ಬ್ರೆಜಿಲ್ : ( Mysterious Case ) 20 ವರ್ಷದ ಯುವತಿಯೊಬ್ಬಳು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಈಕೆ ದೇಹದ ಸುತ್ತಲೂ ಡಜನ್ಗಟ್ಟಲೆ ಮೊಬೈಲ್ ಫೋನ್ಗಳನ್ನು ಇರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಫೋಜ್ ಡೊ ಇಗುವಾಸದದಿಂದ ಬಸ್ ಹತ್ತಿದ ಯುವತಿ ಸಾವೊ ಪಾಲೊಗೆ ಪ್ರಯಾಣ ಮಾಡುತ್ತಿದ್ದಳು. ಈ ವೇಳೆ ಈಕೆಗೆ ಉಸಿರಾಟದ ತೊಂದರೆಯಾಗಿದೆ. ಗೌರಪುವಾದಲ್ಲಿ ಕುಸಿದು ಬಿದ್ದಿದ್ದಾಳೆ. ನಂತರ ಆಕೆಯನ್ನು ಹತ್ತಿರದ ಆಶ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬದುಕಿಸಲು ಪ್ರಯತ್ನಿಸಿದರೂ, ಆಕೆ ಚಿಕಿತ್ಸೆಗೆ ಪ್ರತಿಕ್ರಿಯಿಸಿಲ್ಲ.
ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿರುವಾಗ ಆಕೆಯು ತನ್ನ ದೇಹದ ಬಟ್ಟೆ ಕೆಳಗೆ 26 ಐಫೋನ್ಗಳನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದ್ದಾರೆ. ಇನ್ನು ಅನುಮಾನ ವ್ಯಕ್ತಪಡಿಸಿ ಆಕೆಯ ಲಗೇಜು ಪರಿಶೀಲಿಸಿದಾಗ ಮಧ್ಯದ ಬಾಟಲಿಗಳು ಕಂಡುಬಂದಿವೆ. ಯುವತಿ ಮೊಬೈಲ್ಗಳ ಕಳ್ಳಸಾಗಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೈಂಟಿಫಿಕ್ ಪೊಲೀಸರು ಹಾಗೂ ಸಿವಿಲ್ ಪೊಲೀಸ್ ತಂಡ ಆಕೆಯ ದೇಹದ ಪರೀಕ್ಷೆ ನಡೆಸಲು ವೈದ್ಯಕೀಯ ಸಂಸ್ಥೆಗೆ ಕಳುಹಿಸಲಾಯಿತು. ಇನ್ನು ಪ್ರಕರಣದ ಬಗ್ಗೆ ಪರಾನಾ ಸಿವಿಲ್ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆಯ ದೇಹಕ್ಕೆ ಅಮಟಿರುವ 26 ಐಫೋನ್ಗಳನ್ನು ವಶಕ್ಕೆ ಪಡೆದು ಬ್ರೆಜಿಲ್ನ ಫೆಡರಲ್ ಕಂದಾಯ ಸೇವೆಗೆ ಹಸ್ತಾಂತರಿಸಲಾಗಿದೆ. ಯುವತಿ ಯಾರು? ಈಕೆ ಬಳಿ ಇರುವ ಇಷ್ಟು ಮೊಬೈಲ್ಗಳು ಎಲ್ಲಿಂದ ಬಂದವು ಎನ್ನುವ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ( ಏಜೆನ್ಸೀಸ್)