ನ್ಯೂಸ್

ಹಾಸ್ಟೆಲ್​ ಬಾತ್‌ರೂಮ್‌ಗೆ ಹೋದ ಯುವತಿಯರಿಗೆ ಶಾಕ್; 10 ಅಡಿಯ ಹೆಬ್ಬಾವು ಪತ್ತೆ, ಮುಂದೇನಾಯ್ತು?.. Madhya Pradesh

  • ಮಧ್ಯಪ್ರದೇಶದ ಸಾಗರ ನಗರದ ಟಿಲಿ ಪ್ರದೇಶದ ಹಾಸ್ಟೆಲ್​ನಲ್ಲಿ ಹೆಬ್ಬಾವು ಪತ್ತೆ

  • 10 ಅಡಿ ಹೆಬ್ಬಾವು ಹಿಡಿದು ರಕ್ಷಿಸಿದ ಉರಗ ರಕ್ಷಕ ಅಕೀಲ್ ಬಾಬಾ

  • 70 ರಿಂದ 75 ಹೆಬ್ಬಾವುಗಳನ್ನು ರಕ್ಷಿಸಿರುವ ಉರಗ ತಜ್ಞಅಕೀಲ್ ಬಾಬಾ

ಭೋಪಾಲ್: ಮಧ್ಯಪ್ರದೇಶದ ಸಾಗರ ನಗರದ ಟೆಲಿ ಪ್ರದೇಶದಲ್ಲಿ ಭೀತಿ ಹುಟ್ಟಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಯುವತಿಯರ ಹಾಸ್ಟೆಲ್​ನ ಬಾತ್​ರೂಂನಲ್ಲಿ ಹೆಬ್ಬಾವು ಪತ್ತೆಯಾಗಿದ್ದು, ಅಘಾತಕ್ಕೊಳಗಾದ ವಿದ್ಯಾರ್ಥಿನಿಯರು ಹಾಸ್ಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ಆಡಳಿತ ಮಂಡಳಿ ಕೂಡಲೇ ಸ್ಥಳಕ್ಕೆ ಉರಗ ರಕ್ಷಕ ಅಕೀಲ್ ಬಾಬಾ ಅವರನ್ನು ಕರೆಸಲಾಗಿದ್ದು, ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೆಬ್ಬಾವನ್ನು ಸದ್ಯ ಕಾಡಿಗೆ ಬಿಡಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

ಹೆಬ್ಬಾವು ರಕ್ಷಣಾ ಕಾರ್ಯದ ಸಮಯದಲ್ಲಿ ಸ್ಥಳದಲ್ಲಿ ಜನಸಮೂಹ ಜಮಾಯಿಸಿತ್ತು. ವಿದ್ಯಾರ್ಥಿಗಳು 10 ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಅಕೀಲ್​ ಬಾಬಾನನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಕಿರುಚಾಡಿದರು. ಹೆಬ್ಬಾವನ್ನು ಹಾಸ್ಟೆಲ್​ನಿಂದ ಕೊಂಡೊಯ್ದ ನಂತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಮಳೆ ಹಿನ್ನೆಲೆ ವಸತಿ ಪ್ರದೇಶಕ್ಕೆ ಬರುತ್ತವೆ

ಅಕೀಲ್ ಬಾಬಾ ಈ ಪ್ರದೇಶದಿಂದ ಇದುವರೆಗೆ ಸುಮಾರು 70 ರಿಂದ 75 ಹೆಬ್ಬಾವುಗಳನ್ನು ರಕ್ಷಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಪ್ರಸ್ತುತ ಸಿಕ್ಕಿರುವ ಈ ಹೆಬ್ಬಾವನ್ನು ಸಹ ಕಾಡಿಗೆ ಬಿಡಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ChatGPTಗೂ 'ಸರ್' ಎಂದ 77 ವರ್ಷದ ಅಜ್ಜ; ಈ ವಿನಯತೆಗೆ ಭವಿಷ್ಯದಲ್ಲಿ AI ಸಹಾಯ ಮಾಡ್ಬಹುದು ಎಂದ ನೆಟ್ಟಿಗರು

ಹಾವು ಸೆರೆಹಿಡಿದ ಅಕೀಲ್ ಬಾಬಾ ಪ್ರಕಾರ, ವಿದ್ಯಾರ್ಥಿಗಳು ಎಂದಿನಂತೆ ಮುಂಜಾನೆ ಸ್ನಾನಕ್ಕೆ ತೆರಳಿದಾಗ ಹೆಬ್ಬಾವನ್ನು ನೋಡಿದರು. ಹೆಬ್ಬಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ರಕ್ಷಿಸಲಾಯಿತು. ಸಕಾಲಕ್ಕೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದರು

ಟೆಲಿ ಪ್ರದೇಶವು ಗುಡ್ಡಗಾಡುಗಳಿಗೆ ಹೊಂದಿಕೊಂಡಿದೆ. ಆ ಕಾರಣದಿಂದಾಗಿ, ಮಳೆಗಾಲದಲ್ಲಿ ಸುರಕ್ಷಿತ ಆಶ್ರಯ ರಕ್ಷಣೆಗಾಗಿ ಹಾವುಗಳು ವಸತಿ ಪ್ರದೇಶಗಳಿಗೆ ಬರುವುದು ಸಾಮಾನ್ಯ ಎಂದು ಉರಗ ರಕ್ಷಕ ವಿದ್ಯಾರ್ಥಿನಿಯರಿಗೆ ಹೇಳಿದ್ದಾರೆ.

ವಸತಿ ಪ್ರದೇಶಗಳಲ್ಲಿ ಅಥವಾ ಹಾಸ್ಟೆಲ್‌ಗಳಲ್ಲಿ ಹಾವುಗಳು ಕಂಡುಬಂದಾಗ ಯಾರೂ ಸ್ವತಃ ಹಿಡಿಯಲು ಹೋಗಬಾರದು ಅಥವಾ ಕೊಲ್ಲಬಾರದು, ತಕ್ಷಣವೇ ನುರಿತ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಮಧ್ಯಪ್ರದೇಶದ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡಿದೆ ಎನ್ನಲಾಗಿದೆ, (ಏಜೆನ್ಸೀಸ್).