ಲೈಫ್‌ಸ್ಟೈಲ್

ಇಂತಹ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ; Watermelon

ಬೇಸಿಗೆಯ ಸಮಯದಲ್ಲಿ ಈ ಕಲ್ಲಂಗಡಿ ಹಣ್ಣು ನಮ್ಮ ದೇಹಕ್ಕೆ ಹೆಚ್ಚಾಗಿ ಹೈಡ್ರೇಟ್ ಮತ್ತು ಪೋಷಣೆಯನ್ನು ನೀಡುತ್ತದೆ. ಆದರೆ ಶೀತ, ಕೆಮ್ಮು, ಜ್ವರ ಹಾಗೂ ಮಧುಮೇಹದಂತಹ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಕಲ್ಲಂಗಡಿಯನ್ನ ತಿನ್ನಬಾರದು ಎನ್ನಲಾಗಿದೆ. ಈ ಹಣ್ಣನ್ನು ತಿನ್ನುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅವಶ್ಯಕ. ಕಲ್ಲಂಗಡಿ ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು ಮತ್ತು ರೋಗ ನಿರೋಧಕ ಶಕ್ತಿಯ ಮೂಲವಾಗಿದೆ. ಇದು ಸಾಕಷ್ಟು ಪೋಷಣೆಯನ್ನು ಒದಗಿಸುವುದಲ್ಲದೆ, ದೇಹವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

Watermelon | ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಇಂತಹ ಬೇಸಿಗೆಯ ಸಂದರ್ಭದಲ್ಲಿ ಎಲ್ಲರೂ ರಸ್ತೆಬದಿಯಲ್ಲಿ ಸಿಗುವ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸುವುದನ್ನು ನಾವು ನೋಡಿರುತ್ತೇವೆ. ಇಲ್ಲವಾದಲ್ಲಿ ಮನೆಗೆ ಒಂದು ದಪ್ಪವಾದ ಕಲ್ಲಂಗಡಿ ಹಣ್ಣನ್ನು ತಂದು ಅದನ್ನು ಕತ್ತರಿಸಿ ಇಡೀ ಕುಟುಂಬದೊಂದಿಗೆ ಸೇರಿ ಕಲ್ಲಂಗಡಿಯನ್ನು ತಿನ್ನಲಾಗುತ್ತದೆ. ಆದರೆ ಕೆಲ ಸಮಸ್ಯೆ ಇರುವ ಜನರು ಈ ಹಣ್ಣನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ಎಂದು ಹೇಳಲಾಗಿದೆ.

ಕಲ್ಲಂಗಡಿ ಸೇವಿಸುವ ಮುನ್ನ ಮುನ್ನೆಚ್ಚರಿಕೆಗಳು :

ಶೀತ ಮತ್ತು ಕೆಮ್ಮು: ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳು ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು. ಏಕೆಂದರೆ ಇದು ಶೀತ ಸ್ವಭಾವದ ಹಣ್ಣು ಆಗಿರೋದ್ರಿಂದ ನಿಮ್ಮಲ್ಲಿರುವ ಕಾಯಿಲೆ ಮತ್ತಷ್ಟು ಹೆಚ್ಚಾಗಬಹುದು.

ಜ್ವರ: ಜ್ವರ ಇದ್ದರೆ ಕಲ್ಲಂಗಡಿ ತಿನ್ನದಂತೆ ವೈದ್ಯರು ಸಲಹೆ ನೀಡುತ್ತಾರೆ. ಜ್ವರದ ಸಮಯದಲ್ಲಿ ತಣ್ಣನೆಯ ಹಣ್ಣನ್ನು ಸೇವಿಸುವುದು ಪ್ರಯೋಜನಕಾರಿಯಲ್ಲ. ಆದ್ದರಿಂದ ಕಲ್ಲಂಗಡಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಅಲರ್ಜಿ ವ್ಯಕ್ತಿಗಳಿಗೆ ಸೂಕ್ತವಲ್ಲ: ಅಲರ್ಜಿ ಇರುವ ವ್ಯಕ್ತಿಗಳು ಕಲ್ಲಂಗಡಿ ತಿನ್ನುವುದರಿಂದ ದೂರವಿರಬೇಕು ಏಕೆಂದರೆ ಅದು ಅವರ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಕಲ್ಲಂಗಡಿ ಸೇವಿಸಿದ ನಂತರ ಯಾವುದೇ ಅಲರ್ಜಿಯ ಪ್ರತಿಕ್ರಿಯೆಗಳನ್ನು ನೀವು ಗಮನಿಸಿದರೆ, ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.

(ಏಜೆನ್ಸೀಸ್)

ಮಧುಮೇಹಿಗಳಿಗೆ ಕಲ್ಲಂಗಡಿ ಒಳ್ಳೆಯದೇ?: ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದೇ ಎಂಬುದು ಸಾಮಾನ್ಯ ಕಾಳಜಿಯಾಗಿದೆ. ಕಲ್ಲಂಗಡಿ ಹೆಚ್ಚಿನ ನೀರಿನ ಅಂಶ ಮತ್ತು ಸಮೃದ್ಧ ನಾರಿನಂಶದಿಂದಾಗಿ, ಮಧುಮೇಹಿಗಳು ಕೆಲವು ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಮಧುಮೇಹಿಗಳು ಬೆಳಗ್ಗೆ ಅಥವಾ ಮಲಗುವ ಮುನ್ನ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು. ಬದಲಾಗಿ, ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.