ಲೈಫ್‌ಸ್ಟೈಲ್

ಒಂದೇ ತಿಂಗಳಲ್ಲಿ ತೂಕ ಇಳಿಸಿಕೊಳ್ಳಬೇಕೇ?; ಈ ಆರೋಗ್ಯದಾಯಕ ಕ್ರಮಗಳನ್ನು ಅನುಸರಿಸಿ: ಇಲ್ಲಿದೆ ಮಾಹಿತಿ | Lose Weight

Lose Weight:ತ್ವರಿತ ಮತ್ತು ವೇಗವಾಗಿ ನಿಮ್ಮ ಅಧಿಕ ತೂಕವನ್ನು ಇಳಿಸಿಕೊಳ್ಳಲು ದಿನನಿತ್ಯ ಹರಸಾಹಸ ಪಡುತ್ತಿರುತ್ತಾರೆ. ಹಲವರು ತಮ್ಮ ತೂಕ ಇಳಿಕೆಗೆ ವಿವಿಧ ವಿಧಾನದಗಳ ಮೂಲಕ ಪ್ರಯತ್ನಿಸುತ್ತಾರೆ. ಇನ್ನು ಈ ಹಲವರಲ್ಲಿ ಜಿಮ್​, ಕಡಿಮೆ ತಿನ್ನುವುದು ಮತ್ತು ವೈದ್ಯಕೀಯ ಪರಿಕರಿಗಳನ್ನು ಹುಡುಕುತ್ತಿರುತ್ತಾರೆ. ಆದರೂ ತೂಕ ಇಳಿಕೆ ಸಾಧ್ಯವಾಗುತ್ತಿಲ್ಲವೇ? ಆಗಾದರೆ, ತಜ್ಞರು ಹೇಳಿರುವ ಕೆಲ ಟಿಪ್ಸ್​ಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

1.ತರಕಾರಿ ಮತ್ತು ಹಣ್ಣು ಬಳಕೆ

ದಿನನಿತ್ಯದ ನಿಮ್ಮ ಊಟದಲ್ಲಿ ಅಧಿಕ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿ. ಅಲ್ಲದೆ, ಊಟ ಮಾಡುವ ಮೊದಲು ಸಾಲಡ್​(ತರಕಾರಿ) ತಿನ್ನಬೇಕು. ಪಾಲಕ್​, ಬ್ರೋಕಲಿ ಸೇರಿದಂತೆ ಹಸಿರು ಎಲೆ ತರಕಾರಿಗಳು ತೂಕ ಇಳಿಕೆಗೆ ಸಾಹಕಾರಿಯಾಗಲಿದೆ. ಸೇಬು, ಪೇರಳೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

2.ದ್ವಿದಳ ಧಾನ್ಯ

ಬೇಳೆ, ಬಾಟಣಿ ಮತ್ತು ಉದ್ದಿನ ಬೇಳೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ತಿನ್ನುವುದರ ಮೂಲಕ ತೂಕ ಇಳಿಸಿಕೊಳ್ಳಬಹುದು. ಅವುಗಳಲ್ಲಿ ಪ್ರೋಟೀನ್​ ಮತ್ತು ಫೈಬರ್​ ಹೆಚ್ಚಿನ ಅಂಶ ಇರುವುದಿಂದ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

3.ಬಾದಮಿ, ವಾಲ್​ನಟ್ಸ್​

ಬಾದಮಿ, ನಟ್ಸ್​ ಮತ್ತು ಚಿಯಾ ಬೀಜಗಳಂತಹ ಸೇವನೆಯಿಂದ ತೂಕ ಇಳಿಕೆ ಸಹಾಕಾರಿ. ದಿನನಿತ್ಯದ ಸೇವನೆಯಿಂದ ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

4.ಓಟ್​ ಮೀಲ್​

ಓಟ್​ ಮೀಲ್​ ಕೂಡ ತೂಕ ಕಡಿಮೆ ಸಹಾಯ ಮಾಡುತ್ತದೆ. ಇದು ಅಧಿಕ ನಾರಿನಾಂಶದಿಂದ ಕೂಡಿದ್ದು, ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

5. ಗ್ರೀನ್ ಟೀ-ಕಾಫಿ

ಗ್ರೀನ್ ಟೀ ಮತ್ತು ಕಾಫಿ ಕೂಡ ತೂಕ ಇಳಿಸಿಕೊಳ್ಳಲು ಬೇಗನೆ ಸಹಾಯ ಮಾಡುತ್ತದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಾಫಿಯಲ್ಲಿ ಕೆಫೀನ್ ಇದ್ದು, ಇದು ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ.

6.ನೀರು

ಆಹಾರದ ಹೊರತಾಗಿಯೂ ದೇಹಕ್ಕೆ ನೀರು ಪ್ರಮುಖಾಂಶ. ಹೀಗಾಗಿ, ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದಿನವಿಡೀ ಸಾಧ್ಯವಾದಷ್ಟು ನೀರು ಕುಡಿಯಲು ಪ್ರಯತ್ನಿಸಬೇಕು.(ಏಜನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.