ಜಮ್ಮು ಮತ್ತು ಕಾಶ್ಮೀರ: ಜಮ್ಮು ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ನ.27 ರಂದು ನಡೆಸಿದ ಭಾರೀ ಸೇನಾ ಕಾರ್ಯಚಾರಣೆಯಲ್ಲಿ ವಿವಿಧ ಭಯೋತ್ಪಾದಕ(Terrorism) ಗುಂಪುಗಳಿಗೆ ಸಹಾಯ ಮಾಡುತ್ತಿದ್ದ 10 ಓವರ್ ಗ್ರೌಂಡ್ ವರ್ಕರ್ಸ್(OGWs) ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಥುವಾ ಜಿಲ್ಲೆಯ ಮಲ್ಹಾರ್, ಬಿಲ್ಲವರ್, ಕನಾ ಚೌಕ್, ಹರಿಯಾ, ಸೋರಕ್ ಪೇನ್ ಮತ್ತು ವಾಜೀರ್ ಸೇರಿದಂತೆ 17 ವಿವಿಧ ಪ್ರದೇಶಗಳಲ್ಲಿ ಸೇನಾ ಕಾರ್ಯಚಾರಣೆ ನಡೆಸಲಾಗಿದೆ.
ಇನ್ನು ಮಲ್ಹಾರ್, ಬಿಲ್ಲವರ್ ಮತ್ತು ಬನಿ ಪ್ರದೇಶಗಳ ವ್ಯಾಪ್ತಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆಯುವ ಕುರಿತು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ನಿಟ್ಟಿನಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 10 ಮಂದಿ ಭಯೋತ್ಪಾದನ ಸಹಚರರನ್ನು ಬಂಧಿಸಲಾಗಿದೆ. ಅಲ್ಲದೆ, ಶೋಧದಲ್ಲಿ ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ, ಜೈಶ್-ಎ-ಮುಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಯೋಜಿತವಾದ ಮೂವರು ವಿದೇಶಿ ಭಯೋತ್ಪಾದಕನ್ನು ಕಥುವಾ ಜಿಲ್ಲೆಯ ಭದ್ರತಾ ಪಡೆಗಳಿಂದ ಎರಡು ವಿಭಿನ್ನ ಎನ್‌ಕೌಂಟರ್‌ಗಳಲ್ಲಿ ಮತ್ತು ಉಧಮ್‌ಪುರದ ಬಸಂತ್‌ಗಢದ ಅಂಚಿನಲ್ಲಿ ಶೂಟ್ ಮಾಡಿ ಹೊಡೆದುರುಳಿಸಿದ್ದರು.
ಪೂಂಚ್ ರಜೌರಿ, ಉಧಂಪುರ್ ಮತ್ತು ರಿಯಾಸಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 56 ಕ್ಕೂ ಹೆಚ್ಚು ದಾಳಿಗಳನ್ನು ನಡೆಸುವ ಮೂಲಕ ಜೆಎಂ ಮತ್ತು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಗೆ ಸಂಬಂಧಿಸಿರುವ ಭಯೋತ್ಪಾದಕ ಜಾಲಗಳ ಮೇಲೆ ದಮನವನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).