Kidney Problems : ಇತ್ತೀಚಿನ ದಿನಗಳಲ್ಲಿ ಅನುಚಿತ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ವಿಶೇಷವಾಗಿ, ಹೆಚ್ಚಿನ ಜನರು ವಯಸ್ಸಿನ ಹೊರತಾಗಿಯೂ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಇವುಗಳನ್ನು ಕಡಿಮೆ ಮಾಡಲು, ಕೆಲವು ಅಭ್ಯಾಸಗಳನ್ನು ಅನುಸರಿಸಬೇಕು.
ಪ್ರತಿದಿನ ಬೆಳಗಿನ ಜಾವದಲ್ಲಿ ನೀವಿದನ್ನು ಅನುಸರಿಸುವುದರಿಂದ ನಿಮ್ಮ ಮೂತ್ರಪಿಂಡಗಳ ಆರೋಗ್ಯವು ಬಹಳಷ್ಟು ಸುಧಾರಿಸುತ್ತದೆ. ಅದೇನೆಂದರೆ, ಸೇಬು ಮತ್ತು ಪಪ್ಪಾಯಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಅದರಲ್ಲೂ ಬೆಳಗಿನ ಉಪಹಾರದ ಸಮಯದಲ್ಲಿ ಸೇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮೂತ್ರಪಿಂಡಗಳ ಆರೋಗ್ಯ ಸುಧಾರಿಸುತ್ತದೆ.
ನೀವು ನಿರ್ಜಲೀಕರಣದಿಂದ ಬಳಲುತ್ತಿದ್ದರೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ನೀವು ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಟ 8 ಲೋಟ ಅಥವಾ ಎರಡೂವರೆ ಲೀಟರ್ ನೀರಾದ್ರೂ ಕುಡಿಯಬೇಕು. ಅದರಲ್ಲೂ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾನೇ ಪರಿಣಾಮವನ್ನು ಬೀರುತ್ತದೆ.
ರಕ್ತ ಪರಿಚಲನೆ ಸುಧಾರಿಸಿದರೆ ನಿಮ್ಮ ಮೂತ್ರಪಿಂಡಗಳ ಕಾರ್ಯನಿರ್ವಹಣೆಯೂ ಕೂಡ ಸುಧಾರಿಸುತ್ತದೆ. ಆದ್ದರಿಂದ, ಬೆಳಿಗ್ಗೆ ಸ್ವಲ್ಪ ಸಮಯವನ್ನು ತಪ್ಪದೇ ವ್ಯಾಯಾಮ ಅಥವಾ ನಡಿಗೆಗೆ ಮೀಸಲಿಡಿ. ಈ ರೀತಿ ಮಾಡುವುದರಿಂದ ಮೂತ್ರಪಿಂಡಗಳ ಆರೋಗ್ಯ ಸುಧಾರಿಸುತ್ತದೆ.
ಹೆಚ್ಚಿನ ಜನರು ಬೆಳಿಗ್ಗೆ ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಇದರ ಬದಲಾಗಿ, ಗ್ರೀನ್ ಟೀ ನಂತಹ ಗಿಡಮೂಲಿಕೆ ಚಹಾಗಳನ್ನು ಕುಡಿಯುವುದರಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.
ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಸಕ್ಕರೆ ಇರುವ ಆಹಾರವನ್ನು ಉಪಾಹಾರಕ್ಕಾಗಿ ಸೇವಿಸಬಾರದು. ಇವುಗಳನ್ನು ಸೇವಿಸುವುದರಿಂದ ಮೂತ್ರಪಿಂಡದ ಆರೋಗ್ಯಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಇದಲ್ಲದೆ, ಉಪಾಹಾರಕ್ಕಾಗಿ ಸೇವಿಸುವ ಆಹಾರವು ತುಂಬಾ ಆರೋಗ್ಯಕರವಾಗಿರಬೇಕು, ಹಗುರವಾಗಿರಬೇಕು ಮತ್ತು ಸೋಡಿಯಂ ಅಧಿಕವಾಗಿರಬಾರದು.
ನೀವು ಇಂತಹ ಬದಲಾವಣೆಗಳನ್ನು ಮಾಡುವುದರೊಂದಿಗೆ ನೀವು ಆಗಾಗ್ಗೆ ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಬೇಕು. ಹೀಗೆ ಮಾಡುವುದರಿಂದ, ನೀವು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.