ಲೈಫ್‌ಸ್ಟೈಲ್

ಹೊಟ್ಟೆ ತುಂಬಾ ಊಟ ಮಾಡಿದ ನಂತರ ನಿದ್ದೆ ಬರಲು ಕಾರಣವೇನು..? ಇಲ್ಲಿದೆ ಮಾಹಿತಿ |Sleepiness

Sleepiness: ಊಟ ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಬಹಳ ಮುಖ್ಯ. ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹ ಪೋಷಣೆ ಹಾಗೂ ಪ್ರೋಟಿನ್​​ ಪಡೆಯುತ್ತದೆ. ನಮ್ಮ ದೇಹವನ್ನು ಆರೋಗ್ಯ ಮತ್ತು ಉತ್ತಮ ಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಹೊಟ್ಟೆ ತುಂಬುವಷ್ಟು ಊಟ ಮಾಡಿದ ನಂತ್ರ ಬಹುತೇಕರು ಒಂದು ಸಣ್ಣ ನಿದ್ರೆಗೆ ಜಾರುತ್ತಾರೆ. ಆಹಾರದಲ್ಲಿ ತಕ್ಷಣವೇ ಅಮಲೇರುವಂತೆ ಮಾಡುವ ಅಂಶವಿದೆಯೇ?. ಇದು ಯಾವುದೇ ಕಾಯಿಲೆಯ ಲಕ್ಷಣವೇ ಅಥವಾ ಸಾಮಾನ್ಯ ವಿಷಯವಷ್ಟೆ.. ಏನು ಎಂದು ತಿಳಿಯೋಣ..

ಕೆಲ ವರದಿಗಳ ಪ್ರಕಾರ, ಊಟ ಮಾಡಿದ ನಂತ್ರ ದಣಿವು ಹಾಗೂ ನಿದ್ದೆ ಜಾರುವುದು ಸಾಮಾನ್ಯ ವಿಷಯ. ಇದು ಯಾವುದೇ ರೋಗ ಲಕ್ಷಣವಲ್ಲ. ಅನೇಕ ಆಹಾರಗಳು ನಿದ್ದೆ ಬರುವ ಹಾಗೆ ಮಾಡುವ ಸಾಮಾನ್ಯ ಪೋಷಕಾಂಶಗಳನ್ನು ಹೊಂದಿದೆ.

ಊಟದ ನಂತರ ವಾಸ್ತವವಾಗಿ ದೇಹದ ತೂಕ ಅಧಿಕವಾಗುತ್ತದೆ. ಆದರೆ, ಶಕ್ತಿಯ ಮಟ್ಟ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ದೇಹದ ನೈಸರ್ಗಿಕ ಪ್ರಕ್ರಿಯೆ. ಇದರಿಂದ ಮನುಷ್ಯ ಊಟದ ನಂತ್ರ ನಿದ್ದೆಗೆ ಜಾರುತ್ತಾನೆ.

ಅನೇಕ ಸಂಶೋಧನೆಗಳ ಪ್ರಕಾರ, ಪ್ರೋಟೀನ್ ಮತ್ತು ಇತರ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದ ನಂತರ ಹೆಚ್ಚು ನಿದ್ರೆ ಬರುವುದು ಸಾಮಾನ್ಯ. ಕೆಲವು ಸಂಶೋಧಕರ ಪ್ರಕಾರ, ಜನರು ತಿಂದ ನಂತರ ದಣಿದ ಅನುಭವವಾಗುತ್ತದೆ.ಈ ಸಮಯದಲ್ಲಿ ದೇಹವು ಹೆಚ್ಚು ಸಿರೊಟೋನಿನ್ ಅನ್ನು ಉತ್ಪಾದಿಸುತ್ತದೆ, ಇದು ಮನಸ್ಥಿತಿ ಮತ್ತು ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುವ ರಾಸಾಯನಿಕವಾಗಿದೆ.

ನೀವು ಹೊಟ್ಟೆ ತುಂಬುವಷ್ಟು ಭಾರವಾದ ಊಟವನ್ನು ತಿಂದಾಗ, ನಿಮಗೆ ನಿದ್ದೆ ಬರಲು ಪ್ರಾರಂಭಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ತಿನ್ನುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಮತ್ತು ಇದು ನಿದ್ರೆ ಮತ್ತು ಸೋಮಾರಿತನಕ್ಕೂ ಕಾರಣವಾಗುತ್ತದೆ. ಆದಾಗ್ಯೂ, ನೀವು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡದಿದ್ದರೆ ನಿಮಗೆ ಇನ್ನೂ ನಿದ್ರೆ ಬರಬಹುದು.(ಏಜೆನ್ಸೀಸ್​)