ಲೈಫ್‌ಸ್ಟೈಲ್

ಅತಿಯಾದ ವಾಕಿಂಗ್​ನಿಂದ ಏನೆಲ್ಲಾ ಸೈಡ್​ ಎಫೆಕ್ಟ್​ ಆಗುತ್ತೆ ಗೊತ್ತಾ? ಸಮಸ್ಯೆ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಆರೋಗ್ಯವಂತರಾಗಿರಲು ಆಹಾರದ ಜತೆಗೆ ದೈಹಿಕ ಚಟುವಟಿಕೆಗಳೂ ಬಹಳ ಮುಖ್ಯ ಎಂಬುದು ಗೊತ್ತೆ ಇದೆ. ಇತ್ತೀಚಿನ ದಿನಗಳಲ್ಲಿ ಜನರು ಸದೃಢವಾಗಿರಲು ಜಿಮ್‌, ವಾಕಿಂಗ್​​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ವಾಕಿಂಗ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅತಿಯಾದ ವಾಕಿಂಗ್​​ನಿಂದ ಏನೆಲ್ಲಾ ಅಡ್ಡಪರಿಣಾಮ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅತಿಯಾದ ವಾಕಿಂಗ್​ನಿಂದ ಆಗುವ ಆರೋಗ್ಯ ಸಮಸ್ಯೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಕಳಪೆ ಭಂಗಿ ಅಥವಾ ದುರ್ಬಲ ಕೋರ್​ ಸ್ನಾಯುಗಳನ್ನು ಹೊಂದಿದ್ದರೆ ಅತಿಯಾದ ವಾಕಿಂಗ್​​​ ವೇಗ ಹಾಗೂ ನಿಮ್ಮ ದೇಹದ ತೂಕವನ್ನು ದೂರದವರೆಗೆ ಸಾಗಿಸುವ ಒತ್ತಡವು ಬೆನ್ನುಮೂಳೆ ಮತ್ತು ಕೆಳಬೆನ್ನಿನ ನೋವಿಗೆ ಕಾರಣವಾಗುತ್ತದೆ.
  • ಪ್ರತಿಯೊಬ್ಬರ ದೇಹವು ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಬೇಗನೆ ಫಿಟ್​ ಆಗಬೇಕೆಂಬ ಹಂಬಲದಿಂದ ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ನಡೆದರೆ ಸ್ನಾಯುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಅತಿಯಾದ ವಾಕಿಂಗ್​ ಪಾದಗಳಲ್ಲಿ ನೋವನ್ನುಂಟು ಮಾಡುತ್ತದೆ. ವಿಶೇಷವಾಗಿ ಹಿಮ್ಮಡಿಗಳು, ಕಣಕಾಲುಗಳು, ಕಾಲ್ಬೆರಳುಗಳಲ್ಲಿ ನೋವುಂಟಾಗುತ್ತದೆ. ಈ ನೋವು ಪ್ಲಾಂಟರ್​ ಫ್ಯಾಸಿಟಿಸ್​​ನಿಂದ ಆಗುತ್ತದೆ. ಹಿಮ್ಮಡಿ ಮೂಳೆಯನ್ನು ನಿಮ್ಮ ಕಾಲ್ಬೆರಳುಗಳಿಗೆ ಸಂಪರ್ಕಿಸುವ ಅಸ್ಥಿರಜ್ಜು ಉರಿಯಲು ಪ್ರಾರಂಭಿಸುತ್ತದೆ. ಪಾದಗಳ ಮೇಲಿನ ಒತ್ತಡವು ಪುನರಾವರ್ತನೆ ಆದಗ ಊತವನ್ನು ಉಂಟುಮಾಡುತ್ತದೆ.
  • ಮೊಣಕಾಲು, ಕೀಲು ಸಮಸ್ಯೆಗಳಿರುವ ಜನರಿ ಅತಿಯಾದ ವಾಕಿಂಗ್​​ ಮಾಡುವುದದರಿಂದ ಮತ್ತಷ್ಟು ನೋವು ಹೆಚ್ಚಾಗುತ್ತದೆ. ವಿಶೇಷವಾಗಿ ವಯಸ್ಸಾದವರು ಹೆಚ್ಚು ನಡೆಯುವುದನ್ನು ತಪ್ಪಿಸಬೇಕು.
  • ಅತಿಯಾದ ನಡಿಗೆಯಿಂದ ದೇಹವು ದಣಿದ ಅನುಭವವಾಗುತ್ತದೆ. ತೂಕವನ್ನು ಕಳೆದುಕೊಳ್ಳುವ ಸಲುವಾಗಿ ಅನೇಕ ಜನರು ಅಗತ್ಯಕ್ಕಿಂತ ಹೆಚ್ಚು ನಡೆಯಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ ಬಹುಬೇಗನೆ ಆಯಾಸಕ್ಕೆ ಒಳಗಾಗುತ್ತಾರೆ.