ಕೇರಳ: ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಅಕ್ರಮ ಜಾಲದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇದೀಗ ಕೋಝಿಕ್ಕೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 33.45 ಗ್ರಾಂ ಡ್ರಗ್ಸ್ (Drugs) ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದ ತೇಜಸ್ವಿ ಯಾದವ್!, ಇದಕ್ಕೆ ಚುನಾವಣಾ ಆಯೋಗ ಹೇಳಿದ್ದೇನು.? | Tejashwi Yadav
'ಮಾತೃಭೂಮಿ' ಸುದ್ದಿ ಸಂಸ್ಥೆ ವರದಿ ಪ್ರಕಾರ, ಬಂಧಿತರನ್ನು ಕೋಝಿಕ್ಕೋಡ್ ನಡುವತ್ತೋಮ್ ಮೂಲದ ಮಠಥಿಲ್ ಪರಮ್ ಎನ್.ಪಿ. ಹೌಸ್ ನ ಮಹರೂಫ್ (33) ಮತ್ತು ಕೋಳತ್ತರ ಮೂಲದ ಕೊಟ್ಟಕುಲಂಗರ ಹೌಸ್ನ ಮುಹಮ್ಮದ್ ಶಹೀರ್ (27) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳನ್ನು ನಾರ್ಕೋಟಿಕ್ಸ್ ಸಹಾಯಕ ಆಯುಕ್ತ ಕೆ.ಎ. ಬೋಸ್ ನೇತೃತ್ವದ ನಗರ ಡಿಎನ್ಎಎಸ್ಎಎಫ್ ಮತ್ತು ಬೇಪೋರ್ ಪೊಲೀಸ್ ಠಾಣಾ ಸಬ್-ಇನ್ಸ್ಪೆಕ್ಟರ್ ನೌಶಾದ್ ನೇತೃತ್ವದ ತಂಡ ಬಂಧಿಸಿದೆ.
ಕೇರಳದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ರೈಲಿನಿಂದ ಇಳಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಕೋಝಿಕ್ಕೋಡ್ಗೆ ಮಾದಕ ದ್ರವ್ಯಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಗೆ ಡ್ರಗ್ ಮಾಫಿಯಾ ಮಾಡುವವರ ಜೊತೆ ನಿಕಟ ಸಂಪರ್ಕ ಇರುವ ಬಗ್ಗೆ ಮಾಹಿತಿ ಪಡೆದ ಡಿಎನ್ಎಎಸ್ಎಎಫ್, ಇಬ್ಬರ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಬೆಂಗಳೂರು ಮತ್ತು ಗೋವಾದಿಂದ ಎಂಡಿಎಂಎ ಎಂಬ ಮಾದಕವಸ್ತುವನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿ, ಕೋಝಿಕ್ಕೋಡ್ನಲ್ಲಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾರಾಟ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಚಿನ್ನದ ಮೇಲೆ ಹೂಡಿಕೆಗೆ ಇದು ಸೂಕ್ತ ಸಮಯವೇ? 2026ಕ್ಕೆ ಗೋಲ್ಡ್ ಬೆಲೆ ಕುಸಿತ? ಹೀಗಿದೆ ತಜ್ಞರ ಮಾತು | Gold
ಈ ಗ್ಯಾಂಗ್ನಲ್ಲಿ ಇವರಿಬ್ಬರು ಪ್ರಮುಖರು. ಡ್ರಗ್ ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಲಕ್ಸುರಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಯಾರಿಗೆ ಈ ಡ್ರಗ್ಗಳನ್ನು ವಿತರಿಸುತ್ತಿದ್ದರು ಮತ್ತು ಮಾಫಿಯಾದಲ್ಲಿ ಅವರ ಸಹಚರರು ಯಾರೆಲ್ಲ ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡುವ ಮೂಲಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಕೋಝಿಕ್ಕೋಡ್ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).