More

    ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಷೇರು 5 ದಿನಗಳಲ್ಲಿಯೇ ಶೇ. 80 ಹೆಚ್ಚಳ: 1ಕ್ಕೆ 4 ಬೋನಸ್​ ಸ್ಟಾಕ್​ ನೀಡಲು ಸಜ್ಜಾಗಿದೆ ಕಂಪನಿ!

    ಮುಂಬೈ: ಸದ್ಯ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಸ್ಟಾಕ್​ಗಳು ಬಿರುಗಾಳಿ ಎಬ್ಬಿಸಿದೆ. ಏಕೆಂದರೆ, 5 ದಿನಗಳಲ್ಲಿಯೇ ಈ ಕಂಪನಿಯ ಷೇರು ಬೆಲೆ ಶೇಕಡಾ 80ರಷ್ಟು ಹೆಚ್ಚಳ ಕಂಡಿದೆ. ಅಲ್ಲದೆ, ಈ ಕಂಪನಿಯು 4 ಬೋನಸ್ ಷೇರುಗಳನ್ನು ಕೂಡ ನೀಡುತ್ತಿದೆ,

    ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಲಿಮಿಟೆಡ್​ (Salasar Techno Engineering Ltd.) ಕಂಪನಿಯ ಷೇರುಗಳು ರಾಕೆಟ್​ ವೇಗದಲ್ಲಿ ಹೆಚ್ಚಳ ಕಾಣುತ್ತಿವೆ. ಈ ಕಂಪನಿಯ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಮಟ್ಟವಾದ 120 ರೂಪಾಯಿ ತಲುಪಿದೆ. ಸಲಾಸರ್ ಟೆಕ್ನೋ ಷೇರುಗಳ 52 ವಾರಗಳ ಕನಿಷ್ಠ ಮಟ್ಟವು 36 ರೂಪಾಯಿ ಇತ್ತು.

    ಸ್ಮಾಲ್‌ಕ್ಯಾಪ್ ಕಂಪನಿಯಾಗಿ ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಷೇರುಗಳು ಗುರುವಾರ ಒಂದೇ ದಿನದಲ್ಲಿ ಶೇಕಡಾ 10ರಷ್ಟು ಏರಿಕೆ ಕಂಡು 120 ರೂಪಾಯಿಗೆ ತಲುಪಿವೆ. ಕಳೆದ 5 ದಿನಗಳಲ್ಲಿ ಈ ಷೇರುಗಳ ಬೆಲೆ 80 ರಷ್ಟು ಹೆಚ್ಚಾಗಿದೆ.

    ಕಂಪನಿಯು ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳ ಉಡುಗೊರೆಯನ್ನು ನೀಡುತ್ತಿದೆ. ಕಂಪನಿಯು 4:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತಿದೆ. ಅಂದರೆ, ಸಲಾಸರ್ ಟೆಕ್ನೋ ಪ್ರತಿ ಒಂದು ಷೇರಿಗೆ 4 ಬೋನಸ್ ಷೇರುಗಳನ್ನು ನೀಡುತ್ತದೆ.

    ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ತನ್ನ ಬೋನಸ್ ಷೇರುಗಳನ್ನು ನೀಡುವ ದಿನಾಂಕವನ್ನು ಪ್ರಕಟಿಸಿದೆ. ಕಂಪನಿಯ ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 1 ಫೆಬ್ರವರಿ 2024ಕ್ಕೆ ನಿಗದಿಪಡಿಸಿದೆ.

    ಈ ಮಲ್ಟಿಬ್ಯಾಗರ್ ಕಂಪನಿಯು ಎರಡನೇ ಬಾರಿಗೆ ಬೋನಸ್ ಷೇರುಗಳನ್ನು ನೀಡಲು ಹೊರಟಿದೆ. ಸಲಾಸರ್ ಟೆಕ್ನೋ ಈ ಹಿಂದೆ 1:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಅಂದರೆ, ಕಂಪನಿಯ ಪ್ರತಿ ಷೇರಿಗೆ 1 ಬೋನಸ್ ಷೇರು ನೀಡಲಾಗಿತ್ತು. ಕಂಪನಿಯು ಜೂನ್ 2022 ರಲ್ಲಿ ಷೇರುಗಳನ್ನು ವಿತರಿಸಿದೆ. ಸಲಾಸರ್ ಟೆಕ್ನೋ 10 ರೂಪಾಯಿ ಮುಖಬೆಲೆಯ ಷೇರುಗಳನ್ನು 1 ರೂಪಾಯಿ ಮುಖಬೆಲೆಯ 10 ಷೇರುಗಳಾಗಿ ಪರಿವರ್ತಿಸಿದೆ.

    4 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಷೇರುಗಳಲ್ಲಿ 2900% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್‌ನ ಷೇರುಗಳ ಬೆಲೆ 17 ಏಪ್ರಿಲ್ 2020 ರಂದು 3.78 ರೂ. ಇತ್ತು. ಈ ಬೆಲೆ ಜನವರಿ 25, 2024 ರಂದು ರೂ 120 ತಲುಪಿದೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳು 130% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ. ಈ ಅವಧಿಯಲ್ಲಿ ಸಲಾಸರ್ ಟೆಕ್ನೋ ಷೇರುಗಳ ಬೆಲೆ ರೂ. 51.80 ರಿಂದ ರೂ.120ಕ್ಕೆ ಏರಿಕೆಯಾಗಿದೆ.

    ಸಲಾಸರ್‌ ಕಂಪನಿಯ ಉತ್ಪನ್ನಗಳಲ್ಲಿ ಟೆಲಿಕಮ್ಯುನಿಕೇಶನ್ ಟವರ್‌ಗಳು ಮತ್ತು ಮೊನೊಪೋಲ್‌ಗಳು, ಪವರ್ ಟ್ರಾನ್ಸ್‌ಮಿಷನ್ ಲೈನ್ ಟವರ್‌ಗಳು, ಸಬ್‌ಸ್ಟೇಷನ್ ಸ್ಟ್ರಕ್ಚರ್‌ಗಳು, ಸೋಲಾರ್ ಮಾಡ್ಯೂಲ್ ಮೌಂಟಿಂಗ್ ಸ್ಟ್ರಕ್ಚರ್‌ಗಳು, ಸ್ಮಾರ್ಟ್ ಸಿಟಿ ಪೋಲ್‌ಗಳು, ಹೈ ಮಾಸ್ಟ್‌ಗಳು, ಪಾಲಿಗೋನಲ್ ಮತ್ತು ಸ್ವೇಜ್ಡ್ ಯುಟಿಲಿಟಿ ಪೋಲ್‌ಗಳು, ಗಾರ್ಡ್ ರೈಲ್‌ಗಳು, ಕೇಬಲ್ ಟ್ರೇಗಳು ಮತ್ತು ಕಸ್ಟಮೈಸ್ ಮಾಡಿದ ಕೋಲ್ಡ್-ವನೈಸ್ಡ್ ಸೇರಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts