ಮುಂಬೈ: ಸೇಫ್ಟಿ ಪಿನ್ ನುಂಗಿ ಜೀವನ್ಮರಣಗಳ ಮಧ್ಯೆ ಹೋರಾಡುತ್ತಿದ್ದ 14 ದಿನಗಳ ಶಿಶುವಿನ ಪ್ರಾಣ ಉಳಿಸಿರುವ ಮುಂಬೈನ್ ಪೊಲೀಸ್ ಕಾನ್ಸ್ಟೆಬಲ್ ಇದೀಗ ಭಾರಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನೆಲದ ಮೇಲೆ ಬಿದ್ದಿದ್ದ ಸೇಫ್ಟಿ ಪಿನ್ ಅನ್ನು ಶಿಶು ಬಾಯಲ್ಲಿ ಹಾಕಿಕೊಂಡಿದೆ. ಇದನ್ನು ಪೋಷಕರು ನೋಡುವಷ್ಟರಲ್ಲಿಯೇ ಮಗು ಅದನ್ನು ನುಂಗಿ ಬಿಟ್ಟಿದೆ. ಅದು ಗಂಟಲಲ್ಲಿ ಸಿಕ್ಕಿಕೊಂಡಿದ್ದರಿಂದಲೋ ಏನೋ, ಮಗು ಹಿಂಸೆ ಅನುಭವಿಸುತ್ತಿತ್ತು.
ಇನ್ನು ಸ್ವಲ್ಪ ಹೊತ್ತಾಗಿದ್ದರೆ ಮಗುವಿಗೆ ಉಸಿರುಗಟ್ಟಿ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ದಂಪತಿ ಆಟೊಗಾಗಿ ಕಾಯುತ್ತಿದ್ದರು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾನ್ಸ್ಟೆಬಲ್ ಎಸ್.ಕೋಲೆಕಾರ್ ಅವರು ದಂಪತಿ ದುಃಖಿಸುತ್ತಿರುವುದನ್ನು ನೋಡಿದ್ದಾರೆ.
ಇದನ್ನೂ ಓದಿ: ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ
ವಿಷಯ ತಿಳಿದ ಅವರು, ತಡ ಮಾಡದೇ ಮಗುವನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆತ ಕಾರಣ, ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಈ ಬಗ್ಗೆ ಮುಂಬೈ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಕಾನ್ಸ್ಟೆಬಲ್ ಅವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಅನುಮಾನ ಬಂದ ಕೂಡಲೇ ಹತ್ತಿರದ ಪೊಲೀಸರ ನೆರವು ಪಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಸಹಸ್ರಾರು ಕಮೆಂಟ್ಗಳು ಬಂದಿದ್ದು, ಶ್ಲಾಘನೆ ವ್ಯಕ್ತವಾಗಿದೆ.
ನುಂಗಿದ್ದ 14 ದಿನದ ಶಿಶುವನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಗುವಿನ ಪ್ರಾಣ ಕಾಪಾಡಿದ ಪೊಲೀಸ್ ಪೇದೆಯೊಬ್ಬರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.