ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಚಿಕ್ಕವಯಸ್ಸಿನಲ್ಲೇ ಹೆಣ್ಣುಮಕ್ಕಳು ಋತುಮತಿಯಾಗಲು ಕಾರಣವೇನು?; ಯಾವ ವಯಸ್ಸು ಸೂಕ್ತ.. ಇಲ್ಲಿದೆ ಮಾಹಿತಿ

ಋತುಚಕ್ರವು ಹುಡುಗಿಯರ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಈ ಪ್ರಕ್ರಿಯೆಯು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾದರೆ ಅದನ್ನು ಕಾಳಜಿಯ ವಿಷಯವೆಂದು ಪರಿಗಣಿಸಲಾಗುತ್ತದೆ. ಋತುಚಕ್ರವು ಸಾಮಾನ್ಯವಾಗಿ 12 ವರ್ಷದಿಂದ 15 ವರ್ಷ ವಯಸ್ಸಿನ ಹುಡುಗಿಯರಲ್ಲಿ ಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ 8 ವರ್ಷ ಮತ್ತು 9 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪಿರಿಯಡ್ಸ್ ಆದಾಗ ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಈಗಾಗಲು ಕಾರಣವೇನು.. ಅಂತಹ ಸಮಯದಲ್ಲಿ ಯಾವ ವಿಷಯಗಳತ್ತ ಗಮನ ಹರಿಸಬೇಕು ಎಂಬುದನ್ನುಇಲ್ಲಿ ತಿಳಿಸಲಾಗಿದೆ.

ಸಂಶೋಧನೆಯೊಂದರ ಪ್ರಕಾರ, ಹಾರ್ಮೋನುಗಳ ಬದಲಾವಣೆ, ಅಸಮತೋಲಿತ ಆಹಾರ ಪದ್ಧತಿ, ಒತ್ತಡ ಜೀವನಶೈಲಿ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲೇ ಋತುಮತಿಯಾಗಲು ಕಾರಣವಾಗುತ್ತಿದೆ. 8 ರಿಂದ 9 ವರ್ಷ ವಯಸ್ಸಿನ ಹುಡುಗಿಯ ತೂಕವು ವೇಗವಾಗಿ ಹೆಚ್ಚಾದರೆ, ಇದು ಹಾರ್ಮೋನ್ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದೆ. ಹೆಣ್ಣುಮಕ್ಕಳು ಮೊದಲ ಬಾರಿಗೆ ಋತುಮತಿಯಾಗಲು ಸರಿಯಾದ ವಯಸ್ಸು 12 ವರ್ಷದಿಂದ 15 ವರ್ಷಗಳು. ಒಂದು ವೇಳೆ ಮೊದಲೇ ಆದರೆ ಅದಕ್ಕೆ ಕಾರಣ ನಿಮ್ಮ ದೇಹದಲ್ಲಿ ಕೆಲವು ಹಾರ್ಮೋನ್ ಬದಲಾವಣೆಗಳಾಗಿವೆ.

ಋತುಸ್ರಾವದ ಸಮಯದಲ್ಲಿ ಗಮನದ್ಲಲಿಟ್ಟುಕೊಳ್ಳಬೇಕಾದ ವಿಷಯ: ಹೆಣ್ಣುಮಕ್ಕಳು ತಮ್ಮ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ದಿನವಿಡೀ ಕನಿಷ್ಠ ಎರಡು ಬಾರಿ ಪ್ಯಾಡ್​​ಗಳನ್ನು ಬದಲಾಯಿಸಬೇಕು. ಆಹಾರದ ಬಗ್ಗೆಯೂ ಗಮನ ಕೊಡಿ. ಆ ಸಮಯದಲ್ಲಿ ಅತಿಯಾದ ಸಿಹಿತಿಂಡಿಗಳು, ಕಾಫಿ, ಕರಿದ ಆಹಾರಗಳು ಮತ್ತು ಹುಳಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಅಕಾಲಿಕ ಪ್ರೌಢಾವಸ್ಥೆ ತಪ್ಪಿಸಲು ಏನು ಮಾಡಬಹುದು:

  • ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವಂತೆ ಕಾಳಜಿ ವಹಿಸಬೇಕು.
  • ಮಕ್ಕಳ ಮೇಲೆ ಪ್ರತಿದಿನ ಒಂದು ಗಂಟೆಯಾದರೂ ಬೆಳಗಿನ ಬಿಸಿಲು ಬೀಳುವಂತೆ ನೋಡಿಕೊಳ್ಳಬೇಕು. ಇದರಿಂದ ಮಕ್ಕಳಿಗೆ ಅವಶ್ಯಕತೆಯಿರುವ ವಿಟಮಿನ್‌ ಡಿ ಸಿಗುವುದು.
  • ದೈಹಿಕವಾಗಿ ಫಿಟ್​​ನೆಸ್​ ಬಹಳ ಮುಖ್ಯ. ವ್ಯಾಯಾಮ, ಡ್ಯಾನ್ಸ್, ಕ್ರೀಡೆ, ಯೋಗ, ಕರಾಟೆ ಹೀಗೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ.
  • ಆಹಾರದ ಜತೆಗೆ ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಕೂಡ ಮುಖ್ಯ. ತಡವಾಗಿ ಮಲಗುವುದು ಮತ್ತು ಕಡಿಮೆ ನಿದ್ರೆ ಮಾಡುವುದು ಸಹ ಆರಂಭಿಕ ಪ್ರೌಢಾವಸ್ಥೆಗೆ ಸಂಬಂಧಿಸಿದೆ.