ಭೋಪಾಲ್: ಮೂರು ದಿನಗಳ ಹಿಂದೆ ಆಟ ಆಡುವ ವೇಳೆ 300 ಅಡಿ ಬೋರ್ವೆಲ್ ಒಳಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟಿದ್ದಾಳ ಎಂದು ತಿಳಿದು ಬಂದಿದೆ.
ಸತತ 50 ಘಂಟೆಗಳ ದುದೀರ್ಘ ಕಾರ್ಯಾಚರಣೆ ನಡೆಸಿದ ಹೊರತೆಗೆದಿರುವ ರಕ್ಷಣಾ ತಂಡದ ಸದಸ್ಯರು ಗುರುವಾರ ಸಂಜೆ 5:30ರ ಸುಮಾರಿಗೆ ಬಾಲಕಿ ಇದ್ದ ಜಾಗವನ್ನು ತಲುಪಲು ಯಶಸ್ವಿಯಾದರು. ಆದರೆ, ಪುಟ್ಟ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಸೇನೆ. NDRF, SDRF, ರೋಬೋಟಿಕ್ ಯಂತ್ರೋಪಕರಣಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು.
ಮಂಗಳವಾರ ಮಧ್ಯಾಹ್ನ 1 ಘಂಟೆ ಸುಮಾರಿಗೆ ಸೆಹೋರ್ ಜಿಲ್ಲೆಯ ಮುಂಗಾವಲಿ ಗ್ರಾಮದ 300 ಅಡಿ ಬೋರ್ವೆಲ್ ಒಳಗೆ ಬಿದ್ದ ಬಾಲಕಿಯನ್ನು ಗುರುವಾರ ಸಂಜೆ 5:30ರ ಸುಮಾರಿಗೆ ಮೇಲೆತ್ತಲಾಗಿದೆ.
ಸಂಪೂರ್ಣ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆಯಾದರೂ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೊದಲಿಗೆ 40 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕಿ ಯಂತ್ರೋಪಕರಣಗಳ ಕಂಪನದಿಂದಾಗಿ 100 ಅಡಿಯಷ್ಟು ಕೆಳಕ್ಕೆ ಜಾರಿದ್ದಾಳೆ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ.