Book launched : ಹುಟ್ಟಿನಿಂದ 3 ವರ್ಷದ ಮಕ್ಕಳ ಪೋಷಕತ್ವದ ಬಗ್ಗೆ ಮಾಹಿತಿ ನೀಡುವ '1000 ಡೇಸ್ ದಟ್ ಶೇಪ್ ಎ ಲೈಫ್‌ಟೈಮ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಮುಂಬೈನ ಬಾಂದ್ರಾದಲ್ಲಿರುವ ನಟಿ ಮಲೈಕಾ ಅರೋರ ಅವರ ರೆಸ್ಟೋರೆಂಟ್ನ ಸ್ಕಾರ್ಲೆಟ್ ಹೌಸ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಗೌರವ ಅಥಿತಿಯಾಗಿ ನಿವೃತ್ತ ಐಪಿಎಸ್ ಅಧಿಕಾರಿ ನವಾಬ್ ಫಕೀರುಲ್ ಹಕ್ ಭಾಗವಹಿಸಿದ್ದರು.
ಇದನ್ನೂ ಓದಿ:ನೀರಾ ಇಳಿಕೆ ಪ್ರಕ್ರಿಯೆಗೆ ಹಿನ್ನಡೆ
ಈ ಪುಸ್ತಕವನ್ನು ಹಿರಿಯ ಮಕ್ಕಳ ಮನಶಾಸ್ತ್ರಜ್ಞೆ ಸೈದಾ ಫರ್ಹೀನ್ ಅಲಂ ಹಕ್ ಅವರು ಬರೆದಿದ್ದಾರೆ. ಚಿಕ್ಕ ಮಕ್ಕಳ ಬೆಳವಣಿಗೆಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಪುಸ್ತಕ ರಚನೆ ಮಾಡಲಾಗಿದೆ. ಈ ಪುಸ್ತಕವು ಮಕ್ಕಳ ದೈಹಿಕ, ಭಾವನಾತ್ಮಕ, ಸರಳ ಸಾಮಾಜಿಕ ಬೆಳವಣಿಗೆ, ಅರಿವು ಹಾಗೂ ಪ್ರಾಯೋಗಿಕ ತಂತ್ರಗಳನ್ನು ಒಳಗೊಂಡಿದೆ. ಇದು ಮಗುವಿನ ಆರಂಭಿಕ ವರ್ಷಗಳನ್ನು ಅತ್ಮವಿಶ್ವಾಸದಿಂದ ರೂಪಿಸಲು ಪೋಷಕರಿಗೆ ಸಹಾಯ ಮಾಡಲು ಒಂದು ತಂತ್ರವಾಗಿದ್ದು, ಮಕ್ಕಳ ಬೆಳವಣಿಗೆಗೆ ಸೂಕ್ತವಾದ ಸಾಧನವಾಗಿ ಪರಿಚಯವಾಗುತ್ತಿದೆ.
ಇದನ್ನೂ ಓದಿ:ಒಂದೇ ತಪ್ಪಿನಿಂದ ನಟಿಯ ವೃತ್ತಿಜೀವನ ಹಾಳು! 45 ವರ್ಷದ ನಟಿ ಮದುವೆಯಾಗದೆ ಒಂಟಿಯಾಗಿ ವಾಸಿಸುತ್ತಿದ್ದಾರೆ..Gracy Singh
'1000 ಡೇಸ್ ದಟ್ ಶೇಪ್ ಎ ಲೈಫ್‌ಟೈಮ್' ಪುಸ್ತಕವು ಜಾಗತಿಕವಾಗಿ ಪ್ರಚಾರವಾಗಲಿದ್ದು, ಯುಕೆ, ಯುಎಸ್, ಜರ್ಮನಿ, ಆಸ್ಟ್ರೇಲಿಯ, ಸ್ಪೇನ್ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಈ ಪುಸ್ತಕ ಸಿಗಲಿದೆ. ಇನ್ನು ಭಾರತದಲ್ಲಿ ಫ್ಲಿಪ್ಕಾರ್ಟ್ನಂತಹ ಆ್ಯಪ್ಗಳಲ್ಲಿ ಈ ಪುಸ್ತಕ ದೊರೆಯಲಿದ್ದು, ಬೇರೆ ದೇಶಗಳಲ್ಲಿ ಅಮೆಜಾನ್ ಮೂಲಕ ದೊರೆಯುತ್ತದೆ.
ಬಾಲ್ಯದ ಅನುಭವವನ್ನು ಅನುಸರಿಸಲು, ಆಧುನಿಕ ಪೋಷಕರಿಗೆ ಈ ಪುಸ್ತಕವು ವಿಶ್ವಾಸಾರ್ಹ ಒಡನಾಡಿಯಾಗಲು ಸಜ್ಜಾಗಿದೆ. (ಏಜೆನ್ಸೀಸ್)