ಸಾಂದರ್ಭಿಕ ಚಿತ್ರ 
ನ್ಯೂಸ್

ಜಗತ್ತಿನಲ್ಲಿನ ಕೋವಿಡ್‌ ಸಾವುಗಳ ಪೈಕಿ ಕಾಲುಭಾಗದಷ್ಟು ಇಲ್ಲೇ ಆಗಿವೆ!: ಸಮೀಕ್ಷೆಯೊಂದರಿಂದ ಬಹಿರಂಗ

ನವದೆಹಲಿ: ಜಗತ್ತಿನಾದ್ಯಂತ ಕೋವಿಡ್‌-19 ವೈರಸ್‌ ಹಾವಳಿ ಇಟ್ಟಿದ್ದು, ಜನರು ಸೋಂಕಿಗೆ ಒಳಗಾಗಿ ಸಂಕಷ್ಟ ಪಡುತ್ತಿರುವುದಷ್ಟೇ ಅಲ್ಲದೆ ಹಲವಾರು ಮಂದಿ ಸೋಂಕಿನಿಂದಾಗಿ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸೋಂಕಿನೊಂದಿಗೆ ಸೋಂಕಿನಿಂದಾದ ಸಾವಿನ ಪ್ರಮಾಣ ಕೂಡ ತೀವ್ರಗತಿಯಲ್ಲಿ ಏರುತ್ತಿದೆ. ಈ ಮಧ್ಯೆ ಕಳೆದ ವಾರದ ಮಟ್ಟಿಗೆ ಜಗತ್ತಿನಲ್ಲಿ ಸಂಭವಿಸಿದ ಕೋವಿಡ್‌ ಸಾವುಗಳ ಪೈಕಿ ಕಾಲುಭಾಗದಷ್ಟು ಸಾವಿನ ಪ್ರಕರಣಗಳು ಈ ದೇಶವೊಂದರಲ್ಲೇ ಆಗಿವೆ!

ಪ್ಯಾನ್‌ ಅಮೆರಿಕನ್‌ ಹೆಲ್ತ್‌ ಆರ್ಗನೈಸೇಷನ್‌ (ಪಿಎಎಚ್‌ಒ) ಎಂಬ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದ್ದ, ಅದರಲ್ಲಿ ಕಂಡುಬಂದಿರುವ ಈ ಅಂಶವನ್ನು ಪಿಎಎಚ್‌ಒ ನಿರ್ದೇಶಕಿ ಕ್ಯಾರಿಸಾ ಇಟಿಯನ್ನೆ ತಿಳಿಸಿದ್ದಾರೆ. ಅಮೆರಿಕದಲ್ಲಿ ಕಳೆದ ಕೆಲವು ದಿನಗಳಲ್ಲಿ ಕೋವಿಡ್-‌19 ಕಗ್ಗಂಟಿನ ಪರಿಸ್ಥಿತಿ ಕೈಮೀರಿ ಹೋಗಿದ್ದು, ದೊಡ್ಡ ಪ್ರಮಾಣದಲ್ಲೇ ಸೋಂಕಿತರ ಸಾವು ಸಂಭವಿಸಿದೆ. ಅದರಲ್ಲೂ ಕಳೆದೊಂದು ವಾರದಲ್ಲಿ ಜಗತ್ತಿನಲ್ಲಿ ಸಂಭವಿಸಿದ ಕೋವಿಡ್‌-19 ಸಾವುಗಳ ಪೈಕಿ ಕಾಲುಭಾಗದಷ್ಟು ಸಾವಿನ ಪ್ರಕರಣಗಳು ಅಮೆರಿಕದಲ್ಲೇ ಸಂಭವಿಸಿವೆ. ಅಂದರೆ ಜಾಗತಿಕ ಪ್ರತಿ ನಾಲ್ಕು ಸಾವುಗಳ ಪೈಕಿ ಒಂದು ಅಮೆರಿಕದಲ್ಲಿ ಸಂಭವಿಸಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ಕರೊನಾ ಎರಡನೇ ಅಲೆಯ ತೀವ್ರತೆ ಲಸಿಕೆ ಕೊರತೆಯಾಗುವಂತೆಯೂ ಮಾಡಿದೆ. ಅಲ್ಲದೆ ಉತ್ತರ ಹಾಗೂ ಕೇಂದ್ರ ಅಮೆರಿಕದ ಹಲವಾರು ಆರೋಗ್ಯ ವ್ಯವಸ್ಥೆಗಳು ಪರಿಸ್ಥಿತಿ ನಿಯಂತ್ರಿಸಲು ಪರದಾಡುತ್ತಿವೆ. ಜತೆಗೆ ಸೋಂಕಿತರಿಗೆ ಆಸ್ಪತ್ರೆಯ ಅಗತ್ಯವೂ ಅತಿಯಾಗಿದೆ ಎಂದು ಪಿಎಎಚ್‌ಒ ನಿರ್ದೇಶಕಿ ಕ್ಯಾರಿಸಾ ತಿಳಿಸಿದ್ದಾರೆ.