ಲೈಫ್‌ಸ್ಟೈಲ್

World Emoji Day 2025: ಪದಗಳಿಗಿಂತ ಹೆಚ್ಚು ಮಾತನಾಡುವ ಟಾಪ್ 3 ಜನಪ್ರಿಯ ಎಮೋಜಿಗಳು ಇವೆ ನೋಡಿ..!

World Emoji Day 2025: ಹನ್ನೆರಡು ವರ್ಷಗಳ ಹಿಂದೆ ಮೊದಲ ವಿಶ್ವ ಎಮೋಜಿ ದಿನವನ್ನು ಆಚರಿಸಲಾಗಿದೆ ಎಂದು ನಂಬುವುದು ಕಷ್ಟ. ಎಮೋಜಿಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಏಕೆಂದರೆ ಅವು ನಮ್ಮ ಡಿಜಿಟಲ್ ಸಂವಹನದಲ್ಲಿ ಮಾತಿಗಿಂತ ಎಮೋಜಿಗಳೇ ಹೆಚ್ಚಾಗಿದೆ. ಈ ಸಣ್ಣ ಬಣ್ಣಗಳಿಂದ ಕೂಡಿದ ಚಿಹ್ನೆಗಳು ಪದಗಳಿಂದಲೂ ಹೇಳಲಾಗದ ಆಲೋಚನೆಗಳು, ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಅದೇ ರೀತಿ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆಯಾಗಿರುವ ಮೂರು ಜನಪ್ರಿಯ ಎಮೋಜಿಗಳು ಯಾವುದು ಗೊತ್ತಾ? ಬನ್ನಿ ತಿಳಿಯೋಣ.

ಜಪಾನಿನ ವಿನ್ಯಾಸಕ ಶಿಗೆಟಕ ಕುರಿಟಾ 1999 ರಲ್ಲಿ ಮೊದಲ ಎಮೋಜಿಯನ್ನು ರಚಿಸಿದರು. ಅಂದಿನಿಂದ, ಅದು ಎಷ್ಟು ಜನಪ್ರಿಯವಾಗಿದೆಯೆಂದರೆ, ಪ್ರತಿದಿನ ಸುಮಾರು 10 ಬಿಲಿಯನ್ ಕಳುಹಿಸಲಾಗುತ್ತದೆ. 3,521 ಎಮೋಜಿಗಳಲ್ಲಿ ಯಾವುದನ್ನು ಬಳಸಬೇಕೆಂದು ನಿರ್ಧರಿಸುವುದು ಕೆಲವೊಮ್ಮೆ ಕಷ್ಟಕರವಾಗಬಹುದು, ಆದರೆ ಎಮೋಜಿ ತಜ್ಞರಾದ ಎಮೋಜಿಪೀಡಿಯಾ ನಿರ್ಧರಿಸಿದಂತೆ ಇವು ಹೆಚ್ಚಾಗಿ ಬಳಸಲಾಗುವ ಮೊದಲ ಮೂರು ಎಮೋಜಿಗಳಾಗಿವೆ.

ರೆಡ್‌ ಹಾರ್ಟ್ ಎಮೋಜಿ (ಕೆಂಪು ಹೃದಯದ ಎಮೋಜಿ)

ಯಾರಿಗಾದರೂ ಅಥವಾ ಯಾವುದಕ್ಕಾದರೂ ನಿಮ್ಮ ಪ್ರೀತಿಯನ್ನು ಹೇಳಲು ಈ ರೆಡ್‌ ಹಾರ್ಟ್ ಎಮೋಜಿಯನ್ನು ಬಳಸಲಾಗುತ್ತದೆ. ಎಮೋಜಿಪೀಡಿಯಾ ಇದು "ಹಳೆಯದಾಗಲಿ ಅಥವಾ ಹೊಸದಾಗಲಿ ಎಲ್ಲಾ ಎಮೋಜಿಗಳಲ್ಲಿ ಪ್ರಿಯವಾದದ್ದು" ಮತ್ತು ಇದುವರೆಗಿನ ಅತ್ಯಂತ ಜನಪ್ರಿಯ ಎಮೋಜಿ ಎಂದು ಹೇಳುತ್ತದೆ.

ಅಳುವ ಎಮೋಜಿ

ಎರಡನೇ ಅತ್ಯಂತ ಸಾಮಾನ್ಯವಾದ ಎಮೋಜಿ ಎಂದರೆ ಜೋರಾಗಿ ಅಳುವ ಮುಖ. ಜನರು ಅಸಮಾಧಾನಗೊಂಡಾಗ, ಬೇಜಾರಾದಾಗ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಅಳುವುದನ್ನು ನಗುವಿನೊಂದಿಗೆ ತೋರಿಸುವ ಒಂದು ಮಾರ್ಗವಾಗಿಯೂ ಬಳಸಲಾಗುತ್ತದೆ.

ಬೆಂಕಿಯ ಎಮೋಜಿ

ಬೆಂಕಿಯ ಎಮೋಜಿ ಮೂರನೇ ಸ್ಥಾನದಲ್ಲಿದೆ. ಜನರು ಹೆಚ್ಚಾಗಿ ಅವರ ಆಪ್ತರ ಉಡುಗೆ ತೊಡುಗೆ ಅಥವಾ ಇಷ್ಟಪಡುವ ಹೊಸ ಹಾಡನ್ನು ಆನಂದಿಸುತ್ತಿದ್ದರೆ, ಈ ಎಮೋಜಿ ಕಳಿಸುತ್ತಾರೆ. (ಏಜೆನ್ಸೀಸ್​)