More

    ಬೆಡ್ ಮ್ಯಾನೇಜ್‌ಮೆಂಟ್‌ ಪೋರ್ಟಲ್ ಬಿಡುಗಡೆ: ಕರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಆಗದಂತೆ ಕ್ರಮ

    ವಿಜಯಪುರ: ಕರೊನಾ ಸೋಂಕಿತರಿಗೆ ಬೆಡ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಬೆಡ್ ಮ್ಯಾನೇಜ್‌ಮೆಂಟ್‌ ಪೋಟಲ್ ಆ್ಯಪ್ ತಯಾರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

    ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಡ್ ಮ್ಯಾನೆಜ್‌ಮೆಂಟ್‌ ಪೋರ್ಟಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವೆ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್​ಗಳಿವೆ ಎಂಬುದರ ಬಗ್ಗೆ ನಿತ್ಯ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ. ಅದರಲ್ಲಿ ಶೇ.90 ವೈದ್ಯರು ಎಲ್ಲ ಮಾಹಿತಿಯನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವು ಎಂದರು.

    ಬೆಡ್ ಕೊರತೆ ಬಗ್ಗೆ ಜಿಲ್ಲಾಡಳಿತ ಹಾಗೂ ನನಗೆ ದೂರವಾಣಿ ಕರೆಗಳು ಬರುತ್ತಿದ್ದು, ಅದನ್ನು ನಿಭಾಯಿಸಲು ಈ ಆ್ಯಪ್ ತಯಾರಿಸಲಾಗಿದೆ. ಇದೀಗ ಜನತೆಯ ಅನುಕೂಲಕ್ಕಾಗಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದರು.

    ಜಿಲ್ಲಾದ್ಯಂತ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಡ್, ವ್ಯಾಕ್ಸಿನೇಷನ್‌ ಸೇರಿದಂತೆ ಸೋಂಕಿತರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತದಿಂದ ತಂಡ ರಚನೆ ಮಾಡಲಾಗಿದೆ ಎಂದರು. ವಿಜಯಪುರ ನಗರ, ತಾಲೂಕುಗಳಲ್ಲೂ ಒಂದೊಂದು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಕುಂದು-ಕೊರತೆ ಆಗದಂತೆ ಈ ಅಧಿಕಾರಿಗಳು ನೋಡಿಕೊಂಡು ಅದನ್ನು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಕೆಲಸ ಮಾಡುತ್ತಾರೆ ಎಂದರು.

    ಜಿಲ್ಲಾದ್ಯಂತ ಸೋಂಕಿತರಿಗೆ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ನಾವು ಸದಾ ನಿಮ್ಮೊಂದಗೆ ಇದ್ದೇವೆ ಎಂದು ಜನರಿಗೆ ತಿಳಿಸಿದರು. ಜಿಲ್ಲಾಧಿಕಾರಿ ಪಿ.ಸುನೀಲ್​ಕುಮಾರ, ವಿಪ ಸದಸ್ಯ ಅರುಣ ಶಹಾಪುರ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮತ್ತಿತರರಿದ್ದರು.

    ಐಸಿಯು ಬೆಡ್​, ಆಮ್ಲಜನಕ, ರೆಮ್​ಡಿಸಿವಿರ್​ ಕೊಡಿಸುತ್ತೇನೆ… ಬೇಕಿದ್ದವರು ಸಂಪರ್ಕಿಸಿ ಎಂದವನ ಕಥೆ ಏನಾಯ್ತು ಗೊತ್ತಾ?

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts