ಲೈಫ್‌ಸ್ಟೈಲ್

ಮಹಿಳೆಯರ ಆರೋಗ್ಯ ಕಾಪಾಡುವ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ...|Womens

ಭಾನುಪ್ರಿಯ ಡಿ.ಕೆ

Womens: ಒಳ್ಳೆಯ ಆಹಾರ ಪದ್ಧತಿ ಎಲ್ಲರಿಗೂ ಮುಖ್ಯವಾಗಿರುತ್ತದೆ. ಆದರೆ ಕೆಲವು ಆಹಾರಗಳು ಮಹಿಳೆಯರ ಮೇಲೆ ಪ್ರಭಾವ ಬೀರುವ ಮೂಳೆ ಮುರಿತ, ಸ್ತನ ಕ್ಯಾನ್ಸರ್​, ಗರ್ಭಧಾರಣೆ ಮುಂತಾದವುಕ್ಕೆ ಒಳ್ಳೆಯದು. ಈ ಎಲ್ಲಾ ಒಳ್ಳೆಯ ಆಹಾರಗಳು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ..

* ಎಲೆಕೋಸು

ಈ ಹಸಿರು ಎಲೆಗಳಲ್ಲಿ ವಿಟಮಿನ್ ಕೆ ಹೇರಳವಾಗಿದ್ದು, ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆ ಸೇರಿ ನಿಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯವಾಗಿಡುತ್ತದೆ. ದಿನದಲ್ಲಿ ಒಂದು ಬಾರಿ ಸೇವಿಸಿದರೆ, ಶೇ.20ಕ್ಕಿಂತ ಹೆಚ್ಚು ಪ್ರಮಾಣದ ವಿಟಮಿನ್​ಗಳು ದೊರಕುತ್ತದೆ.

* ಶತಾವರಿ

ಶತಾವರಿಯು ಪೌಷ್ಟಿಕಾಂಶದ ಟಾನಿಕ್​ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚು ಶೇಖರಣೆಯಾಗಲು ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ, ಕೊಲೆಸ್ಟ್ಟಾಲ್​ನ್ನು ಕಡಿಮೆ ಮಾಡಿ, ಜೀಣರ್ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೇ ಅತಿಸಾರವನ್ನು ಕಡಿಮೆ ಮಾಡುತ್ತದೆ.

* ಬೀನ್ಸ್​

ಬೀನ್ಸ್​ ಕಾಳುಗಳಲ್ಲಿ ಅಧಿಕ ಪ್ರೊಟೀನ್ ​ ಇರುವುದರಿಂದ ಇವು ಹೆಚ್ಚಾಗಿ ಫೈಬರ್​ ಅಂಶವನ್ನು ಹೊಂದಿರುತ್ತದೆ. ಈ ಪದಾರ್ಥ ಆರೋಗ್ಯದ ಸುಧಾರಣೆ ಮಾಡುವುದರೊಂದಿಗೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹೃದಯ ಬಡಿತವನ್ನು ಕಡಿಮೆಗೊಳಿಸುತ್ತದೆ.

* ದ್ರಾಕ್ಷಿಹಣ್ಣು

ದ್ರಾಕ್ಷಿಹಣ್ಣುಗಳು ಮಹಿಳೆಯರಲ್ಲಿರುವ ಪಾಶ್ವವಾಯುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇನ್ನು ಈ ಹಣ್ಣು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಕ್ಯಾನ್ಸರ್​ ನಿರೋಧಕ ಗುಣಗಳನ್ನು ಹೊಂದಿರುತ್ತದೆ.

* ಪಪಾಯಿ

ಪಪಾಯಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್​ ಅನ್ನು ತಡೆಗಟ್ಟಬಹುದು. ಹಾಗೆ ಕೊಲೆಸ್ಟ್ರಾಲ್​, ರಕ್ತದೊತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇಡಲು ಸಹಾಯ ಮಾಡುತ್ತದೆ.

* ಸಿಹಿ ಗೆಣಸು

ಸಿಹಿ ಗೆಣಸು ಒಂದು ರೀತಿಯಲ್ಲಿ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿದಂತಹ ಆಹಾರ ಪದಾರ್ಥವಾಗಿದೆ. ಇದರಲ್ಲಿ ತಾಮ್ರ, ಫೈಬರ್​, ವಿಟಮಿನ್​ ಬಿ6 ಪೊಟ್ಯಾಷಿಯಂ, ಕಬ್ಬಿಣ ಅಂಶಗಳು ಸೇರ್ಪಡೆಯಾಗಿರುತ್ತವೆ. ಇವುಗಳನ್ನು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸೇವಿಸುವುದರಿಂದ ಮಗುವಿನ ಶ್ವಾಸಕೋಶದ ಆರೋಗ್ಯ ಉತ್ತಮವಾಗಿರುತ್ತದೆ. (ಏಜೆನ್ಸೀಸ್)