ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss) ಮನರಂಜನಾ ಕಾರ್ಯಕ್ರಮಕ್ಕೆ ಇದೀಗ ಹೊಸ ರೂಪ ಸಿಕ್ಕಿದ್ದು, ಸೀಸನ್ 10ರ ಯಶಸ್ಸಿನ ನಂತರ ಸೀಸನ್ 11 ಸಖತ್ ಸದ್ದು ಮಾಡುತ್ತಿದೆ. ಸತತ 11 ಸೀಸನ್ಗಳನ್ನು ತಮ್ಮ ಖಡಕ್ ಮಾತು, ವಿಭಿನ್ನ ಶೈಲಿಯಿಂದಲೇ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep), ಒಂದಷ್ಟು ಗೊಂದಲಗಳ ನಡುವೆ ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು ಇದೀಗ ಇದೀಗ ಅವರ ಅಪಾರ ಅಭಿಮಾನಿ ಬಳಗಕ್ಕೆ ಭಾರೀ ಖುಷಿ ನೀಡಿದೆ. ಈ ಮಧ್ಯೆ ಇಂದು ನಡೆಯುತ್ತಿರುವ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಕಿರುತೆರೆ ನಟಿ ಭವ್ಯ ಗೌಡ ಎಂಟ್ರಿ ಕೊಟ್ಟರೆ, ಎರಡನೇ ಸ್ಪರ್ಧಿ ಆಗಿ ನಟಿ ಯಮುನಾ ಬಲಗಾಲಿಟ್ಟು ಒಳಗೆ ಬಿಗ್ ಮನೆಯೊಳಗೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಮಗನ ಸಾವಿಗೆ ನ್ಯಾಯ ಕೊಡಿಸುವವರೆಗೂ ಕದಲಲ್ಲ
ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ವರ್ಗ ಮತ್ತು ನರಕ ಕಾನ್ಸೆಪ್ಟ್ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮನೆ ಹೇಗಿರಲಿದೆ? ಯಾರು ಯಾವ ಜಾಗಕ್ಕೆ ಸೇರುತ್ತಾರೆ ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿತ್ತು. ಆದ್ರೆ, ಈ ಎಲ್ಲಾ ಗೊಂದಲಗಳಿಗೆ ಇದೀಗ ತೆರೆ ಬಿದ್ದಿದೆ. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೂ ಮುನ್ನವೇ ಇವರು ಬರುತ್ತಾರೆ, ಅವರ ಎಂಟ್ತಿ ಇರುವುದು ಪಕ್ಕಾ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತಿತ್ತು. ಅಸಲಿಗೆ ಬಿಗ್ ಮನೆಯೊಳಗೆ ಯಾರೆಲ್ಲಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.
ಧನರಾಜ್ ಆಚಾರ್, ಗೌತಮಿ ಜಾಧವ್, ಲಾಯರ್ ಜಗದೀಶ್, ತ್ರಿವಿಕ್ರಮ್, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್, ಐಶ್ವರ್ಯಾ ಶಿಂಧೋಗಿ, ಅನುಷಾ ರೈ, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಮಾನಸಾ ಸಂತೋಷ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಉಗ್ರಂ ಮಂಜು,
ಸ್ವರ್ಗ ಸೇರಿದ ಸ್ಪರ್ಧಿಗಳು: ಧನರಾಜ್ ಆಚಾರ್, ಗೌತಮಿ ಜಾಧವ್, ಲಾಯರ್ ಜಗದೀಶ್, ತ್ರಿವಿಕ್ರಮ್, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು.
ನರಕಕ್ಕೆ ಹೋದ ಸ್ಪರ್ಧಿಗಳು: ಅನುಷಾ ರೈ, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಮಾನಸಾ ಸಂತೋಷ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್.
https://www.vijayavani.net/special-power-to-these-2-inside-biggboss-11