ನ್ಯೂಸ್

ಅಳಿವಿಂಚಿನಲ್ಲಿರುವ 100 ವರ್ಷದ ದೈತ್ಯ ಜೋಡಿ ಅಮೆಗೆ 4 ಮರಿಗಳ ಜನನ! ಏನಿದು ಅಚ್ಚರಿ ಸಂಗತಿ; ಇಲ್ಲಿದೆ ಮಾಹಿತಿ.. | Turtle Couple

Turtle Couple : ಜಗತ್ತಿನಲ್ಲೇಡೆ ಸಾಮಾನ್ಯವಾಗಿ ಪ್ರಾಣಿ, ಪಕ್ಷಿ ಸೇರಿದಂತೆ ಮನುಷ್ಯರಿಗೆ ಸಮಯಕ್ಕೆ ಸರಿಯಾಗ ಗರ್ಭವಸ್ಥೆಯಾಗಿ ಮಗು ಜನಿಸುವುದು ಪ್ರಕೃತಿ ನಿಯಮ. ಇದಲ್ಲದೆ, ಪ್ರಕೃತಿ ನಿಯಮದ ವಿರುದ್ಧವಾಗಿ ಕೂಡ ಅನೇಕ ಚಿತ್ರ-ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಇದೀಗ ವಿಚಿತ್ರವಲ್ಲಾದರೂ ಅಚ್ಚರಿ ಎಂಬಂತೆ ಅಳಿವಿನಂಚಿನಲ್ಲಿರುವ 100 ವರ್ಷದ ಆಮೆಗೆ ನಾಲ್ಕು ಮರಿಗಳ ಜನನವಾಗಿದೆ.

ಹೌದು, ಫಿಲ್ಡೆಲ್ಫಿಯಾದ ಮೃಗಾಲಯವೊಂದರಲ್ಲಿ 100 ವರ್ಷದ ದೈತ್ಯ ಆಮೆಗಳ ಜೋಡಿಗೆ ನಾಲ್ಕು ಮರಿಗಳ ಜನನವಾಗಿದ್ದು, ಇದೇ ಮೊದಲ ಬಾರಿಗೆ ಈ ಜೋಡಿ ಆಮೆಗಳು ತಂದೆ-ತಾಯಿಗಳಾಗಿದ್ದಾರೆ. ಪಶ್ಚಿಮ ಸಾಂತಾ ಕ್ರೂಜ್ ಗ್ಯಾಲಪಗೋಸ್ ಆಮೆಗಳ ಜೋಡಿಯಾದ ಅಬ್ರಾಝೊ ಮತ್ತು ಮಮ್ಮಿಯಿಂದ ನಾಲ್ಕು ಮರಿಗಳ ಆಗಮನದಿಂದ ಮೃಗಾಲಯದಲ್ಲಿ ಸಂತೋಷದ ವಾತಾವರಣ ಮೂಡಿದೆ. ಇನ್ನು ವಿಶೇಷವೆನೆಂದರೆ 1932 ರಲ್ಲಿ ಆಗಮಿಸಿದ ಮಮ್ಮಿ - ತನ್ನ ಜಾತಿಯ ಅತ್ಯಂತ ಹಳೆಯ ಮೊದಲ ಬಾರಿಗೆ ತಾಯಿಯಾಗಿದ್ದಾಳೆ.

ಅಬ್ರಾಝೊ ಮತ್ತು ಮಾಮ್ಮಿಯ ಇದೇ ವರ್ಷದ ಫೆ.27 ರಂದು ಮೊದಲ ಮೊಟ್ಟೆಗಳು ಮರಿಯಾಗಿದ್ದು, ಇದೀಗ ಮತ್ತೆ ಎರಡು ಮೊಟ್ಟೆಗಳಲ್ಲಿ ಮರಿಗಳಾಗುವ ಮೂಲಕ ನಾಲ್ಕು ಮರಿಗಳ ಜನನವಾಗಿದೆ. ಇನ್ನೂ ಮೃಗಾಲಯದ ಪ್ರಾಣಿ ರಕ್ಷಣಾ ತಂಡವು ಮುಂಬರುವ ವಾರಗಳಲ್ಲಿ ಮರಿಯಾಗಬಹುದಾದ ಇತರ ಮೊಟ್ಟೆಗಳ ಮೇಲೆ ನಿಗಾ ಇಟ್ಟಿದ್ದು, ಇನಷ್ಟು ಜೋಡಿ ಮರಿಗಳ ಜನನಕ್ಕೆ ಕಾಯುತ್ತಿದ್ದಾರೆ.

ನಾಲ್ಕು ಮರಿಗಳು 70 ರಿಂದ 80 ಗ್ರಾಂ ತೂಕವಿರುತ್ತವೆ. ಅವುಗಳನ್ನು ಫಿಲಡೆಲ್ಫಿಯಾ ಮೃಗಾಲಯದ ಸರೀಸೃಪ ಮತ್ತು ಉಭಯಚರಗಳ ಮನೆಯೊಳಗೆ ತೆರೆಮರೆಯಲ್ಲಿ ಇರಿಸಲಾಗುತ್ತಿದೆ ಎಂದು ಮೃಗಾಲಯ ತಿಳಿಸಿದೆ.

ಇದು ಫಿಲಡೆಲ್ಫಿಯಾ ಮೃಗಾಲಯದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು, ಮತ್ತು ಈ ಸುದ್ದಿಯನ್ನು ನಮ್ಮ ನಗರ, ಪ್ರದೇಶ ಮತ್ತು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಮೃಗಾಲಯದ ಅಧ್ಯಕ್ಷ ಮತ್ತು ಸಿಇಒ ಜೋ-ಎಲ್ಲೆ ಮೊಗರ್ಮನ್ ತಿಳಿಸಿದ್ದಾರೆ.(ಏಜೆನ್ಸೀಸ್​)