WhatsApp scam alert feature 
ಲೈಫ್‌ಸ್ಟೈಲ್

ವಾಟ್ಸಾಪ್​ಗೆ ಬರುವ ಸ್ಕ್ಯಾಮ್​ ಲಿಂಕ್​, ಫೈಲ್​ ಬಗ್ಗೆ ಚಿಂತೆ ಬೇಡ; ಶೀಘ್ರದಲ್ಲೇ ಬರಲಿದೆ ಈ ಅದ್ಭುತ ಫೀಚರ್..WhatsApp

ಮಮತಾ

ಪ್ರಮುಖ ಮುಖ್ಯಾಂಶಗಳು

  • ವಾಟ್ಸಾಪ್​ ಬಳಕೆದಾರರಿಗೆ ಮೆಟಾದಿಂದ ಸಿಕ್ತು ಗುಡ್​ನ್ಯೂಸ್​
  • ಇನ್ಮುಂದೆ ಸ್ಕ್ಯಾಂ ಲಿಂಕ್​, ವಂಚನೆಯ ಫೈಲ್​ ಬಗ್ಗೆ ಚಿಂತೆ ಬೇಡ
  • ಆನ್​ಲೈನ್​ ವಂಚನೆ, ಲಿಂಕ್​ ಮೆಸೇಜ್​ ಬಂದರೆ ಸ್ಕ್ಯಾಂ ಅಲರ್ಟ್​ ಕೊಡುವ ವಾಟ್ಸಾಪ್
WhatsApp scam alert feature: ಐಷಾರಾಮಿ ಜೀವನ ನಡೆಸುವ ನಿಟ್ಟಿನಲ್ಲಿ ಹಣ ಬಾಕರು, ಸೈಬರ್​ ವಂಚನೆ, ಕಳ್ಳತನ ಸೇರಿದಂತೆ ನಾನಾ ವಿಧದಲ್ಲಿ ಅಮಾಯಕರನ್ನು ವಂಚಿಸಿ ಹಣ ಮಾಡಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಾರೆ. ಪ್ರತಿಬಾರಿಯು ಒಂದೊಂದು ವಿಧಾನದಲ್ಲಿ ದರೋಡೆ ಮಾಡಲಾಗುತ್ತದೆ. ವಾಟ್ಸಾಪ್​​​ ಮೂಲಕವು ಈ ದಂಧೆ ನಡೆಯುವುದು ಸಾಮಾನ್ಯವಾಗಿ ಹೋಗಿದೆ. ಹೀಗಾಗಿ ಮೆಟಾ ಆಂಡ್ರಾಯ್ಡ್ ಬಳಕೆದಾರರ ಭದ್ರತೆಯನ್ನು ಹೆಚ್ಚಿಸಲು ಮತ್ತೊಂದು ಅದ್ಭುತ ವೈಶಿಷ್ಟ್ಯವನ್ನು ಜಾರಿ ಮಾಡಲು ಮುಂದಾಗಿದೆ.

ಏನಿದು ಸ್ಕ್ಯಾಂ ಅಲರ್ಟ್​​?

ವಾಟ್ಸಾಪ್‌ನ ಇತ್ತೀಚಿನ ಅಪ್ಡೇಟ್‌ಗಳನ್ನು ಟ್ರ್ಯಾಕ್ ಮಾಡುವ 'ಡಬ್ಲ್ಯೂಎಬೀಟಾಇನ್ಫೋ' ವರದಿಯ ಪ್ರಕಾರ, ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಸ್ಕ್ಯಾಮ್ ಅಲರ್ಟ್' ಎಂಬ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಬಳಕೆದಾರರ ಡಿವೈಸ್‌ನಲ್ಲಿಯೇ ನೇರವಾಗಿ ಕಾರ್ಯನಿರ್ವಹಿಸಲಿದೆ.

ವಾಟ್ಸಾಪ್​ನಲ್ಲಿ ಈಗ ಯಾವುದು ಖಾಸಗಿತನ ಅನ್ನೋದೆ ಇಲ್ಲ. ಅಪರಿಚಿತರಿಂದ ಮೆಸೇಜ್​ಗಳು, ಲಿಂಕ್​, ಫೈಲ್​ ಬರುತ್ತಲೇ ಇರುತ್ತದೆ. ಇಂತಹ ಸಮಯದಲ್ಲಿ ಬಳಕೆದಾರರ ಹಣ ಹಾಗೂ ಅವರ ಮಾನಸಿಕ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ವಾಟ್ಸಾಪ್​ ಹೊಸ ಫೀಚರ್​ ಅನ್ನು ಪರಿಚಯಿಸುತ್ತಿದೆ. ಅನುಮಾನಾಸ್ಪದ ಅಥವಾ ವಂಚನೆಯ ಮುನ್ಸೂಚನೆ ಇರುವ ಚಾಟ್‌ಗಳನ್ನು ಗುರುತಿಸಿ ತಕ್ಷಣವೇ ಬಳಕೆದಾರರನ್ನು ಎಚ್ಚರಿಸುತ್ತದೆ ಎನ್ನಲಾಗಿದೆ.

ಖಾಸಗಿತನಕ್ಕೆ ಧಕ್ಕೆ ಇಲ್ಲ

ವಾಟ್ಸಾಪ್​ ನಿಮಗೆ ಬಂದ ಮೆಸೇಜ್​ಗಳನ್ನು ಓದದೆ ಅಲರ್ಟ್​ ಮೆಸೇಜ್​ ನೀಡುತ್ತದೆ. ಇದು ನಿಮ್ಮ ಮೊಬೈಲ್ ಡಿವೈಸ್‌ನ ಒಳಗಡೆಯೇ ನಡೆಯುವುದರಿಂದ, ಖಾಸಗಿತನಕ್ಕೆ ಯಾವುದೇ ಸಮಸ್ಯೆ ಉಂಟಾಗೋದಿಲ್ಲ. ಯಾವುದಾದರೂ ಚಾಟ್​ನಿಂದ ಬರುವ ಲಿಂಕ್​ಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಸುತ್ತದೆ. ಅಲ್ಲದೇ, ಸುಲಭವಾಗಿ ಬ್ಲಾಕ್​ ಹಾಗೂ ರಿಪೋರ್ಟ್​ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಸ್ಕ್ಯಾಮ್​ ಅಲರ್ಟ್​ ಫೀಚರ್​ ಆಂಡ್ರಾಯ್ಡ್‌ನ ಆಯ್ದ ಬೀಟಾಗಳಲ್ಲಿ ಶೀಘ್ರವೇ ಪರೀಕ್ಷೆಗೆ ಲಭ್ಯವಾಗಲಿದೆ. ಯಶಸ್ವಿಯಾದ ನಂತರ ಜಾಗತಿಕವಾಗಿ ವಾಟ್ಸಾಪ್​ ಬಳಕೆದಾರರಿಗೆ ಇದರ ಅಪಡೇಟ್ ಸಿಗಲಿದ ಎನ್ನಲಾಗಿದೆ.

ಹ್ಯಾಕ್​ಗೆ ಒಳಗಾಗಿದ್ದ ನಟಿ ಪ್ರಿಯಾಂಕಾ

ಕಳೆದ ವರ್ಷ ನಟಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಫೋನ್​ನಿಂದ ಆನ್​ಲೈನ್​ನಲ್ಲಿ ವಸ್ತುವೊಂದನ್ನು ಬುಕ್​ ಮಾಡಿದ್ದರು. ಡೆಲಿವರಿ ಬಾಯ್​ ಲೊಕೇಶನ್​ ಕಳಿಸಿ ಎಂದು ಕೊಟ್ಟ ನಂಬರ್​ಗೆ ಕರೆ ಮಾಡಿದಾಗ ಅವರ ಮೊಬೈಲ್ ಹ್ಯಾಕ್​ ಆಗಿ ಸ್ಥಗಿತಗೊಂಡಿತ್ತು. ಅಲ್ಲೇ ಇದ್ದ ನಟ ಉಪೇಂದ್ರ ಅವರ ಫೋನ್​ನಿಂದ ಕರೆ ಮಾಡಿದಾಗಲೂ ಇದೇ ಪರಿಸ್ಥಿತಿ. ಪ್ರಿಯಾಂಕಾ ಉಪೇಂದ್ರ ಅವರ ನಂಬರ್​ನಿಂದ ವಾಟ್ಸಾಪ್​ ಲಾಗಿನ್​ ಆದ ವಂಚಕರು, ಮಗ ಸೇರಿದಂತೆ ಸಂಬಂಧಿಕರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲವರು ಹಣ ಪಾವತಿಸಿದ್ದಾರೆ. ಆನಂತರ, ನಟ ಕೊಟ್ಟ ದೂರಿನ ಮೇರೆಗೆ ತನಿಖೆ ನಡೆಸಿದ ಸೈಬರ್​ ಕ್ರೈಂ ಪೊಲೀಸರು ಬಿಹಾರದಲ್ಲಿದ್ದ ಕಳ್ಳರನ್ನು ಪತ್ತೆ ಹಚ್ಚಿದ್ದರು.

ವೃದ್ಧನಿಗೆ ಮೋಸ

ಇತ್ತೀಚೆಗೆ ಬ್ಯಾಂಕ್​​ ಮ್ಯಾನೇಜರ್​ ಹೆಸರಿನಲ್ಲಿ ಕಳುಹಿಸಿದ್ದ ವಾಟ್ಸಾಪ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿ ಬೆಂಗಳೂರಿನ ನಿವಾಸಿಯೊಬ್ಬರು ಆರು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇಂತಹ ಹ್ಯಾಕ್​ಗಳು, ಸ್ಕ್ಯಾಂ ಫೈಲ್​ಗಳು, ಲಿಂಕ್​ಗಳು, ಅಪ್ರಚಾರದ ಮಾಹಿತಿಗಳಿಂದ ಬಳಕೆದಾರರಿಗೆ ಮುಕ್ತಿ ಕೊಟ್ಟು ವಂಚನೆಗೆ ಒಳಗಾಗದಂತೆ ತಡೆಯಲು ಎಂದು ಮೆಟಾ ಈ ಫೀಚರ್​ ಪರಿಚಯಿಸಲು ಹೊರಟಿದೆ, (ಏಜೆನ್ಸೀಸ್).