ಲೈಫ್‌ಸ್ಟೈಲ್

ಕರೊನಾ ಎದುರಿಸಲು ಆಯುರ್ವೆದ ಔಷಧ ಬಳಸಿ

ಬೆಂಗಳೂರು: ಜಗತ್ತಿನಾದ್ಯಂತ ತನ್ನ ವಿರಾಟ್ ರೂಪ ತೋರುತ್ತಿರುವ ಮಹಾಮಾರಿ ಕರೊನಾ ವೈರಸ್ ಬಾರದಂತೆ ತಡೆಯಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ಆಯುರ್ವೆದದಲ್ಲಿ ಲಭ್ಯವಿರುವ ಔಷಧಗಳ ಉಪಯೋಗ ಪಡೆದು ಕೊಳ್ಳುವಂತೆ ಬೈದ್ಯನಾಥ್ ಆಯುರ್ವೆದ ಭವನ ಮನವಿ ಮಾಡಿದೆ.

ಈ ಕುರಿತು ಭವನದ ಪ್ರಧಾನ ವೈದ್ಯ ಡಾ. ರಮೇಶ್ ಶರ್ಮಾ ಕೆಲವು ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಆಯುರ್ವೆದಲ್ಲಿರುವ ಮಹತ್ವ ಅರಿತು ಅದರ ಉಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನರು ಆಯುರ್ವೆದಲ್ಲಿರುವ ಉಪಯುಕ್ತ ಔಷಧಗಳನ್ನು ನಿತ್ಯ ಬಳಸುವ ಮೂಲಕ ವೈರಸ್​ನಿಂದ ಮುಕ್ತರಾಗಿ ಎಂದು ಮನವಿ ಮಾಡಿದ್ದಾರೆ.

ಆಯುರ್ವೆದದಲ್ಲಿ ಲಭ್ಯವಿರುವ ದಶ್ಮೂಲ್ ಕಾಡಾ (ಕಷಾಯ), ಪದ್ಯಾದಿ ಕಾಡಾ (ಕಷಾಯ) ಹಾಗೂ ಸಂಚಮನಿ ಬಟ್ಟಿ (ಬೇರು) ಮತ್ತು ಅಮೃತಬಳ್ಳಿಗಳನ್ನು ನಿತ್ಯ ಬಳಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕರೊನಾದಿಂದ ಮುಕ್ತರಾಗಿ ಎಂದು ಹೇಳಿದ್ದಾರೆ.

ಕರೊನಾದಿಂದ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಿ ನರಳುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಸೋಂಕು ಬಾರದಂತೆ ತಡೆಯಲು ಯಾವುದೇ ಲಸಿಕೆ ಇಲ್ಲ, ಬಂದರೆ ಗುಣಪಡಿಸಲು ಔಷಧವೂ ಇಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಸಾವಿಗೀಡಾಗುತ್ತಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಸೋಂಕು. ಹೀಗಾಗಿ ಜನರು ವ್ಯಕ್ತಿಗತ ಅಂತರ ಕಾಯ್ದುಕೊಂಡು ಜೀವಿಸುವುದು ಅತ್ಯಗತ್ಯ ಹಾಗೂ ಅನಿವಾರ್ಯ. ಇದರ ಜತೆಗೆ ಆಯುರ್ವೆದದ ಉಪಯೋಗವನ್ನು ಮಾಡಿಕೊಳ್ಳಿ ಎಂದು ಕೋರಿದ್ದಾರೆ.