ನ್ಯೂಸ್

21 ಲಕ್ಷ ರೂ. ಮೌಲ್ಯದ ಟೊಮ್ಯಾಟೋ ನಾಪತ್ತೆ ಪ್ರಕರಣ: ರಾಜಸ್ಥಾನದಲ್ಲಿ ಲಾರಿ ಪತ್ತೆ, ಚಾಲಕ ಪರಾರಿ..

ಕೋಲಾರ: ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ರಾಜಾಸ್ಥಾನಕ್ಕೆ ಹೊರಟಿದ್ದ ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿತ್ತು. ಆದರೆ ಇಂದು ಲಾರಿ ರಾಜಸ್ಥಾನದ ಜಾಲೂರ್ ಬಳಿ ಪತ್ತೆಯಾಗಿದೆ.

21 ಲಕ್ಷ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿ ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೊರಟಿದ್ದ ಲಾರಿ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು, ಇದರಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮ್ಯಾಟೋ ಇದ್ದವು.

ನಾಪತ್ತೆಯಾಗಿದ್ದ ಈಚರ್ ಲಾರಿ ರಾಜಸ್ಥಾನದ ಜಾಲೂರ್ ಬಳಿ ಪತ್ತೆಯಾಗಿದ್ದು, ಲಾರಿ ಚಾಲಕ ಅನ್ವರ್ ಎಂಬಾತ ಟೊಮ್ಯಾಟೋವನ್ನು ಅಹಮದಾಬಾದ್​​​ನಲ್ಲಿ ಪ್ರಕಾಶ್ ಎಂಬುವವರಿಗೆ ಮಾರಾಟ ಮಾಡಿ ನಂತರ ಗುಜರಾತ್​​ನ ಪೆಟ್ರೋಲ್ ಬಂಕ್ ಬಳಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಮಾಲೀಕ, ಚಾಲಕ, ಗುಜರಾತ್​ನ ಏಜೆಂಟ್ ಸೇರಿ ಒಟ್ಟು 6 ಜನರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಸದ್ಯ ಗುಜರಾತ್​​ಗೆ ತೆರಳಿ ದೂರು ನೀಡಿದ್ದಾರೆ.