ನ್ಯೂಸ್

ಇರ್ಫಾನ್​ ಖಾನ್ ಯಾಕೆ ಅತ್ಯುತ್ತಮ ನಟ ಎಂಬುದಕ್ಕೆ ಇಲ್ಲಿವೆ ಅವರ ಪ್ರಮುಖ 10 ಸಿನಿಮಾಗಳು

ಬಾಲಿವುಡ್​ ನಟ ಇರ್ಫಾನ್ ಖಾನ್​ ಬುಧವಾರ ನಿಧನರಾಗಿದ್ದಾರೆ. ಆದರೆ, ಸಿನಿಮಾ ಕರಿಯರ್​ನಲ್ಲಿನ ಅವರ ಒಂದೊಂದು ಸಿನಿಮಾ ಕೃಷಿ ಅವರಿನ್ನೂ ಬದುಕಿದ್ದಾರೆ ಎನ್ನುತ್ತವೆ. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳು, ಪ್ರಯೋಗಗಳಿಗೆ ಹೆಸರಾದವರು ಇರ್ಫಾನ್​. 1988ರಲ್ಲಿ ‘ಸಲಾಮ್​ ಬಾಂಬೆ’ ಸಿನಿಮಾ ಮೂಲಕ ಬಾಲಿವುಡ್​ ಕದ ತಟ್ಟಿದ್ದ ಇರ್ಫಾನ್​, ಪಾತ್ರಗಳ ಮೂಲಕವೇ ಗುರುತಿಸಿಕೊಂಡರು. ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಬಾಚಿಕೊಂಡರು. ಕೇವಲ ಬಾಲಿವುಡ್​ಗೆ ಸೀಮಿತವಾಗದೆ, ಹಾಲಿವುಡ್​ ಸಹ ಕಂಡು ಬಂದರು.
ಅದೇ ರೀತಿ ಪೋಷಕ ಪಾತ್ರ ನಿಭಾಯಿಸುವ ವಯಸ್ಸಲ್ಲಿ ನಾಯಕನಾಗ ತೆರೆಮೇಲೆ ಕಾಣಿಸಿಕೊಂಡು, ತಮ್ಮದೆ ಮ್ಯಾನರಿಸಂನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹಾಗಾದರೆ, ಇರ್ಫಾನ್​ ಕರಿಯರ್​ನಲ್ಲಿ ಬೆಸ್ಟ್​ ಸಿನಿಮಾಗಳು ಯಾವವು ಎಂಬುದನ್ನು ನೋಡಲು ಹೋದರೆ, ‘ಪಾನ್​ ಸಿಂಗ್​ ಥೋಮರ್’​, ’ಲಂಚ್​ ಬಾಕ್ಸ್’, ‘ತಲ್ವಾರ್’, ​ ‘ಮುಕಾಬುಲಾ’, ‘ಪಿಕು’, ‘ಬ್ಲ್ಯಾಕ್​ಮೇಲ್​’, ‘ಹಿಂದಿ ಮಿಡಿಯಂ’, ‘ಸ್ಲಂ ಡಾಗ್ ಮಿಲೇನಿಯರ್’, ‘ಲೈಫ್​ ಆಫ್​ ಪೈ’, ‘ಹಾಸಿಲ್’​, ‘ಹೈದರ್’ ಸಿನಿಮಾಗಳು ಪ್ರಮುಖವಾಗಿ ಕಾಣಸಿಗುತ್ತವೆ. ​(ಏಜೆನ್ಸೀಸ್​)