ಮಾನವನ ಅರಿವಿನ ಹಿಂದಿನ ರಹಸ್ಯ WEB
ಲೈಫ್‌ಸ್ಟೈಲ್

ಮೆದುಳಿನ ಯಾವ ಭಾಗ ನಿಜಕ್ಕೂ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ? ಮಾನವನ ಅರಿವಿನ ಹಿಂದಿನ ರಹಸ್ಯ ಬಯಲು! Brain science

ನಾವು ಕಣ್ಣು ಮುಚ್ಚಿದಾಗ, ಕಿವಿಗಳನ್ನು ಮುಚ್ಚಿಕೊಂಡಾಗ ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡಂತೆ ಅನಿಸಬಹುದು. ಆದರೆ ನಮ್ಮೊಳಗಿನ ಅರಿವು ಮಾತ್ರ ಹಾಗೆಯೇ ಇರುತ್ತದೆ. ನಾವು ಯೋಚಿಸುತ್ತಿದ್ದೇವೆ, ಅನುಭವಿಸುತ್ತಿದ್ದೇವೆ ಎಂಬ ಈ ಪ್ರಜ್ಞೆ ಮಾನವನ ಅಸ್ತಿತ್ವದ ಅತ್ಯಂತ ನಿಗೂಢ ಸಂಗತಿಗಳಲ್ಲೊಂದು. ಅಚ್ಚರಿಯ ವಿಷಯವೆಂದರೆ, ಈ ಪ್ರಜ್ಞೆಯ ಮೂಲ ಮೆದುಳಿನಲ್ಲಿ ನಾವು ಇಷ್ಟು ದಿನ ಭಾವಿಸಿದ್ದ ಭಾಗದಲ್ಲಿ ಇಲ್ಲದಿರಬಹುದು ಎಂದು ನರವಿಜ್ಞಾನಿಗಳು ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ.Brain science

Brain science Consciousness: ನಾವು ಕಣ್ಣು ಮುಚ್ಚಿದಾಗ, ಕಿವಿಗಳನ್ನು ಮುಚ್ಚಿಕೊಂಡಾಗ ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡಂತೆ ಅನಿಸಬಹುದು. ಆದರೆ ನಮ್ಮೊಳಗಿನ ಅರಿವು ಮಾತ್ರ ಹಾಗೆಯೇ ಇರುತ್ತದೆ. ನಾವು ಯೋಚಿಸುತ್ತಿದ್ದೇವೆ, ಅನುಭವಿಸುತ್ತಿದ್ದೇವೆ ಎಂಬ ಈ ಪ್ರಜ್ಞೆ ಮಾನವನ ಅಸ್ತಿತ್ವದ ಅತ್ಯಂತ ನಿಗೂಢ ಸಂಗತಿಗಳಲ್ಲೊಂದು. ಅಚ್ಚರಿಯ ವಿಷಯವೆಂದರೆ, ಈ ಪ್ರಜ್ಞೆಯ ಮೂಲ ಮೆದುಳಿನಲ್ಲಿ ನಾವು ಇಷ್ಟು ದಿನ ಭಾವಿಸಿದ್ದ ಭಾಗದಲ್ಲಿ ಇಲ್ಲದಿರಬಹುದು ಎಂದು ನರವಿಜ್ಞಾನಿಗಳು ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ.

ಸಾಮಾನ್ಯವಾಗಿ ಮಾನವನ ಪ್ರಜ್ಞೆಯ ಕೇಂದ್ರ ಮೆದುಳಿನ ಹೊರಭಾಗದಲ್ಲಿರುವ ಸೆರೆಬ್ರಲ್ ಕಾರ್ಟೆಕ್ಸ್ ಎಂದು ನಂಬಲಾಗಿದೆ. ಮೆದುಳಿನ ಸುಕ್ಕುಸುಕ್ಕಾಗಿರುವ ಈ ಹೊರಪದರವು ದೃಷ್ಟಿ, ಶ್ರವಣ, ಸ್ಪರ್ಶ ಸೇರಿದಂತೆ ಹಲವು ಸಂವೇದನೆಗಳನ್ನು ಸಂಸ್ಕರಿಸುವ ಪ್ರಮುಖ ಭಾಗವಾಗಿದೆ. ಆದರೆ ಮಾಹಿತಿ ಸಂಸ್ಕರಣೆ ಮಾಡುವುದು ಮತ್ತು ಆ ಮಾಹಿತಿಯನ್ನು ಸ್ವತಃ ಅನುಭವಿಸುವುದು ಎರಡೂ ಒಂದೇ ಅಲ್ಲ ಎಂಬುದು ವಿಜ್ಞಾನಿಗಳ ಗಮನ ಸೆಳೆದಿದೆ.

ನೋವಿನ ಅನುಭವವೇ ನೀಡಿದ ಸುಳಿವು

ನೀವು ಬಿಸಿಯಾದ ವಸ್ತುವನ್ನು ಮುಟ್ಟಿದರೆ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುತ್ತೀರಿ. ನಿಮ್ಮ ನರಮಂಡಲ ಅಪಾಯವನ್ನು ಗುರುತಿಸಿ, ನೀವು ನೋವನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ಮೊದಲೇ ಪ್ರತಿಕ್ರಿಯಿಸುತ್ತದೆ. ಅಪಾಯವನ್ನು ಗುರುತಿಸುವ ಪ್ರಕ್ರಿಯೆಯನ್ನು ನೊಸೆಸೆಪ್ಷನ್ ಎಂದು ಕರೆಯಲಾಗುತ್ತದೆ. ಆದರೆ ಆ ನೋವನ್ನು ಅನುಭವಿಸುವುದು ಮಾತ್ರ ವೈಯಕ್ತಿಕ ಪ್ರಜ್ಞೆಗೆ ಸಂಬಂಧಿಸಿದ ಸಂಗತಿಯಾಗಿದೆ.ಮೆದುಳಿನ ಕೆಲವು ಭಾಗಗಳನ್ನು ಪ್ರಚೋದಿಸಿದಾಗ ಬೆಳಕಿನ ಮಿಂಚು ಅಥವಾ ಶಬ್ದದಂತಹ ಅನುಭವಗಳನ್ನು ಉಂಟುಮಾಡಬಹುದು. ಆದರೆ ನೋವಿನ ಅನುಭವವನ್ನು ಅದೇ ರೀತಿ ಸೃಷ್ಟಿಸುವುದು ಸುಲಭವಲ್ಲ ಎಂದು ಸಂಶೋಧಕರು ಗಮನಿಸಿದ್ದಾರೆ.

ಇದನ್ನೂ ಓದಿ : ಒಬ್ಬರೇ ಇದ್ದರೂ ಯಾರೋ ಪಕ್ಕದಲ್ಲಿದ್ದಂತೆ ಭಾಸವಾಗುತ್ತದೆಯೇ? ದೆವ್ವ-ಭೂತ ಅಲ್ಲವೇ ಅಲ್ಲ ಇಲ್ಲಿದೆ ಕಣ್ಣು ತೆರೆಸುವ ಸತ್ಯ! Psychology Facts

ಪ್ರಜ್ಞೆಯ ಹಿಂದಿರಬಹುದೇ ಬ್ರೈನ್‌ಸ್ಟೆಮ್?

ಮೆದುಳಿನ ಕೆಳಭಾಗದಲ್ಲಿರುವ ಬ್ರೈನ್‌ಸ್ಟೆಮ್ ಮೆದುಳನ್ನು ಬೆನ್ನುಹುರಿಯೊಂದಿಗೆ ಸಂಪರ್ಕಿಸುತ್ತದೆ. ಉಸಿರಾಟ, ಹೃದಯ ಬಡಿತ, ನಿದ್ರೆಯಂತಹ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಈ ಭಾಗಕ್ಕೆ ಹಾನಿಯಾದರೆ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುವ ಅಥವಾ ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ.ಸಂಶೋಧಕರ ಪ್ರಕಾರ, ಬ್ರೈನ್‌ಸ್ಟೆಮ್ ಕೇವಲ ನಮ್ಮನ್ನು ಎಚ್ಚರವಾಗಿಡುವ ಕೆಲಸವನ್ನಷ್ಟೇ ಮಾಡುವುದಿಲ್ಲ. ಪ್ರಜ್ಞೆಯ ಮೂಲ ಅನುಭವವೇ ಈ ಭಾಗದಿಂದ ಆರಂಭವಾಗಿರಬಹುದು. ಇಲಿಗಳ ಮೇಲೆ ನಡೆಸಿದ ಹಿಂದಿನ ಪ್ರಯೋಗಗಳಲ್ಲಿಯೂ ಮೆದುಳಿನ ಈ ನಿರ್ದಿಷ್ಟ ಭಾಗಕ್ಕೆ ಅಲ್ಪ ಪ್ರಮಾಣದ ಅರಿವಳಿಕೆ ಔಷಧ ನೀಡಿದಾಗ ಅವು ಆಳವಾದ ನಿಷ್ಕ್ರಿಯ ಸ್ಥಿತಿಗೆ ತಲುಪಿರುವುದು ಕಂಡುಬಂದಿತ್ತು.

ಮೆದುಳಿನ ಹೊರಪದರ ಇಲ್ಲದಿದ್ದರೂ ಅರಿವು ಇರಬಹುದೇ?

ಈ ಸಂಶೋಧನೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಹೈಡ್ರಾನೆನ್ಸೆಫಲಿ ಎಂಬ ಅಪರೂಪದ ಸ್ಥಿತಿ. ಈ ಸ್ಥಿತಿಯಲ್ಲಿ ಮಕ್ಕಳ ಮೆದುಳಿನ ಬಹುಪಾಲು ಸೆರೆಬ್ರಲ್ ಭಾಗವೇ ಇರುವುದಿಲ್ಲ. ಆದರೂ ಕೆಲವು ಮಕ್ಕಳು ಪರಿಚಿತ ವ್ಯಕ್ತಿಗಳಿಗೆ ಪ್ರತಿಕ್ರಿಯಿಸುವುದು, ಇಷ್ಟ-ಕಷ್ಟಗಳಿಗೆ ಸ್ಪೋದಿಸುವುದು ಮತ್ತು ನೋವು ಅಥವಾ ಸಂತೋಷಕ್ಕೆ ಸ್ಪಂದಿಸುವಂತಹ ವರ್ತನೆಗಳನ್ನು ಪ್ರದರ್ಶಿಸಿರುವುದು ವರದಿಯಾಗಿದೆ.ಅದೇ ರೀತಿ, ಸೆರೆಬ್ರಲ್ ಕಾರ್ಟೆಕ್ಸ್ ತೆಗೆದುಹಾಕಲಾದ ಕೆಲವು ಪ್ರಾಣಿಗಳಲ್ಲಿಯೂ ನೋವಿಗೆ ಪ್ರತಿಕ್ರಿಯಿಸುವುದು ಸೇರಿದಂತೆ ಕೆಲವು ಸಂಕೀರ್ಣ ವರ್ತನೆಗಳು ಕಂಡುಬಂದಿವೆ. ಆದರೆ ಇಂತಹ ವರ್ತನೆಗಳು ನಿಜವಾಗಿಯೂ ಪ್ರಜ್ಞಾಪೂರ್ವಕ ಅನುಭವವನ್ನು ಸೂಚಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ: ಕೆಲವರು ಭಯಾನಕ ದೃಶ್ಯಗಳನ್ನು ಎಂಜಾಯ್​ ಮಾಡುವುದೇಕೆ? ಹೊಸ ಅಧ್ಯಯನ ಬಿಚ್ಚಿಟ್ಟಿದೆ ಅಚ್ಚರಿಯ ಸತ್ಯ...Brain Science

ಪ್ರಜ್ಞೆಯ ರಹಸ್ಯಕ್ಕೆ ಸಿಗಲಿದೆಯೇ ಉತ್ತರ?

ಪ್ರಜ್ಞೆಯ ಅನುಭವದಲ್ಲಿ ಮೆದುಳಿನ ಎರಡು ಭಾಗಗಳು ವಿಭಿನ್ನ ಪಾತ್ರ ವಹಿಸಬಹುದು. ಬ್ರೈನ್‌ಸ್ಟೆಮ್ ನಾವು ಪ್ರಜ್ಞೆಯಲ್ಲಿದ್ದೇವೆ ಎಂಬ ಮೂಲಭೂತ ಅನುಭವವನ್ನು ಒದಗಿಸಿದರೆ, ಸೆರೆಬ್ರಲ್ ಕಾರ್ಟೆಕ್ಸ್ ಆ ಅನುಭವಕ್ಕೆ ಸಂಬಂಧಿಸಿದ ಮಾಹಿತಿ, ಆಲೋಚನೆ ಮತ್ತು ಸಂವೇದನೆಗಳನ್ನು ಸಂಸ್ಕರಿಸುತ್ತದೆ. ಈ ವಾದವು ಪ್ರಜ್ಞೆಯ ಕುರಿತ ದೀರ್ಘಕಾಲದ ವೈಜ್ಞಾನಿಕ ಚರ್ಚೆಗೆ ಹೊಸ ಆಯಾಮ ನೀಡಿದೆ. ಆದರೆ ಪ್ರಜ್ಞೆಯ ನಿಜವಾದ ಮೂಲ ಯಾವುದು ಎಂಬ ಪ್ರಶ್ನೆಗೆ ಇನ್ನೂ ಅಂತಿಮ ಉತ್ತರ ಸಿಕ್ಕಿಲ್ಲ. ಮಾನವನಷ್ಟೇ ಅಲ್ಲದೆ ಇತರ ಜೀವಿಗಳಲ್ಲಿಯೂ ಪ್ರಜ್ಞೆ ಹೇಗೆ ವಿಕಸನಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಇನ್ನಷ್ಟು ಸಂಶೋಧನೆ ನಡೆಸಬೇಕಿದೆ, (ಏಜೆನ್ಸೀಸ್​).