ಲೈಫ್‌ಸ್ಟೈಲ್

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಈ ಡ್ರೈ ಫ್ರೂಟ್​ಗಳನ್ನು ಸೇವಿಸಿ; ತಪ್ಪದೇ ತಿಳಿಯಿರಿ ಉಪಯುಕ್ತ ಮಾಹಿತಿ | Memory Power

Memory Power: ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ನಾವು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಬೆಳಗ್ಗೆ ಎದ್ದು ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಹಿಡಿದು ಸೇವಿಸುವ ತಿಂಡಿ, ಊಟದ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ಕಾರಣ ಆರೋಗ್ಯ ಒಂದಿದ್ದರೇ ನಾವು ಏನೂ ಬೇಕಾದರೂ ಮಾಡಬಹುದು. ಅದೇ ಆರೋಗ್ಯ ಕೈಕೊಟ್ಟರೆ ಏನೂ ಮಾಡದ ಸ್ಥಿತಿಗೆ ಹೋಗಬೇಕಾಗುತ್ತದೆ. ಈ ಭಯ ಇಂದು ಎಲ್ಲರಲ್ಲೂ ಇದೆ.

ನಮ್ಮ ಆಹಾರ ಪದ್ಧತಿ ಸರಿಯಾದ ಕ್ರಮದಲ್ಲಿದ್ದರೆ, ಖಂಡಿತವಾಗಿ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದಕ್ಕೆ ಅನುಮಾನವೇ ಬೇಡ. ದೇಹದ ಪ್ರತಿಯೊಂದು ಅಂಗವು ಎಷ್ಟು ಮುಖ್ಯವೋ ಅದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮಿದುಳಿನ ಆರೋಗ್ಯ ಕೂಡ ಅಷ್ಟೇ ಮುಖ್ಯ. ಕಾರಣ, ಮಿದುಳು ಚೆನ್ನಾಗಿ ಕೆಲಸ ಮಾಡಿದರೆ ತಾನೇ ಉಳಿದ ಭಾಗಗಳು ಕೂಡ ಸರಿಯಾಗಿ ಕೆಲಸ ಮಾಡಲು ಸಾಧ್ಯ?

ಇಂದು ನಮ್ಮಲ್ಲಿ ಅನೇಕರಿಗೆ ಕಾಡುವುದು ನೆನಪಿನ ಶಕ್ತಿಯ ಕೊರತೆ. ಹೌದು, ಮರುವಿನ ಖಾಯಿಲೆಯಿಂದ ಅದೆಷ್ಟೋ ಜನ ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಕು ಉಂಟು ಮಾಡಿಕೊಳ್ಳುತ್ತಾರೆ. ಇನ್ನು ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಬಹಳ ಮುಖ್ಯ. ಹಾಗಾದ್ರೆ, ಈ ಮೆಮೋರಿ ಪವರ್​ ಹೆಚ್ಚಿಸಿಕೊಳ್ಳುವುದು ಹೇಗೆ? ಡ್ರೈ ಫ್ರೂಟ್​​ಗಳ ಸೇವನೆ ಎಷ್ಟು ಉತ್ತಮ? ಯಾವುದನ್ನು ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಯಾವುದನ್ನು ಸೇವಿಸಿದ್ರೆ ಏನು ಪ್ರಯೋಜನ?

ವಾಲ್​ನಟ್ಸ್​: ವಾಲ್​​ನಟ್ಸ್​ನಲ್ಲಿ ಓಮೆಗಾ-3 ಫಾಟಿ ಆಸಿಡ್ಸ್​ನಿಂದ ಹೆಚ್ಚಿದ್ದು, ಆ್ಯಂಟಿ-ಆಕ್ಸಿಂಡೆಂಟ್​ಗಳ ಮತ್ತು ವಿಟಮಿನ್-ಇ ಅಂಶವನ್ನು ಒಳಗೊಂಡಿದೆ. ಇದು ನೆನಪಿನ ಶಕ್ತಿ ಹೆಚ್ಚಿಸಲು ಸಹಾಯಕಾರಿ.

ಬಾದಾಮಿ

ಬಾದಾಮಿಯಲ್ಲಿ ರಿಬೋಫ್ಲೇವಿನ್ ಹಾಗೂ ಎಲ್​-ಕ್ಯಾರನೈಟೀನ್ ಅಂಶ ಇದೆ. ಹಾಗಾಗಿ ಬಾದಾಮಿ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಖರ್ಜೂರ

ಡೇಟ್ಸ್​ನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೋಸ್, ಫ್ರುಕ್ಟೋಸ್, ಗ್ಲುಕೋಸ್​ ಮೆದುಳಿಗೆ ವೇಗವಾದ ಎನರ್ಜಿಯನ್ನು ಬೂಸ್ಟ್​ ಮಾಡುವಲ್ಲಿ ಸಹಾಯ ಮಾಡುತ್ತದೆ.

ಒಣ ದ್ರಾಕ್ಷಿ

ಇವು ಆ್ಯಂಟಿ-ಆಕ್ಸಿಡೆಂಟ್​ಗಳಿಂದ ಹೇರಳವಾಗಿದ್ದು, ಕಬ್ಬಿಣಾಂಶವನ್ನು ಒಳಗೊಂಡಿದೆ. ಇದು ಮೆದುಳಿಗೆ ಗರಿಷ್ಠ ಆಮ್ಲಜನಕದ ಹರಿವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ.

ಗೋಡಂಬಿ

ಗೋಡಂಬಿಯಲ್ಲಿ ಮೆಗ್ನೀಶಿಯಮ್ ಅಂಶ ಹೇರಳವಾಗಿದ್ದು, ಇದು ನರವೈಜ್ಞಾನಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.