Mood Swings: ಪೆರಿಮೆನೋಪಾಸ್ (ಋತುಬಂಧಕ್ಕೆ ಮುಂಚಿನ ಅವಧಿ) ಮತ್ತು ಮೆನೋಪಾಸ್ (ಋತುಬಂಧ) ಮೂಡ್ ಸ್ವಿಂಗ್‌ಗಳು ನಿಮ್ಮನ್ನು ಹುಚ್ಚರನ್ನಾಗಿಸುತ್ತಿವೆಯೇ? ಇವು ರೋಗಗಳಲ್ಲ ಬದಲಿಗೆ ನಿಮ್ಮ ಜೀನ್ಗಳು ಮತ್ತು ಜೀವನಶೈಲಿಯಲ್ಲಾಗುವ ನೈಸರ್ಗಿಕ ಪರಿವರ್ತನೆಗಳು ಎಂದು ಸಂಶೋಧನೆಗಳು ತಿಳಿಸಿವೆ. ಅವರವರ ಮನಸ್ಥಿತಿಯನ್ನು ಅವಲಂಬಿಸಿ ಪ್ರತಿಯೊಬ್ಬ ಮಹಿಳೆಯೂ ಅವುಗಳನ್ನು ವಿಭಿನ್ನವಾಗಿ ಅನುಭವಿಸುತ್ತಾರೆ. ಈ ಬದಲಾವಣೆಯ ವಿರುದ್ಧ ಹೋರಾಡುವುದು ಮುಖ್ಯವಲ್ಲ ಬದಲಿಗೆ ಈ ಸಮಯದಲ್ಲಿ ದೇಹವನ್ನು ಬೆಂಬಲಿಸುವುದು ಅಗತ್ಯವಾಗಿದೆ.
ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಾಮಾನ್ಯ. ಇದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ. ಇದು ಇನ್ಸುಲಿನ್, ಮೂಳೆ, ಥೈರಾಯ್ಡ್, ಕರುಳು ಮತ್ತು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳು ಒಟ್ಟಿಗೆ ಕೆಲಸ ಮಾಡುವುದರಿಂದ ಇದರ ಅಸಮತೋಲನವು ಇಡೀ ದೇಹದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಜೀವನ ತರಬೇತುದಾರರ ಪ್ರಕಾರ, ಹಾರ್ಮೋನುಗಳನ್ನು ಸಮತೋಲನಗೊಳಿಸಲು ಗಮನಹರಿಸಬೇಕಾದ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಅವುಗಳು ಹೀಗಿವೆ.
ತಜ್ಞರು ಸೂಚಿಸುವ ಪ್ರಕಾರ ನಿದ್ರೆಯು ಸ್ಥಿರ ಚಕ್ರಗಳು ಕಾರ್ಟಿಸೋಲ್, ಮೆಟಲೋನಿನ್ ಮತ್ತು ಈಸ್ಟ್ರೊಜೆನ್ನ್ನು ನಿಯಂತ್ರಿಸುತ್ತದೆ. ಈ ನಿದ್ರೆಯು ದೈನಂದಿನ ಜೀವನಕ್ಕೆ ಅತ್ಯಗತ್ಯ. ಅದು ಶಕ್ತಿಯನ್ನು ಹೆಚ್ಚಿಸಿ, ಅವಧಿಗಳ ನೋವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ಸ್ಮರಣಶಕ್ತಿ, ಗಮನ ಸಾಧನೆ ಮತ್ತು ಉತ್ಪಾದಕತೆಯನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಸಂಶೋಧನೆಯ ಪ್ರಕಾರ 20-30 ನಿಮಿಷದ ಕಿರುನಿದ್ರೆಯು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದೆ.
ಸಂಶೋಧನೆಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ ಚಲನೆ ಮತ್ತು ವ್ಯಾಯಾಮವು ಚಯಾಪಚಯವನ್ನು ಹೆಚ್ಚಿಸಿ, ದಿನದ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಿ, ಸ್ಮರಣಶಕ್ತಿಯನ್ನು ಬಲಪಡಿಸುತ್ತದೆ. ಈ ಸಮಯದಲ್ಲಿನ ನೋವನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ನಿದ್ರೆಯನ್ನು ನೀಡುತ್ತವೆ. ಓಡಾಡುವುದು ಮತ್ತು ವ್ಯಾಯಾಮ ಮಾಡುವುದರಿಂದ ದೈನಂದಿನ ಚಟುವಟಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ಭಾವನಾತ್ಮಕ ಸ್ವಾಸ್ಥ್ಯವು ದಿನದ ಆರಂಭಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಇದು ಭಾವನಾತ್ಮಕ ದಹನವನ್ನು ತಡೆಯುತ್ತವೆ, ಹಾಗೆಯೇ, ಸಾಮಾನ್ಯ ಒತ್ತಡಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ಪ್ರಾಣಯಾಮ ಮತ್ತು ಯೋಗವು ಶ್ವಾಸ ನಿಯಂತ್ರಣದ ಮೂಲಕ ಆಕ್ಸಿಜನ್ ಹರಿವನ್ನು ಹೆಚ್ಚಿಸಿ, ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಒಂದೇ ವಿಷಯದ ಕಡೆ ಗಮನ ಕೊಡಲು ಸಹಾಯ ಮಾಡುತ್ತದೆ. ಹಾಗೆಯೇ ಇದು ದೈಹಿಕವಾಗಿ ಜೀರ್ಣಕ್ರಿಯೆ ನಡೆಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಾಗುವ ಮನಸ್ಥಿತಿಯನ್ನು ಬದಲಾವಣೆ ಮಾಡಿ ಸುಧಾರಿಸುತ್ತದೆ.
ಇದನ್ನೂ ಓದಿ: ಸುದೀಪ್ ವಿರುದ್ಧ ‘ದೊಡ್ಮನೆ’ ವೀಕ್ಷಕರ ಬೇಸರ! ಅಷ್ಟಕ್ಕೂ ಕಿಚ್ಚನ ಪಂಚಾಯಿತಿಯಲ್ಲಿ ಆಗಿದ್ದೇನು? ಹೀಗಿವೆ ಕಾರಣ | BBK12
ಮುಟ್ಟಿನ ಸಮಯದಲ್ಲಿ ಸಕ್ಕರೆಯುಕ್ತ ಪದಾರ್ಥಗಳು, ಪ್ಯಾನ್ಕೇಕ್ಗಳು, ತುಪ್ಪದ ರೊಟ್ಟಿ, ಫ್ರೈಡ್ ಫುಡ್ಗಳು, ಮಾಂಸಗಳನ್ನು ತಪ್ಪಿಸಿ. ಇವು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿ ಶಕ್ತಿ ಕುಸಿತಕ್ಕೆ ಕಾರಣವಾಗಬಹದು. ಹಾಗೆಯೇ ಇದು ದೇಹಕ್ಕೆ ಒತ್ತಡವನ್ನು ನೀಡುತ್ತದೆ. ಹಾಗಾಗಿ ಇಂತಹ ಆಹಾರ ಪದಾರ್ಥಗಳನ್ನು ಈ ಸಮಯದಲ್ಲಿ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.