ಬಿಪಿಯಿಂದ ವ್ಯಾಯಾಮದವರೆಗೆ... ಬೀಟ್ರೂಟ್​ ತಿನ್ನೋದ್ರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Beetroot Benefits 
ಲೈಫ್‌ಸ್ಟೈಲ್

ಬಿಪಿಯಿಂದ ಜೀರ್ಣಕ್ರಿಯೆ... ಬೀಟ್ರೂಟ್​ ತಿನ್ನೋದ್ರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Beetroot Benefits

ಇದರಲ್ಲಿ ಫೋಲೇಟ್, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳು ತುಂಬಿವೆ. ಅಷ್ಟಕ್ಕೂ ಈ ತರಕಾರಿಯ ಸೇವನೆಯಿಂದ ಏನೆಲ್ಲ, ಎಷ್ಟೆಲ್ಲ ಪ್ರಯೋಜನ ದೊರೆಯಲಿದೆ ಎಂಬುದರ ಮಾಹಿತಿ ಹೀಗಿದೆ ತಿಳಿಯೋಣ ಬನ್ನಿ.

Beetroot Benefits: ಸಲಾಡ್, ಜ್ಯೂಸ್ ಅಥವಾ ಕೆಲವು ಸ್ಮೂಥಿಗೆ ಬಣ್ಣ ನಿಡಲು ಬೀಟ್​ರೂಟ್ ಬಳಸುವುದು ತೀರ ಸಾಮಾನ್ಯ. ಕೆಂಪು ಬಣ್ಣದಿಂದಲೇ ತುಂಬಿಕೊಂಡಿರುವ ಈ ತರಕಾರಿಯ ವಿಶೇಷತೆ ಕೇವಲ ಅದರ ಬಣ್ಣದಲ್ಲಿ ಮಾತ್ರವಿಲ್ಲ. ಬದಲಿಗೆ ನಮ್ಮ ದೇಹಕ್ಕೆ ಬೇಕಿರುವ ತೀರ ಅಗತ್ಯವಾದ ಹಲವು ಪೋಷಕಾಂಶಗಳು ಹಾಗೂ ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದೆ. ಮತ್ತು ಅದರ ಸೇವನೆಯನ್ನು ರೂಢಿಸಿಕೊಂಡರೆ, ದೇಹಕ್ಕೆ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳು ಸಿಗಲಿವೆ.

ರಕ್ತದೊತ್ತಡ ನಿಯಂತ್ರಣದಿಂದ ರಕ್ತದ ಹರಿವು, ವ್ಯಾಯಾಮದ ಸಮಯದ ಕಾರ್ಯಕ್ಷಮತೆ ಮತ್ತು ಲಿವರ್​ನ ಆರೋಗ್ಯದವರೆಗೆ ಬೀಟ್​ರೂಟ್ ಹಲವು ಆರೋಗ್ಯ ಪ್ರಯೋಜನ ನೀಡಲಿದೆ. ಇದರಲ್ಲಿ ಫೋಲೇಟ್, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳು ತುಂಬಿವೆ. ಅಷ್ಟಕ್ಕೂ ಈ ತರಕಾರಿಯ ಸೇವನೆಯಿಂದ ಏನೆಲ್ಲ, ಎಷ್ಟೆಲ್ಲ ಪ್ರಯೋಜನ ದೊರೆಯಲಿದೆ ಎಂಬುದರ ಮಾಹಿತಿ ಹೀಗಿದೆ ತಿಳಿಯೋಣ ಬನ್ನಿ.

ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ

ಬೀಟ್​ರೂಟ್​ನ ಪ್ರಮುಖ ವಿಶೇಷತೆ ಎಂದರೆ ಅದರಲ್ಲಿರುವ ನೈಸರ್ಗಿಕ ನೈಟ್ರೇಟ್​. ಇವು ರಕ್ತನಾಳಗಳು ಸಡಿಲಗೊಳ್ಳಲು ಮತ್ತು ಅಗಲವಾಗಲು ಸಹಾಯ ಮಾಡಬಹುದು. ಇದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಹೀಗಾಗಿ ನಿಯಮಿತವಾಗಿ ಬೀಟ್​ರೂಟ್ ಸೇವಿಸುವುದು ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.

ಲಿವರ್‌ ಆರೋಗ್ಯಕ್ಕೆ ಬೆಸ್ಟ್​

ಬೀಟ್​ರೂಟ್​ನಲ್ಲಿ ಆ್ಯಂಟಿಆಕ್ಸಿಡೆಂಟ್​ಗಳು ಮತ್ತು ವಿವಿಧ ಸಸ್ಯಜನ್ಯ ಸಂಯುಕ್ತಗಳಿವೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಸ್ಟ್ರೆಸ್ ವಿರುದ್ಧ ಹೋರಾಡಲು ಮತ್ತು ಯಕೃತ್ತಿನ ಸಾಮಾನ್ಯ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ.

ವ್ಯಾಯಾಮದ ಕಾರ್ಯಕ್ಷಮತೆ ಹೆಚ್ಚಳ

ನೀವು ನಿಯಮಿತವಾಗಿ ಯೋಗ, ವ್ಯಾಯಾಮ ಅಥವಾ ವರ್ಕೌಟ್ ಮಾಡುತ್ತಿದ್ದರೆ, ಬೀಟ್​ರೂಟ್​ ಅನ್ನು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್​ಗಳು ರಕ್ತದ ಹರಿವು ಮತ್ತು ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. .

ಉರಿಯೂತ ನಿಯಂತ್ರಣ

ಬೀಟ್​ರೂಟ್‌ನಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಪೋಷಕಾಂಶಗಳಿವೆ. ಇವುಗಳಲ್ಲಿ ರೋಗನಿರೋಧಕ ಮತ್ತು ಉರಿಯೂತ (ಸಣ್ಣಪುಟ್ಟ ನೋವು ಅಥವಾ ಊತ) ಶಮನಗೊಳಿಸುವ ಗುಣಗಳಿವೆ. ಹಾಗಾಗಿ, ದೈನಂದಿನ ಸಮತೋಲಿತ ಆಹಾರದಲ್ಲಿ ಬೀಟ್​ರೂಟ್ ಹಾಗೂ ಇತರ ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಉರಿಯೂತವನ್ನು ನಿಯಂತ್ರಿಸಬಹುದು.

ಪೋಷಕಾಂಶಗಳು ಹೇರಳ

ಬೀಟ್‌ರೂಟ್‌ನಲ್ಲಿ ಫೋಲೇಟ್‌, ಪೊಟ್ಯಾಸಿಯಂ ಹಾಗೂ ವಿಟಮಿನ್ ಸಿ ನಂತಹ ಪ್ರಮುಖ ಪೋಷಕಾಂಶಗಳಿವೆ. ಇವು ದೇಹದ ಒಟ್ಟಾರೆ ಆರೋಗ್ಯ ಮತ್ತು ದೈನಂದಿನ ಕಾರ್ಯಗಳಿಗೆ ಬಹಳ ಅಗತ್ಯ. ಹಾಗಾಗಿ, ಯೋಗ ಅಥವಾ ವ್ಯಾಯಾಮದ ನಂತರ ಬೀಟ್‌ರೂಟ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಮತ್ತು ಪೋಷಕಾಂಶಗಳು ಸಿಗಲಿವೆ.

ದಯವಿಟ್ಟು ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).