ಲೈಫ್‌ಸ್ಟೈಲ್

ಒಂದು ತಿಂಗಳು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್​ ಸಂಗತಿ... Tongue

Tongue : ನಾಲಿಗೆ ನಮ್ಮ ದೇಹದ ಪ್ರಮುಖ ಅಂಗ. ನಾಲಿಗೆ ಇಲ್ಲದಿದ್ದರೆ ಯಾವುದೇ ಆಹಾರ ರುಚಿಸುವುದಿಲ್ಲ. ಹೀಗಾಗಿ ನಾಲಿಗೆಯನ್ನು ತುಂಬಾ ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ನೀವು ವೈದ್ಯರ ಬಳಿ ಹೋದಾಗ ನಿಮ್ಮ ನಾಲಿಗೆಯನ್ನು ನೋಡಿ ಆರೋಗ್ಯ ನಿರ್ಣಯಿಸುವುದನ್ನು ನೀವು ಗಮನಿಸಿರುತ್ತೀರಿ. ನಿಮ್ಮ ಆರೋಗ್ಯಕ್ಕೂ ನಾಲಿಗೆಗೂ ಕನೆಕ್ಷನ್​ ಇರುತ್ತದೆ ಅನ್ನೋದನ್ನು ಮರೆಯಬೇಡಿ. ಹೀಗಾಗಿ ನಾಲಿಗೆ ಮೇಲೆ ಗಮನ ವಹಿಸಿ.

ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಮಾತು, ಮೌಖಿಕ ನೈರ್ಮಲ್ಯ ಮತ್ತು ದೈಹಿಕ ಆರೋಗ್ಯ ಸೇರಿದಂತೆ ಹಲವು ವಿಷಯಗಳು ನಾಲಿಗೆಯನ್ನು ಅವಲಂಬಿಸಿವೆ. ಬೆಳಗ್ಗೆ ಎದ್ದಾಗ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮತ್ತು ಹಲ್ಲುಜ್ಜುವುದು ತುಂಬಾನೇ ಮುಖ್ಯ. ಸುಮಾರು ಒಂದು ತಿಂಗಳ ಕಾಲ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಲು ಮರೆತರೆ, ಅದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಒಂದು ತಿಂಗಳು ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ನಾವೀಗ ತಿಳಿಯೋಣ.

* ನಮ್ಮ ದೈನಂದಿನ ಜೀವನದಲ್ಲಿ ನಾಲಿಗೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಿಯಮಿತವಾಗಿ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ನಾಲಿಗೆಯ ಮೇಲ್ಮೈಯಲ್ಲಿ ನೈಸರ್ಗಿಕವಾಗಿ ಸಂಗ್ರಹವಾಗುವ ಬ್ಯಾಕ್ಟೀರಿಯಾ, ಆಹಾರದ ಅವಶೇಷಗಳು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಒಂದು ವೇಳೆ ಸ್ವಚ್ಛಗೊಳಿಸದೇ ಇದ್ದಲ್ಲಿ ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.

* ಕೆಲವರಿಗೆ ಬಾಯಿಯ ದುರ್ವಾಸನೆ ಇರುತ್ತದೆ. ಇದು ಮೌಖಿಕ ನೈರ್ಮಲ್ಯದಲ್ಲಿನ ತಪ್ಪುಗಳಿಂದಲೂ ಆಗಬಹುದು. ಆ ಸಂದರ್ಭದಲ್ಲಿ, ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ನಿರ್ಲಕ್ಷ್ಯ ವಹಿಸಿದರೆ ಬಾಯಿಯ ದುರ್ವಾಸನೆ ಇನ್ನಷ್ಟು ಹೆಚ್ಚಾಗಬಹುದು.

* ಆಹಾರ ಎಷ್ಟೇ ರುಚಿಕರವಾಗಿದ್ದರೂ, ಕೆಲವರಿಗೆ ಅದರ ಪೂರ್ಣ ರುಚಿ ತಿಳಿಯುವುದಿಲ್ಲ. ಸಾಮಾನ್ಯವಾಗಿ, ಜ್ವರದ ಸಮಯದಲ್ಲಿ ಅದರ ಅನುಭವವಾಗುತ್ತದೆ. ಏನೇ ತಿಂದರೂ ಕಹಿಯಾಗಿರುತ್ತದೆ. ಹೀಗಾಗಿ ನಾಲಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

* ಬಾಯಿಯಲ್ಲಿ ಬಹಳಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ. ಇವು ಹೊಟ್ಟೆಯೊಳಗೆ ಹೋಗಿ ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನಾಲಿಗೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.

* ಆರೋಗ್ಯಕರ ಜೀರ್ಣಕ್ರಿಯೆ ಕಾಪಾಡಿಕೊಳ್ಳಬೇಕಾದರೆ, ಉತ್ತಮ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಜೀರ್ಣಕ್ರಿಯೆಯ ಅಸ್ವಸ್ಥತೆಗಳು ಸಹ ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ ನಾಲಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

* ಸ್ವಚ್ಛವಾದ ನಾಲಿಗೆಯು ನಿಮ್ಮ ಬಾಯಿಯನ್ನು ತಾಜಾ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದು ಮೌಖಿಕ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.