ಲೈಫ್‌ಸ್ಟೈಲ್

ಯಾವ ಸಮಯದಲ್ಲಿ ಸಕ್ಕರೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು! ನಿಮಗೆ ತಿಳಿದಿರದ ಮಾಹಿತಿ ಇಲ್ಲಿದೆ..

ಸಕ್ಕರೆಯನ್ನು ವಿಷ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರಬಹುದು ಎನ್ನುತ್ತಾರೆ. ಆದರೆ ಈ ಸಕ್ಕರೆ ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ ಅಥವಾ ಯಾವುದೇ ಕಾಯಿಲೆಯ ಅಪಾಯವಿರುವುದಿಲ್ಲ ಎಂದು ತಿಳಿದರೆ ಸಾಕು.. ಸಕ್ಕರೆ ನಮ್ಮ ಆಹಾರಶೈಲಿಯ ಕ್ರಮದಲ್ಲಿ ಜಾಗ ಪಡೆಯುತ್ತದೆ. ಹಾಗಾದ್ರೆ ಸಕ್ಕರೆ ತಿನ್ನಲು ಉತ್ತಮ ಸಮಯ ಯಾವುದು? ಸಕ್ಕರೆ ತಿಂದರೆ ಏನಾಗುತ್ತೆ? ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.

ನಾವು ಸಕ್ಕರೆ ಸೇವಿಸಿದಾಗ ಅದು ಜೀರ್ಣವಾಗುತ್ತದೆ ಮತ್ತು ರಕ್ತದಿಂದ ಹೀರಲ್ಪಡುವ ಗ್ಲುಕೋಸ್ ಆಗಿ ವಿಭಜಿಸುತ್ತದೆ. ಗ್ಲೂಕೋಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಗ್ಲೂಕೋಸ್ ಅನ್ನು ಸ್ನಾಯುಗಳು ಹೀರಿಕೊಳ್ಳುತ್ತವೆ ಮತ್ತು ಶಕ್ತಿಯನ್ನು ಒದಗಿಸುತ್ತವೆ ಎಂದು ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ಸಾಕೇತ್) ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್‌ನ ಮುಖ್ಯಸ್ಥೆ (ದಕ್ಷಿಣ ವಲಯ) ರಿತಿಕಾ ಸಮದ್ದಾರ್ ಅವರು ಹೇಳಿರುವುದಾಗಿ ಇಂಡಿಯಾಟುಡೇ ವರದಿ ಮಾಡಿದೆ. ಸಕ್ಕರೆಯನ್ನು ಯಾವಾಗಲೂ ವಿಷ ಎಂದು ಪರಿಗಣಿಸಬೇಡಿ. ನೀವು ಅದನ್ನು ತಿನ್ನಲು ಸರಿಯಾದ ಸಮಯ ತಿಳಿದಿದ್ದರೆ, ಅದು ನಿಮ್ಮ ಜೀವವನ್ನು ಉಳಿಸಬಹುದು.

ಸಕ್ಕರೆ ತಿನ್ನಲು ಉತ್ತಮ ಸಮಯ:

  • ತುಂಬಾ ಹಸಿದ ಭಾವನೆ ಇದ್ದಾಗ
  • ತಲೆ ತಿರುಗುತ್ತಿದೆ ಎನ್ನಿಸಿದಾಗ
  • ಕಿರಿಕಿರಿ ಮತ್ತು ಆತಂಕ ಉಂಟಾದಾಗ
  • ಅತಿ ಹೆಚ್ಚು ಬೆವರಿದಾಗ
  • ದೇಹದಲ್ಲಿ ನಡುಕ ಉಂಟಾದಾಗ
  • ದಣಿದ ಮತ್ತು ದುರ್ಬಲ ಭಾವನೆ ಇದ್ದಾಗ
  • ಮಂದ ದೃಷ್ಟಿ ಸಮಯದಲ್ಲಿ ಈ ಪರಿಸ್ಥಿತಿಯಲ್ಲಿ ಸಕ್ಕರೆ ತಿಂದರೆ ಅದು ನಿಮ್ಮ ಜೀವವನ್ನು ಉಳಿಸುತ್ತದೆ. ಇದರ ಬದಲಾಗಿ ನೀವು ಕಾರ್ಬೋಹೈಡ್ರೇಟ್‌ಗಳನ್ನು ಸಹ ಸೇವಿಸಬಹುದು.