ನ್ಯೂಸ್

ರಣವೀರ್​​ ಸಿಂಗ್ 'ಧುರಂಧರ್' ​​ ಸಿನಿಮಾ ಸೆಟ್‌ನಲ್ಲಿ ಆಹಾರ ಸೇವಿಸಿ 120 ಜನರು ಅಸ್ವಸ್ಥ! Ranveer Singh

Ranveer Singh :  ಬಾಲಿವುಡ್​​ ನಟ ರಣವೀರ್​​ ಸಿಂಗ್​​ ಅಭಿನಯದ ಧುರಂಧರ್​​ ಸಿನಿಮಾ ಸೆಟ್​​ನಲ್ಲಿ ಆಹಾರ ಸೇವಿಸಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಧುರಂಧರ್​​ ಸಿನಿಮಾ ಚಿತ್ರೀಕರಣ ಲಡಾಖ್​​ನ ಲೇಹ್​ ಜಿಲ್ಲೆಯಲ್ಲಿ ನಡೆಯುತ್ತಿದೆ. ಶೂಟಿಂಗ್​​ ಸೆಟ್​ನಲ್ಲಿ 600ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇವರೆಲ್ಲೂ ಅದೇ ಊಟವನ್ನು ಸೇವಿಸಿದ್ದಾರೆ. ಆದರೆ ಊಟ ಮಾಡಿದ ಕೂಡಲೇ ಕೆಲವರು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರೆಲ್ಲರನ್ನೂ ತಕ್ಷಣ ಹತ್ತಿರದ ಆಸಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತ್ತು.

ಈ ಘಟನೆ ಹಿನ್ನೆಲೆ ಆಹಾರಾದ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯಿಂದ ಯಾವುದೇ ಜೀವಹಾನಿಯಾಗಿಲ್ಲ. ಸುಮಾರು 600 ಜನರು ಇದೇ ಊಟ ಮಾಡಿದ್ದಾರೆ. ಆದರೆ 120 ಜನರು ಅಸ್ವಸ್ಥರಾಗಿದ್ದಾರೆ. ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಒಂದು ಸ್ಪೈ, ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಡಿಸೆಂಬರ್ 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರವು 1970-80 ರ ದಶಕದಲ್ಲಿ ಭಾರತೀಯ ಗುಪ್ತಚರ ಸಂಸ್ಥೆ (RAW) ನಡೆಸಿದ ನಿಜ ಜೀವನದ ರಹಸ್ಯ ಕಾರ್ಯಾಚರಣೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ರಣವೀರ್ ಸಿಂಗ್ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಮೊದಲ ನೋಟದ ಟೀಸರ್ ಅನ್ನು ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು (ಜುಲೈ 6, 2025) ಬಿಡುಗಡೆ ಮಾಡಲಾಯಿತು. ಈ ಟೀಸರ್ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.