ನವದೆಹಲಿ: ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಮಾತ್ರವಲ್ಲ, ಎರಡು ತಿಂಗಳಲ್ಲಿ ಇಂಥ 9 ಪ್ರಕರಣಗಳು ನಡೆದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ರಾಜಸ್ಥಾನದ ಕೋಟಾದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಹುಲ್ ವೈಷ್ಣವ್ ಹಾಗೂ ಆದಿತ್ಯ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿಗಳು.
ಇದನ್ನೂ ಓದಿ: ಮಕ್ಕಳ ಕಣ್ಣಿಗೆ ಕಾಡಿಗೆ ಎಷ್ಟು ಸುರಕ್ಷಿತ!; ಅಪಾಯವೇನು?
ಮೆಹುಲ್ ವೈಷ್ಣವ್ (18) ನೀಟ್ ಪರೀಕ್ಷೆಗೆ ಸಜ್ಜಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಉದಯಪುರದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದ. ಉದಯಪುರ ಜಿಲ್ಲೆಯ ಸಲುಂಬಾರ್ ಎಂಬಲ್ಲಿನ ಈತ ಕೋಚಿಂಗ್ ಇನ್ಸ್ಟಿಟ್ಯೂಟ್ವೊಂದರಲ್ಲಿ 2 ತಿಂಗಳಿಂದ ನೀಟ್ ಅಧ್ಯಯನದಲ್ಲಿ ತೊಡಗಿದ್ದ. ಈತ ಹಾಸ್ಟೆಲ್ನಲ್ಲಿ ಏಕಾಂಗಿಯಾಗಿದ್ದ ಈ ಆತ್ಮಹತ್ಯೆ ಮಾಡಿಕೊಂಡಿದ್ದ.
ವೈದ್ಯಕೀಯ ಪರೀಕ್ಷೆಗೆ ತಯಾರಿಯಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಆದಿತ್ಯ ಎಂಬಾತ ಕೂಡ ಕೋಟಾದಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತನೂ ಕೋಚಿಂಗ್ಗಾಗಿ ಎರಡು ತಿಂಗಳ ಹಿಂದೆ ಬಂದಿದ್ದ. ಕೋಟಾದಲ್ಲಿ ಕಳೆದ ಎರಡು ತಿಂಗಳಲ್ಲಿ ಇಂಥ 9 ಆತ್ಮಹತ್ಯೆಗಳಾಗಿವೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. -ಏಜೆನ್ಸೀಸ್