Weight loss : ನಿಮ್ಮ ದೇಹದ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿದ್ದೀರಾ? ಅದಕ್ಕೆಲ್ಲ ಭಯ ಪಡಬೇಡಿ. ಇಲ್ಲಿದೆ ಒಂದು ಅದ್ಭುತ ಪರಿಹಾರ. ದೇಹದ ತೂಕ ಹೆಚ್ಚಾದಾಗ ವಾಕಿಂಗ್ ಮಾಡಿ ಮಾಡಿ ವಾಕಿಂಗ್ ಕಿಂಗ್ಗಳಾದರೂ, ಜಿಮ್, ಡಯಟ್ ಅಂತ ಅದು ಇದು ಮಾಡಿದರೂ ತೂಕ ಕಡಿಮೆ ಆಗುತ್ತಿಲ್ಲವೇ? ಹಾಗಾದರೇ ಒಮ್ಮೆ ನಿಮ್ಮ ಅಡುಗೆ ಮನೆಯಮ ಸ್ಟಾರ್ ಪ್ಲೇಯರ್ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ, ಅದರಿಂದ ಖಂಡಿತ ಪರಿಹಾರವಿದೆ.
ಹೌದು, ಈರುಳ್ಳಿ ಅಡುಗೆ ಮನೆಯ ಸ್ಟಾರ್ ಪ್ಲೇಯರ್. ಈರುಳ್ಳಿ ಎಂದರೆ ಕೇವಲ ಊಟದ ಜತೆ ರುಚಿ ನೀಡುವ ಅಥವಾ ಊಟದ ಸಮಯದಲ್ಲಿ ತಟ್ಟೆಯ ಅಲಂಕಾರಕ್ಕೆ ವಿಭಿನ್ನ ರೀತಿಯಲ್ಲಿ ಕತ್ತರಿಸುವ ಸಾಮಾನ್ಯ ಪದಾರ್ಥವಲ್ಲ. ಇದು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಈರುಳ್ಳಿಯಾಗಿದೆ. ಇದನ್ನು ಮೀನು ಅಥವಾ ಕೋಳಿ ಮಾಂಸದ ಜತೆಗೆ ತಿನ್ನುವ ಅಭ್ಯಾಸವನ್ನು ಹೆಚ್ಚಾಗಿ ಹೊಂದಿದ್ದಾರೆ. ಆದರೆ, ಈರುಳ್ಳಿ ತನ್ನಲ್ಲಿ ಅನೇಕ ಸಾಮರ್ಥ್ಯವನ್ನು ಹೊಂದಿದೆ.
ಅಂದಹಾಗೆ, ಈ ಈರುಳ್ಳಿ ಕೇವಲ ದೇಹದ ತೂಕವನ್ನು ಅಷ್ಟೇ ನಿಯಂತ್ರಿಸುತ್ತದೆ ಅಂದುಕೊಳ್ಳಬೇಡಿ. ಕಚ್ಚಾ ಈರುಳ್ಳಿ ತಿನ್ನುವುದರಿಂದ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಹೃದಯದ ಆರೋಗ್ಯಕ್ಕೂ, ರಕ್ತ ಪ್ರಸರಣಕ್ಕೂ ಉತ್ತಮವಾಗಿದೆ. ಇದರಲ್ಲಿ ಇರುವ ಪ್ರೀಬಯಾಟಿಕ್ ಫೈಬರ್ಗಳು ನಿಮ್ಮ ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಿ, ಜೀರ್ಣಕ್ರಿಯನ್ನು ಸುಗಮಗೊಳ್ಳಿಸುತ್ತದೆ. ಇದರ ಪರಿಣಾಮವಾಗಿ ದೇಹದ ತೂಕ ಇಳಿಸುವುದಕ್ಕೂ ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನೂ ಹೆಚ್ಚು ಕೊಲೆಸ್ಟ್ರಾಲ್ ಇರುವವರು ಇದರ ಉಪಯೋಗ ಪಡೆದುಕೊಳ್ಳಬಹುದು. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದಲ್ಲದೆ ಈರುಳ್ಳಿ ವಿಟನಿನ್ ಸಿ ಅನ್ನು ಹೆಚ್ಚಾಗಿ ಹೊಂದಿದೆ. ಇದು ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಟನ್ ಮತ್ತು ಕೋಳಿ ಮಾಂಸದ ಫ್ರೈಗೆ ಈರುಳ್ಳಿ ಸೇರಿಸುವುದರಿಂದ ರುಚ್ಚಿ ಹೆಚ್ಚುವುದಲ್ಲದೆ ಎಣ್ಣೆ ಆಧಾರಿತ ಪದಾರ್ಥಗಳಿಂದ ಉಂಟಾದಗುವ ಹಾನಿಕಾರ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ತೂಕ ಕಡಿಮೆ ಮಾಡುವುದು ಕೇವಲ ದೇಹದ ರೂಪಕ್ಕಾಗಿ ಅಲ್ಲ. ಅದು ಆರೋಗ್ಯ, ಶಕ್ತಿ ಹಾಗೂ ಉತ್ತಮ ಜೀವನ ಶೈಲಿಗಾಗಿ ಅತಂತ್ಯ ಮುಖ್ಯವಾಗಿದೆ. ಪ್ರತಿಯೊಬ್ಬರು ತಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನವನ್ನು ನಡೆಸಬೇಕು. ಅದಕ್ಕಾಗಿ ನೀವು ಪ್ರತಿದಿನ ತಿನ್ನುವ ಅಡುಗೆ ಪದಾರ್ಥಗಳಲ್ಲಿ ಅಡಗಿರುವ ರಹಸ್ಯವನ್ನು ತಿಳಿಯುವುದು ತುಂಬಾ ಅಗತ್ಯವಾಗಿದೆ. (ಏಜೆನ್ಸೀಸ್)