ನ್ಯೂಸ್

2.5 ಕೋಟಿ ರೂ. ಖರ್ಚು ಮಾಡಿ ಮಗಳಿಗೆ ಅದ್ದೂರಿ ಮದ್ವೆ ಮಾಡಿದ್ದ ಅಪ್ಪ: ಆದ್ರೂ ಸೂಸೈಡ್​ ಮಾಡ್ಕೊಂಡ ಮಗಳು! | Suicide

Suicide:ಕೌಟುಂಬಿಕ ಕಲಹದಿಂದಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ಭಾನುವಾರ ನಡೆದಿದೆ.

ತಿರುಪ್ಪೂರು ಜಿಲ್ಲೆಯ ಅವಿನಾಶಿಯ ಕೈಕಟ್ಟಿಪುದೂರು ಪ್ರದೇಶದಲ್ಲಿ ರಿದನ್ಯಾ (27) ಮೃತೆ ಎಂದು ಗುರುತಿಸಲಾಗಿದೆ. ಚೆಟ್ಟಿಪುತ್ತೂರಿನಲ್ಲಿ ತೆಂಗಿನ ಮರಗಳಿಗೆ ಬಳಸುವ ಕೀಟನಾಶಕ ಮಾತ್ರೆಗಳನ್ನು ನುಂಗಿದ ನಂತರ ರಿದನ್ಯಾ ತನ್ನ ಕಾರಿನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿದನ್ಯಾ ಮೂರು ತಿಂಗಳ ಹಿಂದೆ ಕೈಕಟ್ಟಿಪುದೂರಿನ ಜಯಂ ಗಾರ್ಡನ್ ನಿವಾಸಿ ಕವಿಂಕುಮಾರ್ ಅವರನ್ನು ವಿವಾಹವಾಗಿದ್ದರು. ಇನ್ನು ಈ ವಿವಾಹಕ್ಕಾಗಿ ಆಕೆಯ ತಂದೆ 2.5 ಕೋಟಿ ರೂ. ಖರ್ಚು ಮಾಡಿ ಅದ್ದೂರಿ ವಿವಾಹ ಮಾಡಿದ್ದರು ಎಂದು ವರದಿನ ಉಲ್ಲೇಖಿಸಿದ್ದಾರೆ.

ಕೌಟುಂಬಿಕ ಕಲಹದಿಂದಾಗಿ ರಿದನ್ಯಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಬೇರೆ ಯಾವುದೇ ಕಾರಣವಿದೆಯೇ ಎಂದು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ರಿದನ್ಯಾ ತನ್ನ ತಂದೆಗೆ ವಾಟ್ಸಾಪ್ ಮೂಲಕ ಕೆಲವು ಆಡಿಯೋಗಳನ್ನು ಕಳುಹಿಸಿದ್ದಾಳೆ. ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅವುಗಳಲ್ಲಿ, ತನ್ನ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾಳೆ.(ಏಜೆನ್ಸೀಸ್​)