ಲೈಫ್‌ಸ್ಟೈಲ್

ವಿಶ್ವ ಆಸ್ತಮಾ ದಿನ: ಶ್ವಾಸಕೋಶ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ

ಬೆಂಗಳೂರು: ಇಂದು ವಿಶ್ವ ಆಸ್ತಮಾ ದಿನ. ಶ್ವಾಸಕೋಶಕ್ಕೆ ಸಂಬಂಧಿಸಿದ ಈ ಕಾಯಿಲೆಯು ವಿಶ್ವಾದ್ಯಂತ ಸುಮಾರು 235 ದಶಲಕ್ಷ ಜನರನ್ನು ಕಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಕಾಯಿಲೆಯ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು, ರೋಗ ನಿವಾರಣೆಗೆ ಇರುವ ಔಷಧ, ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರವನ್ನು ವರ್ಲ್ಡ್‌ ಅಸ್ತಮಾ ಡೇ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 2 ಅನ್ನು ಅಸ್ತಮಾ ದಿನವನ್ನಾಗಿ ಗುರುತಿಸಲಾಗಿದೆ.

ಅಸ್ತಮಾ ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೆ ಅಟ್ಯಾಕ್ ಮಾಡುತ್ತದೆ. ಇದು ಉಸಿರಾಟದ ತೊಂದರೆ, ಎದೆಯಲ್ಲಿ ಬಿಗಿತ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಆಸ್ತಮಾಗೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಅದರ ನಿರ್ವಹಣೆಯಿಂದ ಆಸ್ತಮಾವನ್ನು ತಡೆಗಟ್ಟಬಹುದು. ಆಸ್ತಮಾವನ್ನು ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಆರೋಗ್ಯಕರವಾದ ಜೀವನ ನಮ್ಮದಾಗು ಬೇಕಾದಲ್ಲಿ ಈ ಕೆಲವು ಸಲಹೆಗಳು ಅನುಸರಿಸಿ.

ಅಸ್ತಮಾದ ಸಾಮಾನ್ಯ ಲಕ್ಷಣ: ಉಸಿರಾಟದ ತೊಂದರೆ, ಉಬ್ಬಸ, ಎದೆಯ ಬಿಗಿತ ಮತ್ತು ಕೆಮ್ಮು ಕಾಲಾನಂತರದಲ್ಲಿ ಮತ್ತು ತೀವ್ರತೆಯಲ್ಲಿ ಬದಲಾಗಬಹುದು. ಕಾಲೋಚಿತ ಮತ್ತು ದೈನಂದಿನ ಬದಲಾವಣೆಗಳು ರೋಗವನ್ನು ಗುರುತಿಸುತ್ತವೆ.

ಶ್ವಾನಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕ್ರಮ:

  1. ನಿಮ್ಮ ಶ್ವಾಸಕೋಶ ಆರೋಗ್ಯಕರವಾಗಿ ಉಳಿಯ ಬೇಕು ಎಂದರೆ ಮೊದಲು ನೀವು ಧೂಮಪಾನ ಮಾಡುವ ನಿಮ್ಮ ಕೆಟ್ಟ ಅಭ್ಯಾಸವನ್ನು ಬಿಟ್ಟು ಬಿಡಿ.
  2. ನಮ್ಮ ದೇಹ ಮುಕ್ಕಾಲು ಪಾಲು ನೀರಿನ ಅಂಶದಿಂದಲೇ ಆಗಿರುವುದು. ಶ್ವಾಸಕೋಶದ ಭಾಗಕ್ಕೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಹೀಗಾಗಿ ಜೊತೆಗೆ ಶ್ವಾಸಕೋಶದ ಸ್ವಚ್ಛತೆಗಾಗಿ ಕೂಡ ನೀರು ಸೇವನೆ ಮಾಡುವುದು ಬಹಳ ಉತ್ತಮ ಮಾರ್ಗವಾಗಿದೆ.
  3. ನಿಮಗಿದು ತಿಳಿದಿರಲಿ, ವಿಟಮಿನ್‌ ಡಿ ಕೊರತೆಯು ಅಸ್ತಮಾಕ್ಕೆ ಕಾರಣವಾಗಬಹುದು.ಹಾಲು, ಮೊಟ್ಟೆಗಳು, ಕಿತ್ತಳೆ ರಸ, ಮೀನುಗಳು ಸೇರಿದಂತೆ ಇನ್ನು ಅನೇಕ ಆಹಾರಗಳಲ್ಲಿ ವಿಟಮಿನ್‌ ಡಿ ಇರುತ್ತದೆ. ಈ ಆಹಾತರಗಳನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ.
  4. ಮಾಂಸಾಹಾರಿಗಳು ಮೀನನ್ನು ಮತ್ತು ಸಸ್ಯಾಹಾರಿಗಳು ಟೊಮೊಟೊವನ್ನು ಅಸ್ತಮಾದಿಂದ ಪಾರಾಗಲು ಸೇವನೆ ಮಾಡಬಹುದು. ಸಸ್ಯಾಹಾರಿಗಳು ಟೊಮೆಟೊದಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಉಸಿರಾಟದ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.                                                                                                                    ಇದನ್ನೂ ಓದಿ: Congress Manifesto 2023: ಬಿಜೆಪಿ ಜಾರಿಗೆ ತಂದ ಕಾನೂನುಗಳು ಒಂದು ವರ್ಷದೊಳಗೆ ರದ್ದು , ಭಜರಂಗದಳ ನಿಷೇಧ!
  5. ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಮೊದಲು ಹೊರಗೆ ಬನ್ನಿ. ಇದರಿಂದ ನಮ್ಮ ದೇಹದ ಉಸಿರಾಟ ಪ್ರಕ್ರಿಯೆ ಕೂಡ ಚುರುಕುಗೊಳ್ಳುತ್ತದೆ. ಜೊತೆಗೆ ದೇಹದ ತುಂಬಾ ರಕ್ತಸಂಚಾರ ಕೂಡ ಉತ್ತಮಗೊಳ್ಳುತ್ತದೆ.ಇದರಿಂದಲೂ ಸಹ ದೀರ್ಘಕಾಲ ಶ್ವಾಸಕೋಶವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು.
  6. ನಗುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಆಮ್ಲಗಳು ಹೊರಬರುತ್ತವೆ. ಒಂದು ರೀತಿಯ ಬಲಪ್ರಯೋಗ ಶ್ವಾಸಕೋಶದ ಮೇಲೆ ಉಂಟಾಗುತ್ತದೆ. ಒಳ್ಳೆಯ ಮತ್ತು ತಾಜಾ ಗಾಳಿ ಶ್ವಾಸಕೋಶಕ್ಕೆ ಸೇರಿಕೊಳ್ಳುತ್ತದೆ. ಇದರಿಂದ ಆರೋಗ್ಯಕರವಾದ ಜೀವನ ನಮ್ಮದಾಗುತ್ತದೆ.