ನ್ಯೂಸ್

11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ | Actress

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ನಟಿಮಣಿರು ಹೀಗೆ ಬಂದು ಹಾಗೆ ಹೋಗಿರುವ ಪ್ರಸಂಗಗಳೇ ಹೆಚ್ಚು ನೆನಪಿಗೆ ಬರುತ್ತದೆ. ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಪ್ರಾರಂಭದ ದಿನಗಳಲ್ಲಿ ಸತತ ಪ್ರಯತ್ನಗಳಿದ್ದರು ಅದೃಷ್ಟ ಕೈಹಿಡಿಯದೆ, ಮಾಡಿದ ಸಿನಿಮಾಗಳು ವಿಫಲವಾಗುತ್ತದೆ. ಕೆಲವರಿಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕೆಲವೇ ಸಮಯ ಸಾಕಾದರೆ, ಇನ್ನು ಕೆಲವರಿಗೆ ಹಲವು ವರ್ಷಗಳೇ ಬೇಕಾಗುತ್ತದೆ. ಒಟ್ಟಿನಲ್ಲಿ ಇದೊಂದು ರೀತಿ ಹಾವು-ಏಣಿ ಆಟವಿದ್ದಂತೆ (Actress Life).

ಜನಪ್ರಿಯತೆ ಸಿಗುತ್ತಿಲ್ಲ, ಅವಕಾಶ ಒದಗಿ ಬರ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸುವ ನಟಿಯರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿ, ಉತ್ತುಂಗದಲ್ಲಿರುವಾಗಲೇ ದಿಢೀರ್​ ಎನ್ನುವಂತೆ ಸಿನಿಮಾರಂಗದಿಂದ ದೂರ ಉಳಿದುಬಿಡುತ್ತಾರೆ. ಕೆಲವು ನಟಿಯರು ತಮ್ಮದೇ ವೈಯಕ್ತಿಕ ಕಾರಣವನ್ನು ಪರೋಕ್ಷವಾಗಿ ಹೇಳುವ ಮೂಲಕ ಕಣ್ಮರೆಯಾಗುತ್ತಾರೆ. ತಮಗೂ ಚಿತ್ರರಂಗಕ್ಕೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆ ಸಾಲಿಗೆ ಈ ಬಾಲಿವುಡ್​ ನಟಿಯೂ ಸೇರಿದ್ದಾರೆ.

ಚಿತ್ರೋದ್ಯಮ ತೊರೆದ ನಟಿ

ಉತ್ತುಂಗದಲ್ಲಿದ್ದ ಈ ನಟಿ ಬಾಲಿವುಡ್​ನ ಕಿಂಗ್​ ಖಾನ್ ಶಾರುಖ್ ಖಾನ್, ಅಜಯ್ ದೇವಗನ್, ಶಾಹಿದ್ ಕಪೂರ್ ಹೀಗೆ ಸ್ಟಾರ್​ ನಟರೊಂದಿಗೆ ನಟಿಸಿದವರು. ಹಲವಾರು ಹಿಟ್​ ಸಿನಿಮಾಗಳಲ್ಲಿ ನಟಿಸಿದ ಚೆಲುವೆ, 15 ಫ್ಲಾಪ್​ ಚಿತ್ರಗಳನ್ನು ಕೊಟ್ಟಿದ್ದು, 11 ವರ್ಷಗಳ ಅವಧಿಯಲ್ಲಿ ನಾಲ್ಕು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ತನ್ನ ಮದುವೆಗಾಗಿ ಚಿತ್ರೋದ್ಯಮವನ್ನು ತೊರೆದ ನಟಿ ಅಮೃತಾ ರಾವ್, ಅಂದಿನ ಸಮಯಕ್ಕೆ ಕೇವಲ 1.5 ಲಕ್ಷ ರೂ. ವೆಚ್ಚದಲ್ಲಿ ಮದುವೆಯಾದರು.

ಬಾಕ್ಸ್​ ಆಫೀಸ್​ನಲ್ಲಿ ವಿಫಲ

ನಟ ಆರ್ಯ ಬಬ್ಬರ್ ಜತೆಗೆ 'ಅಬ್ ಕೆ ಬರಾಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಮೃತಾ, ಈ ಚಿತ್ರದಲ್ಲಿ ಹೀನಾಯ ಸೋಲನ್ನು ಅನುಭವಿಸಿದರು. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಅಬ್ಬರಿಸಲು ವಿಫಲವಾಯಿತು. ಅಜಯ್ ದೇವಗನ್ ಜತೆಗಿನ ಆಕೆಯ ಮುಂದಿನ ಚಿತ್ರ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಕೂಡ ಫ್ಲಾಪ್ ಲಿಸ್ಟ್​ಗೆ ಸೇರಿತು.

ವಿವೇಕ್ ಒಬೆರಾಯ್ ಮತ್ತು ಅಜಯ್ ದೇವಗನ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಮಸ್ತಿ ಚಿತ್ರದ ಮೂಲಕ ನಟಿ ತನ್ನ ಮೊದಲ ಯಶಸ್ಸನ್ನು ಗಳಿಸಿದರು. ಆಕೆಯ ಮುಂದಿನ ಹಿಟ್ ಶಾರುಖ್ ಖಾನ್ ಹಾಗೂ ಸುಶ್ಮಿತಾ ಸೇನ್ ನಟಿಸಿದ ಚಿತ್ರದಲ್ಲಿ. ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆ ಅವರ ಮುಂದಿನ ನಾಲ್ಕು ಸಿನಿಮಾಗಳಾದ 'ದೀವಾರ್ – ಲೆಟ್ಸ್ ಬ್ರಿಂಗ್ ಅವರ್ ಹೀರೋಸ್ ಹೋಮ್, ವಾಹ್! ಲೈಫ್ ಹೋ ತೋ ಐಸಿ!, 'ಶಿಖರ್ ಮತ್ತು ಪ್ಯಾರೆ ಮೋಹನ್' ಬಾಕ್ಸ್​ ಆಫೀಸ್​ನಲ್ಲಿ ವಿಫಲವಾಯಿತು.

ಸನ್ನಿ ಡಿಯೋಲ್, ಸಿಂಗ್ ಸಾಬ್ ದಿ ಗ್ರೇಟ್ ಅವರೊಂದಿಗೆ ನಟಿಸಿದ ಸಿನಿಮಾಗಳು ಫ್ಲಾಪ್ ಆದ ಬೆನ್ನಲ್ಲೇ ಅಮೃತಾ ರಾವ್ ಚಿತ್ರರಂಗವನ್ನು ತೊರೆದರು. 2016ರಲ್ಲಿ ಮುಂಬೈನಲ್ಲಿ ರೇಡಿಯೋ ಜಾಕಿಯಾಗಿದ್ದ ತಮ್ಮ ಬಹುಸಮಯದ ಗೆಳೆಯ ಅನ್ಮೋಲ್ ಸೂದ್​ರನ್ನು ಮದುವೆಯಾದರು. ಚಿತ್ರರಂಗದಿಂದ ದೂರ ಉಳಿದ ಅಮೃತಾ ಈಗ ತಮ್ಮ ಪತಿ ಅನ್ಮೋಲ್ ಜತೆಗೆ 'ಕಪಲ್ ಆಫ್ ಥಿಂಗ್ಸ್' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ,(ಏಜೆನ್ಸೀಸ್).