ನ್ಯೂಸ್

ಕರೊನಾ ಹಾಟ್​ಸ್ಫಾಟ್​ ಆಗಿದೆ ದಾವಣಗೆರೆ; ಇಂದು ಒಂದೇ ದಿನದಲ್ಲಿ ಬರೋಬ್ಬರಿ 21 ಕೇಸ್​ಗಳು ಪತ್ತೆ...

ದಾವಣಗೆರೆ: ಕರೊನಾ ಕೆಟ್ಟ ಕಣ್ಣು ದಾವಣಗೆರೆ ಮೇಲೆ ವಕ್ಕರಿಸಿದೆ. ಇಂದು ಬರೋಬ್ಬರಿ 21 ಹೊಸ ಕರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ತೀವ್ರ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾದವರ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ಗುರುತಿಸಿ ಕ್ವಾರಂಟೈನ್​ ಮಾಡಲಾಗಿತ್ತು. ಹಾಗೇ ಮೊನ್ನೆ ( ಶುಕ್ರವಾರ) 94 ಜನರ ಮತ್ತು ನಿನ್ನೆ (ಶನಿವಾರ) 74 ಮಂದಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು.

ಈಗ 37 ಜನರ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 21 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಂತೇಶ್​ ಬಿಳಗಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇನ್ನೂ 296 ಮಂದಿಯ ರಿಪೋರ್ಟ್​ ಬರಬೇಕಿದೆ. ಇದು ಪ್ರಾಥಮಿಕ ವರದಿ. ಎರಡನೇ ರಿಪೋರ್ಟ್ ಬಳಿಕವಷ್ಟೇ ಪೇಷೆಂಟ್ ನಂಬರ್ ನೀಡುತ್ತೇವೆ. ಬಾಷಾ ನಗರ ಮತ್ತು ಜಾಲಿನಗರಗಳು ಸಂಪೂರ್ಣ ಸೀಲ್​ಡೌನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆಷ್ಟೇ ದಾವಣಗೆರೆಯಲ್ಲಿ ಕರೊನಾದಿಂದ ಮೊದಲ ಸಾವಾಗಿತ್ತು. ಜಾಲಿನಗರ 69ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದರು.

ಇದೀಗ ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635ಕ್ಕೇರಿದ್ದು, 25 ಮಂದಿ ಮೃತಪಟ್ಟಿದ್ದಾರೆ. 293 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.