ಲೈಫ್‌ಸ್ಟೈಲ್

ನಿಮ್ಮ ತಲೆಕೂದಲನ್ನು ಸರಿಯಾದ ರೀತಿಯಲ್ಲಿ ತೊಳೆಯೊದೇಗೆ? ಇದರಿಂದ ಏನೆಲ್ಲಾ ಲಾಭ; ಇಲ್ಲಿದೆ ಸುಲಭ ಮಾರ್ಗ ತಿಳಿಯಿರಿ.. | Hair Care

Hair Care | ಇತ್ತೀಚಿನ ದಿನಗಳಲ್ಲಿ ಕೂದಲು ಉದರುವಿಕೆ ಎಲ್ಲರಲ್ಲಿಯೂ ಸಾಮಾನ್ಯವಾಗಿದೆ. ಜೊತೆಗೆ ಬಿಳಿ ಕೂದಲಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಅನೇಕ ಜನರು ಆರೋಗ್ಯಕರ, ಸುಂದರವಾದ ಕೂದಲನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುತ್ತಾರೆ. ಆದರೆ, ಆರೋಗ್ಯಕರ ಕೂದಲನ್ನು ಪಡೆಯಲು ತಮ್ಮ ನೆತ್ತಿಯ ಆರೈಕೆಯ ಅಗತ್ಯವನ್ನು ಅವರು ಹೆಚ್ಚಾಗಿ ಕಡೆಗಣಿಸುತ್ತಾರೆ.

ಹೌದು ನೆತ್ತಿಯ ಆರೈಕೆಯೂ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾದ್ರೆ ನಿಮ್ಮ ನೆತ್ತಿಯನ್ನು ಯಾವ ರೀತಿ ಆರೈಕೆ ಮಾಡಬೇಕು. ಹೇಗೆ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿಬೇಕು ಎನ್ನುವ ಸರಳ ಮಾರ್ಗ ಇಲ್ಲಿದೆ ತಿಳಿಯಿರಿ.

‘ನೆತ್ತಿಯು ಚರ್ಮವೂ ಬೆವರುತ್ತದೆ, ಎಣ್ಣೆಯುಕ್ತವಾಗುತ್ತದೆ, ಬ್ಯಾಕ್ಟೀರಿಯಾವನ್ನು ಹಿಡಿದಿಟ್ಟುಕೊಳ್ಳುತ್ತದೆ, ಹವಾಮಾನಕ್ಕೆ ಪ್ರತಿಕ್ರಿಯಿಸುತ್ತದೆ . ಹೀಗಾಗಿ, ನಿಮ್ಮ ಮುಖದಂತೆ ನೆತ್ತಿಯ ಕಾಳಜಿಯ ಅಗತ್ಯವಿದೆ. ಜೊತೆಗೆ ಅತಿಯಾದ ಶುಚಿಗೊಳಿಸುವಿಕೆ ಮತ್ತು ಕಡಿಮೆ ತೊಳೆಯುವಿಕೆಯಿಂದ ಕೂದಲು ಉದುರುವಿಕೆ ಆಗಬಹುದು.

ನೆತ್ತಿಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ಬಗ್ಗೆ ಇದೇ ಏ.6ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೈದ್ಯರಾದ ಸರು ಸಿಂಗ್​ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈದ್ಯರ ಪ್ರಕಾರ, ನೀವು ನಿಮ್ಮ ಕೂದಲಿಗಾಗಿ ಬಳಸುವ ಶಾಂಪೂ, ಕಂಡಿಷನರ್​​ಗಳು ನಿಮ್ಮ ನೆತ್ತಿಗೆ ಸೂಕ್ತವೇ ಎಂಬುದನ್ನು ಮೊದಲು ತಿಳಿಯಿರಿ. ನಿಮ್ಮ ನೆತ್ತಿ 2 ದಿನಗಳಲ್ಲಿ ಜಿಡ್ಡಿನಂತಾಗುತ್ತದೆಯೇ? ಅಥವಾ ತೊಳೆದ ನಂತರ ಸಿಪ್ಪೆ ಸುಲಿಯುತ್ತದೆಯೇ?, ನಿಮ್ಮ ಕೂದಲು ಭಾರ ಮತ್ತು ಒಣಗಿದಂತ ಅನುಭವವಾಗುತ್ತದೆಯಾ ಎನ್ನುವುದನ್ನು ತಿಳಿದು ನಿಮ್ಮ ಕೂದಲಿನ ಆರೈಕೆಯನ್ನು ಮಾಡುವುದು ಸೂಕ್ತ.

ವಾರಕ್ಕೆ ಎಷ್ಟು ಬಾರಿ ನಿಮ್ಮ ಕೂದಲನ್ನು ತೊಳೆಯಬೇಕು?

ನಿಮ್ಮ ನೆತ್ತಿ ಬೆವರುತ್ತಿದ್ದರೆ ಮತ್ತು ಎಣ್ಣೆಯುಕ್ತವಾಗಿದ್ದರೆ ವಾರಕ್ಕೆ ಕನಿಷ್ಠ ಮೂರು ಅಥವಾ ನಾಲ್ಕು ಬಾರಿಯಾದರೂ ಸ್ವಚ್ಛಗೊಳಿಸಲು ಪ್ರಯತ್ನಿಸಿ. ನೆತ್ತಿ ಒಣಗಿದ್ದರೆ ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ತೊಳೆಯಬೇಡಿ. ನಿಮಗೆ ತಲೆಹೊಟ್ಟು ಇದ್ದರೆ ವಾರಕ್ಕೊಮ್ಮೆಯಾದರೂ ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸುವುದು ಸೂಕ್ತ. ನಿಮ್ಮ ನೆತ್ತಿಗೆ ಸರಿಹೊಂದುವಂತ ಶಾಂಪೂ ಹಚ್ಚಿ, ಮತ್ತು ಕೂದಲು ತೊಳೆದ ನಂತರ ಯಾವಾಗಲೂ ಕಂಡಿಷನರ್ ಹಚ್ಚಿ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.