ಆಂಧ್ರಪ್ರದೇಶ: ಸಂದೀಪ್ ಉನ್ನಿಕೃಷ್ಣನ್ ಅವರ ಬಯೋಪಿಕ್ ಸಿನಿಮಾ 'ಮೇಜರ್'ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಹತ್ತಿರವಾದ ತೆಲುಗು ನಟ ಅದ್ವಿ ಶೇಶ್ ಇದೀಗ ತಮ್ಮ ಹೊಸ ಬಹುನಿರೀಕ್ಷಿತ ಪ್ರಾಜೆಕ್ಟ್ಗಳಲ್ಲಿ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಮೇಜರ್ ನಂತರ ಅಷ್ಟಾಗಿ ಸುದ್ದಿಗೆ ಬಾರದ ಅದ್ವಿ ತಮ್ಮ ಹೊಸ ಸಿನಿಮಾಗಳ ಮುಖೇನ ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ.
ಪ್ರಸ್ತುತ 'G2' (ಗೂಢಾಚಾರಿ 2) ಮತ್ತು 'ಡಕಾಯಿಟ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ಅದ್ವಿ, ಈ ಎರಡು ಚಿತ್ರಗಳಿಗಾಗಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕರು ಕೂಡ ಭಾರೀ ಬಂಡವಾಳ ಹಾಕಿದ್ದು, ಎರಡು ಚಿತ್ರಗಳಿಗೆ ಸುಮಾರು 150 ಕೋಟಿ ರೂ. ಬಜೆಟ್ ನೀಡಿದೆ ಎಂದು ಇತ್ತೀಚಿನ ಸಿನಿ ವರದಿ ತಿಳಿಸಿದೆ.
ಉತ್ತಮ ಗುಣಮಟ್ಟವನ್ನು ಕೊಡಲು ಸಕಲ ತಯಾರಿಗಳನ್ನು ಮಾಡುತ್ತಿರುವ ಚಿತ್ರತಂಡ, ಎರಡೂ ಚಿತ್ರಗಳಿಗೆ ಬೃಹತ್ ಸೆಟ್‌ಗಳನ್ನು ನಿರ್ಮಿಸಿದೆ. ಸದ್ಯ ಚಿತ್ರವು ನಿರ್ಮಾಣ ಹಂತದಲ್ಲಿದೆ. ವಿನಯ್ ಕುಮಾರ್ ಸಿರಿಗಿನೀಡಿ ಮತ್ತು ಶಾನಿಯಲ್ ಡಿಯೋ ನಿರ್ದೇಶನದ ಜಿ2 ಮತ್ತು ಡಕಾಯಿತ್ನಲ್ಲಿ ಬನಿತಾ ಸಂಧು ಮತ್ತು ಶ್ರುತಿ ಹಾಸನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).