ಲೈಫ್‌ಸ್ಟೈಲ್

ರಾತ್ರಿ ವೈ-ಫೈ ಆಫ್ ಮಾಡಿ: ಆರೋಗ್ಯಕರ ನಿದ್ರೆಗೆ ಒಂದು ಸರಳ ಹೆಜ್ಜೆ!| Internet

Internet: ಮಗಳೇ ಮಲಗು ರಾತ್ರಿ 12 ಆಯ್ತು, ಅದೆಷ್ಟು ಮೊಬೈಲ್​ ನೋಡ್ತಿಯಾ..ಇರಮ್ಮಾ ಈಗ ತಾನೆ ಒಂದು ಸೀರಿಯಲ್​ ನೋಡೊದನ್ನ ಮುಗಿಸಿದ್ದೀನಿ. ನಮಗೆ ಬೆಳಿಗ್ಗೆ ವೈ ಫೈ ಸಿಗುವುದಿಲ್ಲ. ಇದು ಬೆಂಗಳೂರಿನ ನಿವಾಸಿಯಾದ ಅಕ್ಷತಳ ಮನೆಯಲ್ಲಿ ನಡೆಯುವಂತಹ ಪ್ರತಿ ದಿನದ ಸಂಭಾಷಣೆಯಾಗಿದೆ.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ, ಮೊಬೈಲ್​ ವೀಕ್ಷಣೆ ಮಾಡುತ್ತಾರೆ, ವೈ-ಫೈ ಇಂಟರ್​ನೆಟ್​ ಬಳಸುತ್ತಾರೆ. ಇವುಗಳನ್ನು ರಾತ್ರಿ ಮಲಗುವ ಸಮಯದಲ್ಲಿ ಆಫ್ ಮಾಡುವುದು ಆರೋಗ್ಯ, ಗೌಪ್ಯತೆ ಮತ್ತು ತಾಂತ್ರಿಕ ಕಾರಣಗಳಿಗೆ ಸಂಬಂಧಿಸಿದಂತೆ ಚರ್ಚೆಯ ವಿಷಯವಾಗಿದೆ. ಈ ವಿಚಾರವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಗಮನಿಸುವುದಾದರೆ, ಆರೋಗ್ಯ ಪರಿಣಾಮಗಳು ಮತ್ತು ಪ್ರಾಯೋಗಿಕ ದೃಷ್ಟಿಯಿಂದ ವಿಶ್ಲೇಷಿಸಿಸುವುದರಿಂದ ಯಾವುದು ಉತ್ತಮ ಎಂದು ತಿಳಿಯೋಣ.

ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳು

ವೈ-ಫೈ ಮತ್ತು ಮೊಬೈಲ್ ಇಂಟರ್ನೆಟ್‌ನಿಂದ ಹೊರಹೊಮ್ಮುವ ರೇಡಿಯೇಷನ್​ಗಳು ರೇಡಿಯೋ ಫ್ರೀಕ್ವೆನ್ಸಿ ರೂಪದಲ್ಲಿರುತ್ತದೆ. ಇದು ತೀವ್ರವಾದ ರೇಡಿಯೇಷನ್‌ಗಿಂತ ಕಡಿಮೆ ಶಕ್ತಿಯ ರೇಡಿಯೇಷನ್ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಇತರ ಸಂಸ್ಥೆಗಳು ಇದನ್ನು ಸಾಮಾನ್ಯವಾಗಿ ಸುರಕ್ಷಿತ ಎಂದು ತಿಳಿಸಿದೆ.

ಕೆಲವು ಅಧ್ಯಯನಗಳ ಪ್ರಕಾರ, ದೀರ್ಘಕಾಲವಾಗಿ ರಾತ್ರಿಯಾದ ನಂತರ ಮೊಬೈಲ್​ಗಳನ್ನು ನೋಡುವುದರಿಂದ ನಿದ್ರೆಯ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸೂಚಿಸಿವೆ.

ರಾತ್ರಿ ವೇಳೆಯಲ್ಲಿ ಮೊಬೈಲ್​ನ್ನು ತಲೆ ಹತ್ತಿರ ಇಟ್ಟುಕೊಂಡು ಮಲಗುವುದರಿಂದ ಮೊಬೈಲ್​ನಿಂದ ಹೊರಸೂಸುವ ರೆಡಿಯೇಷನ್​ಗಳು ನಿಮ್ಮ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯಾಗಿ ಮಾಡುವುದರಿಂದ ನಿದ್ರೆಯ ಚಕ್ರದಲ್ಲಿ ತೊಂದರೆಯಾಗುತ್ತದೆ.

ನೀವು ಪ್ರತಿನಿತ್ಯ ಮಲಗುವ ವೇಳೆ ವೈ-ಫೈ ಮತ್ತು ಮೊಬೈಲ್ ಡೇಟಾ ಆಫ್ ಮಾಡುವುದರಿಂದ EMR ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಮಲಗುವ ವೇಳೆ ವೈ-ಫೈ ಆಫ್​ ಮಾಡಿ ಮಲಗುವುದು ಉತ್ತಮವಾಗಿರುತ್ತದೆ. ಇದರ ಜೊತೆಯಲ್ಲಿ ಫೋನ್‌ನಿಂದ ಬರುವ ನೀಲಿ ಬೆಳಕುಗಳು ನಿಮ್ಮ ನಿದ್ರೆಯನ್ನು ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ, ರಾತ್ರಿ ವೇಳೆಯಲ್ಲಿ ಮೊಬೈಲ್​ ಮತ್ತು ಇಂಟರ್ನೆಟ್​ನಿಂದ ದೂರ ಇರುವುದು ನಿದ್ರೆಗೆ ಬಹಳ ಉತ್ತಮ ಮಾರ್ಗವಾಗಿದೆ.

ಗೌಪ್ಯತೆ ಮತ್ತು ಸುರಕ್ಷತೆ

ನಿಮ್ಮ ಮೊಬೈಲ್​ನಲ್ಲಿ ವೈ-ಫೈ ಮತ್ತು ಮೊಬೈಲ್ ಡೇಟಾ ಆನ್ ಇದ್ದರೆ, ಫೋನ್​ ಹಿನ್ನಲೆಯಲ್ಲಿ ಚಲಿಸುವ ಆಪ್​ಗಳು ಡೇಟಾವನ್ನು ಹೆಚ್ಚು ಸಂಗ್ರಹಿಸಬಹುದು. ಹಾಗೆಯೇ, ಇದರ ಜೊತೆಗೆ ನಿಮ್ಮ ಮೊಬೈಲ್​ ಹ್ಯಾಕ್​ ಆಗುವುದು ಇಲ್ಲವೇ, ಡೇಟಾ ಸೋರಿಕೆಯಾಗಬಹುದು. ಆದರಿಂದ ಆಫ್​ ಮಾಡಿ ಮಲಗುವುದು ಒಳ್ಳೆಯ ಅಭ್ಯಾಸವಾಗಿದೆ.

ತಾಂತ್ರಿಕ ದೃಷ್ಟಿಕೋನ

ಪ್ರತಿನಿತ್ಯ ಮೊಬೈಲ್​ ಉಪಯೋಗಿಸಿದ ನಂತರ, ಕೊನೆಯಲ್ಲಿ ವೈ-ಫೈ ಹಾಗೂ ಇಂಟರ್ನೆಟ್​​ ಬಳಕೆಯನ್ನು ಕಡಿತಗೊಳಿಸುವುದರಿಂದ ಫೋನ್​ನ ಬ್ಯಾಟರಿಗಳು ಜೀವಿತಾವದಿಯಲ್ಲಿ ಉಳಿಯಬಹುದು. ಹಾಗೆಯೇ, ಹಿನ್ನೆಲೆಯಲ್ಲಿ ಚಲಿಸುವ ಆಪ್‌ಗಳು ಡೇಟಾ ಮತ್ತು ಬ್ಯಾಟರಿಯನ್ನು ಖಾಲಿಮಾಡುತ್ತವೆ. ಇದರಿಂದ ಫೋನ್‌ನ ದೀರ್ಘಾವಧಿಯ ಕಾರ್ಯಕ್ಷಮತೆ ಸುಧಾರಿಸುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ