್ರಶ್ನೆಗಳು ಬಂದ ಬೆನ್ನಲ್ಲೇ ಯುವತಿ ತಾನು 70 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದು ಸತ್ಯ ಎಂದು ಸ್ಪಷ್ಟನೆ ನೀಡಿದ್ದಾಳೆ. ಇಷ್ಟೊಂದು ವಯಸ್ಸಾಗಿದ್ದವರನ್ನು ಮದುವೆಯಾಗಲು ಕಾರಣವೇನು ಎನ್ನುವುದರ ಬಗ್ಗೆ ಮಾಹಿತಿ ಕೊಟ್ಟಿಲ್ಲ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ