ವಾಶ್ಬೇಸಿನ್ ಕ್ಲೀನ್ ಆದ ಬಳಿಕವೂ ದುರ್ವಾಸನೆ ಬರುತ್ತೆ ಅಂತಾ ಆಲೋಸಿಚುತಿದ್ದೀರಾ..? ಪೈಪ್ಗಳಲ್ಲಿ ಶೇಕರಣೆಯಾಗಿರುವ ತ್ಯಾಜ್ಯ ವಸ್ತುಗಳು, ಬ್ಯಾಕ್ಟೀರಿಯಾ, ಟ್ಯಾಪ್ನಿಂದ ಕೊಳಕು ಮತ್ತು ದುರ್ವಾಸನೆ ನೀರು ಹೀಗೆ ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ಅದರ ದುರ್ವಾಸನೆಯಿಂದ ಮನೆಯಲ್ಲಿ ಏನೋ ಒಂದು ರೀತಿ ಕಿರಿಕಿರಿ ಆಗುತ್ತಿರುತ್ತೆ. ಅದಕ್ಕೆಲ್ಲಾ ಫುಲ್ಸ್ಟಾಪ್ ಇಡಬೇಕು ಎಂದರೆ ನೀವು ಈ ಟಿಪ್ಸ್ಗಳನ್ನು ಬಳಸಿ. ಸರಿಯಾಗಿ ಸ್ವಚ್ಛಗೊಳಿಸುವುದರ ಜತೆಗೆ ಈ ಸಿಂಪಲ್ ಟಿಪ್ಸ್ ಅನುಸರಿಸಿದ್ರೆ ಅದರ ಫಲಿತಾಂಶ ನಿಮಗೆ ತಿಳಿಯುತ್ತದೆ.
- ನಿಂಬೆ ರಸ: ನಿಂಬೆ ರಸವು ದುರ್ವಾಸನೆ ಮತ್ತು ಕೊಳೆಯನ್ನು ತೊಡೆದುಹಾಕಲು ಸಾಕಷ್ಟು ಪರಿಣಾಮಕಾರಿಯಾಗಿದೆ. ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಲು ನೀವು ನಿಂಬೆ ರಸವನ್ನು ಬಳಸಬಹುದು. ನಿಂಬೆ ರಸದ ಕೆಲವು ಹನಿಗಳನ್ನು ವಾಶ್ ಬೇಸಿನ್‌ನ ಉದ್ದಕ್ಕೂ ಅನ್ವಯಿಸಿ. 30 ನಿಮಿಷಗಳ ಕಾಲ ಬಿಟ್ಟು ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಬಿಳಿ ವಿನೆಗರ್: ವಾಶ್ ಬೇಸಿನ್ನಿಂದ ಬರುವ ವಾಸನೆಯನ್ನು ತಡೆಯಲು ಬಿಳಿ ವಿನೆಗರ್ ಉತ್ತಮ ಆಯ್ಕೆಯಾಗಿದೆ. ಅರ್ಧ ಕಪ್ ಬಿಳಿ ವಿನೆಗರ್ ಅನ್ನು ವಾಶ್ ಬೇಸಿನ್‌ಗೆ ಹಾಕಿ ಅರ್ಧ ಘಂಟೆ ಬಿಡಿ. ನಂತರ ಬಿಸಿ ನೀರಿನಿಂದ ಸ್ವಚ್ಚಗೊಳಿಸಿ ಪೈಪ್ನಲ್ಲಿರುವ ತ್ಯಾಜ್ಯವನ್ನು ತೊಡೆದು ಹಾಕುತ್ತದೆ. ಇದರಿಂದ ವಾಸನೆ ಬರುವುದಿಲ್ಲ.
- ಬೇಕಿಂಗ್ ಪೌಡರ್ ಮತ್ತು ಉಪ್ಪು: ಈ ಎರಡು ವಸ್ತುಗಳನ್ನು ಬೆರೆಸಿ ತಯಾರಿಸಿದ ಮಿಶ್ರಣವು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಅರ್ಧ ಕಪ್ ಅಡಿಗೆ ಸೋಡಾ ಮತ್ತು 1/4 ಕಪ್ ಟೇಬಲ್ ಸ್ಪೂನ್ ಉಪ್ಪನ್ನು ಮಿಶ್ರಣ ಮಾಡಿ. ವಾಶ್ಬೇಸಿನ್ಗೆ ಹಾಕಿ 15 ನಿಮಿಷಗಳ ನಂತರ 30 ಸೆಕೆಂಡ್ ಬಕೆಟ್ ನೀರನ್ನು ಸುರಿಯಿರಿ. ಇದರಿಂದ ದುರ್ವಾಸನೆ ಬರುವುದು ನಿಲ್ಲುತ್ತದೆ.
- ಕುದಿಯುವ ನೀರಿನಿಂದ ಸ್ವಚ್ಚಗೊಳಿಸಿ: ವಾಶ್ಬೇಸಿನ್ನಲ್ಲಿ ಅನೇಕ ರೀತಿಯ ಸೂಕ್ಷ್ಮಜೀವಿಗಳು ಸಂಗ್ರಹವಾಗಿರುತ್ತವೆ. ವಾರಕ್ಕೆ ಕನಿಷ್ಠ 3 ಬಾರಿ ಸ್ವಲ್ಪ ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಕುದಿಯುವ ನೀರನ್ನು ಡ್ರೈನ್‌ಗೆ ಸುರಿಯಿರಿ. ಐದು ನಿಮಿಷಗಳ ನಂತರ ಸಮಾನ ಪ್ರಮಾಣದ ತಣ್ಣೀರನ್ನು ಸುರಿಯಿರಿ. ಇದು ವಾಸನೆಯನ್ನು ಹೋಗಲಾಡಿಸುತ್ತದೆ.