ChatGPTಗೂ 'ಸರ್' ಎಂದ 77 ವರ್ಷದ ಅಜ್ಜ; ಈ ವಿನಯತೆಗೆ ಭವಿಷ್ಯದಲ್ಲಿ AI ಸಹಾಯ ಮಾಡ್ಬಹುದು ಎಂದ ನೆಟ್ಟಿಗರು

ChatGPTಗೂ 'ಸರ್' ಎಂದ 77 ವರ್ಷದ ಅಜ್ಜ;   ಈ ವಿನಯತೆಗೆ ಭವಿಷ್ಯದಲ್ಲಿ AI ಸಹಾಯ ಮಾಡ್ಬಹುದು ಎಂದ ನೆಟ್ಟಿಗರು
Published on: 
  • ಚಾಟ್​ ಜಿಪಿಟಿಗೆ ಸರ್ ಎಂದು ಕರೆದು ವೈರಲ್ ಆದ 77 ವರ್ಷದ ಅಜ್ಜ

  • ಅಜ್ಜನ ವಿನಯತೆಗೆ ಫಿದಾ ಆದ ನೆಟ್ಟಿಗರು, ನಿಮ್ಮಿಂದ ಕಲಿಯಬೇಕು ಎಂದು ಮೆಚ್ಚುಗೆ

  • ಎಐ ಟರ್ಮಿನೇಟರ್‌ಗಳು ಮನುಷ್ಯರನ್ನು ಕೊಲ್ಲುವಾಗ ಇವರ ಮೇಲೆ ದಯೆ ತೋರಿಸುತ್ತೆ ಎಂದು ತಮಾಷೆ

ಇತ್ತೀಚೆಗೆ ಚಾಟ್​ ಜಿಪಿಟಿ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಮಾರ್ಪಾಡಾಗಿದೆ. ಯಾವುದೇ ಸಂಶಯ, ಪ್ರಶ್ನೆಗಳಿದ್ದರೂ ಸಹ ಅದನ್ನು ಕೇಳಿ ಮುಂದೇನು ಮಾಡಬೇಕು ಎನ್ನುವುದಕ್ಕೆ ಮುಂದಾಗುತ್ತೇವೆ. ಚಾಟ್​ ಜಿಪಿಟಿ ಮನುಷ್ಯನಲ್ಲದ ಕಾರಣ, ಗೌರವಪೂರ್ವಕವಾಗಿ ನಡೆಸಿಕೊಳ್ಳೋದು ಇಲ್ಲ. ಆದರೆ ಇಲ್ಲೊಬ್ಬ ಹಿರಿಯ ಜೀವ ಅದನ್ನು 'ಸರ್​' ಎಂದು ಸಂಬೋಧಿಸಿ ನೆಟ್ಟಿಗರ ಮನ ಗೆದ್ದಿದ್ದಾರೆ.

@theteknosaur ಎಂಬುವವರು ಹಂಚಿಕೊಂಡ ಪೋಸ್ಟ್​ ಪ್ರಕಾರ, ಭಾರತೀಯ ವೃದ್ಧರೊಬ್ಬರು ವಿಮಾನದಲ್ಲಿ ಕುಳಿತು , ChatGPT ಬಳಸಿ ಲಂಬ ಕೃಷಿ ವ್ಯವಹಾರದ ವಿಚಾರಗಳ ಬಗ್ಗೆ ಪ್ರಶ್ನೆ ಕೇಳುತ್ತಾ ಅದನ್ನು ಗೌರವಯುತವಾಗಿ “ಸರ್” ಎಂದು ಕರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ಪೋಸ್ಟ್​ ವೈರಲ್​ ಆಗುತ್ತಲೇ ಎಐ ಜೊತೆ ಚಾಟ್​​ ಮಾಡಿದ ವಿಬಿಆರ್ ಪ್ರಸಾದ್ ಎಂಬುವವರೇ ಖುದ್ದಾಗಿ ರೆಸ್ಪಾನ್ಸ್​ ಮಾಡಿದ್ದಾರೆ.

@theteknosaur ಪೋಸ್ಟ್​ನಲ್ಲಿ ಏನಿದೆ

ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ 77 ವರ್ಷದ ವೃದ್ಧರೊಬ್ಬರು, ಕೃಷಿ ವ್ಯವಹಾರದ ಬಗ್ಗೆ ಯೋಜನೆ ರೂಪಿಸುವ ಬಗ್ಗೆ ಚಾಟ್​ ಜಿಪಿಟಿ ಜೊತೆಗೆ ಮಾತನಾಡುತ್ತಿದ್ದರು. ನಂಗೆ ಅಚ್ಚರಿ ಎನಿಸಿದ್ದು, ಅವರು ಎಐಗೆ ಸರ್​ ಎಂಬ ಪದ ಬಳಸಿ ಅಷ್ಟು ಗೌರವ ನೀಡಿದ್ದು. ಇಡೀ ಪ್ರಯಾಣದಲ್ಲಿ ಜೊತೆಗಿದ್ದೆವು. ನಾವೀಗ ಸ್ನೇಹಿತರು ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದ ಮೆಚ್ಚುಗೆ

ಹಲೋ ಅಂಕಲ್, ನಿಮ್ಮ ಈ ಸಭ್ಯತೆಗೆ ಧನ್ಯವಾದ ಇದೊಂದು ಸ್ಪೂರ್ತಿದಾಯಕ ವಿಚಾರ ಎಂದು ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ. ನಮ್ಮಲ್ಲಿ ಅನೇಕರು AI ಚಾಟ್‌ಬಾಟ್‌ಗಳಿಗೆ ನಿರ್ದೇಶನ ನೀಡುವಾಗ "ದಯವಿಟ್ಟು" ಅಥವಾ "ಧನ್ಯವಾದಗಳು" ಎಂದು ಸಹ ಬಳಸುವುದಿಲ್ಲ. ನೀವು “ಸರ್” ಎಂದು ಕರೆದಿದ್ದು ಅದ್ಭುತ ಮಾರ್ಗದರ್ಶನ ಕೊಟ್ಟಂತಾಗಿದೆ ಎಂದಿದ್ದಾರೆ.

ವಿಬಿಆರ್ ಪ್ರಸಾದ್ ಹೇಳಿದ್ದಿಷ್ಟು

ಓ, ಕೆಲವು ಅದ್ಭುತ ಪ್ರತಿಕ್ರಿಯೆಗಳನ್ನು ಓದಿ ನನಗೆ ತುಂಬಾ ಖುಷಿಯಾಗಿದೆ. ಹೌದು, ಶ್ರೀ ಸ್ನೇಹನ್ ಅವರು ನನ್ನನ್ನು ಈ ಜನಪ್ರಿಯತೆಗೆ ತಂದಿದ್ದಕ್ಕಾಗಿ ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ. ಯಾರೋ ಹೇಳಿದರು ಭಾರತೀಯರು 'ಹೌದು' ಎಂಬುದಕ್ಕೆ ಮದುವೆಯಾಗಿದ್ದಾರೆ ಅಂತ. ನಿಜ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಮ್ಮ ಜೀವನವನ್ನು ಉತ್ತಮಗೊಳಿಸಲು AI ಅನ್ನು ಬಳಸುವುದು ಎಲ್ಲವೂ ನಮ್ಮ ಕೈಯಲ್ಲಿದೆ. ನಮ್ಮ ಜೀವನದ ಉತ್ತಮತೆಗಾಗಿ AI ಅನ್ನು ಬಳಸುವುದು ನಮ್ಮೆಲ್ಲರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಕೆಲವರಿಂದ ತಮಾಷೆ ವ್ಯಕ್ತ

ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ, ಮುಂದೆ ನಮಗೆ ಎಐ ಟರ್ಮಿನೇಟರ್‌ಗಳು ಮನುಷ್ಯರನ್ನು ಕೊಲ್ಲಲು ಬಂದಾಗ, ಎಐಗೆ ಇವರ ಮೇಲಿನ ವಿನಯತೆ ಕಂಡು ಬದುಕುಳಿಯುವಂತೆ ಮಾಡುತ್ತದೆ ಎಂದು ಭವಿಷ್ಯ ನುಡಿದರು.

ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಈ ಕುರಿತು ಪ್ರತಿಕ್ರಿಯಿಸುತ್ತಾ, 'ಸ್ಮಾರ್ಟ್‌ಫೋನ್ ಯುವಕರಿಗೆ ಒಂದು ಆಯ್ಕೆಯಾಗಿರಬಹುದು. ಆದರೆ ವೃದ್ಧರಿಗೆ ಅದೊಂದು ಆಸರೆ. ಅವರು ಏಕಾಂಗಿಯಾಗಿರುವಾಗ ಒಡನಾಡಿಯಾಗುತ್ತದೆ. ಕುಟುಂಬ, ಸ್ನೇಹಿತರು, ಸುದ್ದಿಗಳು, ನೆನಪುಗಳು ಮತ್ತು ಹೊರಗಿನ ಜಗತ್ತಿಗೆ ಒಂದು ಕಿಟಕಿಯಾಗಿದೆ. ಬಹುಶಃ ಹಿರಿಯರಿಗೆ ಸ್ಮಾರ್ಟ್‌ಫೋನ್‌ನ ಅಗತ್ಯವಿರುವಷ್ಟು ಬೇರೆ ಯಾವುದೇ ಪೀಳಿಗೆಗೆ ಅದರ ಅವಶ್ಯಕತೆ ಇಲ್ಲದಿರಬಹುದು' ಎಂದಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net