ಕೋಲ್ಕತ: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಜಿಲ್ಲೆಯ ಬಾಂಗ್ಲಾ ಗಡಿ ಭಾಗದಲ್ಲಿ ಭೂಪಟವನ್ನು ಹಿಡ್ಕೊಂಡು ಸಂದೇಹಾಸ್ಪದವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) ತಿಳಿಸಿದೆ.
ಬಂಧಿತರ ಬಳಿಕ ಸುಮಾರು 500ರಷ್ಟು ಯಾಬಾ ಟ್ಯಾಬ್ಲೆಟ್ಸ್, ಮ್ಯಾಪ್ ಮತ್ತು ಇತರೆ ವಸ್ತುಗಳು ಸಿಕ್ಕಿವೆ. ಯಾಬಾ ಟ್ಯಾಬ್ಲೆಟ್ಸ್ ನಿಷೇಧಿತ ಡ್ರಗ್ಸ್ ಪಟ್ಟಿಯಲ್ಲಿದೆ. ಗಸ್ತಿನಲ್ಲಿದ್ದ ಬಿಎಸ್ಎಫ್ ಯೋಧರ ತಂಡಕ್ಕೆ ಇವರು ಎದುರಾಗಿದ್ದು, ಸಂದೇಹಾಸ್ಪದ ನಡವಳಿಕೆ ತೋರಿದ್ದರಿಂದ ತಡೆದು ತಪಾಸಣೆ ನಡೆಸಲಾಗಿತ್ತು. ಅವರ ಬಳಿ ಇದ್ದ ಬೈಕ್ ಅನ್ನೂ ವಶಪಡಿಸಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 3.26 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ‘ಕಸ್ತೂರಿ ನಿವಾಸ’ ಕೈಬಿಟ್ಟ ರಚಿತಾ ರಾಮ್
ಬಂಧಿತರನ್ನು ರುಹುಲ್ ಮೊಂಡಲ್, ಫಾರೂಕ್ ಮೊಲ್ಲಾಹ್ ಎಂದು ಗುರುತಿಸಲಾಗಿದೆ. ಇಬ್ಬರೂ ನಾರ್ತ್ 24 ಪರಗಣ ಜಿಲ್ಲೆಯ ಸ್ವರೂಪ್ನಗರದ ನಿವಾಸಿಗಳು. ವಿಚಾರಣೆ ವೇಳೆ, ಸ್ಥಳೀಯರೊಬ್ಬರು ತಮ್ಮನ್ನು ಅಲ್ಲಿ ನಿಲ್ಲುವಂತೆ ಸೂಚಿಸಿದ್ದರಿಂದ ನಿಂತಿದ್ದೇವೆ ಎಂದು ಹೇಳಿದ್ದರು. ಆ ಸ್ಥಳೀಯ ವ್ಯಕ್ತಿ ಯಾರು ಎಂಬ ಶೋಧಕ್ಕೆ ಇಳಿದಿದ್ದಾರೆ ಬಿಎಸ್ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು. (ಏಜೆನ್ಸೀಸ್)