ಸಾಂದರ್ಭಿಕ ಚಿತ್ರ 
ನ್ಯೂಸ್

ಆಟವಾಡುತ್ತಿದ್ದಾಗ ನೀರಿನ ಬಕೆಟ್‌ಗೆ ಬಿದ್ದು ಪ್ರಾಣ ಬಿಟ್ಟ 16 ತಿಂಗಳ ಮಗು

ನಿಜಾಮಾಬಾದ್: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು 16 ತಿಂಗಳ ಮಗು ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಉತ್ತೋಂಡ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೇಶವ ಮತ್ತು ಗಂಗಾಮಣಿ ದಂಪತಿ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೇಶವ ದಂಪತಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಸೋಮವಾರ ಮಧ್ಯಾಹ್ನ ಕುಟುಂಬಸ್ಥರು ಮನೆಗೆಲಸದಲ್ಲಿ ನಿರತರಾಗಿದ್ದ ವೇಳೆ ಕಿರಿಯ ಪುತ್ರಿ ವೇದಶ್ರೀ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಕೆಟ್‌ಗೆ ಬಿದ್ದಿದ್ದಾಳೆ.

ಇದನ್ನೂ ಓದಿ: ಭಾರತ ಪೌರತ್ವ ಪಡೆದ ಬಾಲಿವುಡ್​ನ ಖ್ಯಾತ ನಟ: ಖುಷಿಯಿಂದ ಹೇಳಿದ್ದಿಷ್ಟು..

ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು ಬಕೆಟ್‌ನಲ್ಲಿ ಬಿದ್ದಿದ್ದನ್ನು ತಡವಾಗಿ ಗಮನಿಸಿದ ಕುಟುಂಬಸ್ಥರು ಕೂಡಲೇ ಕೋಟಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಸ್ಥಿತಿ ಚಿಂತಾಜನಕವಾಗಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ಬೋಧನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಕೂಡಲೇ ತಪಾಸಣೆ ನಡೆಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಟವಾಡುವಾಗ ಅಪಘಾತಕ್ಕೀಡಾಗುವ ಸಂಭವವಿರುವುದರಿಂದ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ನೀರು ತುಂಬಿ ಇಡುವುದು ಒಳ್ಳೆಯದಲ್ಲ ಎನ್ನುತ್ತಾರೆ ಮಕ್ಕಳ ತಜ್ಞರು. ನೀರಿನ ತೊಟ್ಟಿಗಳು ಮತ್ತು ಡ್ರಮ್‌ಗಳ ಮೇಲೆ ಮುಚ್ಚಳಗಳನ್ನು ಇರಿಸಲು ಸಹ ಸೂಚಿಸಲಾಗಿದೆ. ಬಿಸಿ ನೀರು ಮತ್ತು ವಾಟರ್ ಹೀಟರ್​​ನ್ನು ಮಕ್ಕಳಿಂದ ದೂರವಿಡಬೇಕು ಎಂದು ಹೇಳುತ್ತಾರೆ.(ಏಜೆನ್ಸೀಸ್)