ನ್ಯೂಸ್

ಸುಲಿಗೆಗಾಗಿ 13 ವರ್ಷದ ಬಾಲಕನ ಅಪಹರಣ; ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ| bengaluru

ಬೆಂಗಳೂರು; ಬೆಂಗಳೂರಿನ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬುಧವಾರ ನಾಪತ್ತೆಯಾಗಿದ್ದ 13 ವರ್ಷದ ಬಾಲಕನ ಸುಟ್ಟ ಶವ ಪತ್ತೆಯಾಗಿದೆ. ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಹರಿಸಲ್ಪಟ್ಟ ಒಂದು ದಿನದ ನಂತರ, ಗುರುವಾರ(31) ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ 13 ವರ್ಷದ ಬಾಲಕನ ಸುಟ್ಟ ಶವ ಪತ್ತೆಯಾಗಿದೆ.

ಬಾಲಕನ ಹುಡುಕಾಟ ನಡೆಸಿದಾಗ ಅರಕೆರೆ ಫ್ಯಾಮಿಲಿ ಪಾರ್ಕ್ ಬಳಿ ಆತನ ಸೈಕಲ್ ಪತ್ತೆಯಾಗಿತ್ತು. ಬಾಲಕನ ಬಿಡುಗಡೆಗಾಗಿ 5 ಲಕ್ಷ ರೂಪಾಯಿ ನೀಡುವಂತೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಮತ್ತು ಅಪಹರಣ ಪ್ರಕರಣ ದಾಖಲಿಸಲಾಗಿತ್ತು.

ಕ್ರೈಸ್ಟ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ನಿಶ್ಚಿತ್, ಬುಧವಾರ ಸಂಜೆ ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ಟ್ಯೂಷನ್ ತರಗತಿಗಳಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪಹರಿಸಲ್ಪಟ್ಟಿದ್ದ. ಹೆಸರಾಂತ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಆತನ ತಂದೆ, ಬಾಲಕ ನಿಗದಿತ ಸಮಯಕ್ಕೆ ಮನೆಗೆ ಬಾರದ ಕಾರಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

(ಏಜೆನ್ಸೀಸ್)

ಗುರುವಾರ ಸಂಜೆ, ನಿಶ್ಚಿತ್ ಅವರ ಮೃತದೇಹ ಕಗ್ಗಲಿಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಅವರ ಮೃತದೇಹ ತೀವ್ರವಾಗಿ ಸುಟ್ಟುಹೋಗಿ ಅಥವಾ ಸುಟ್ಟು ಕರಕಲಾಗಿ ಕಂಡುಬಂದಿದೆ. ಪಾದರಕ್ಷೆಗಳು ಮತ್ತು ಬಟ್ಟೆಗಳು ಹೆಚ್ಚಾಗಿ ಸುಟ್ಟು ಹೋಗಿರುವುದಾಗಿ ಹೇಳಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.