ಲೈಫ್‌ಸ್ಟೈಲ್

ತುಳಸಿ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ! ಗೊತ್ತಾದ್ರೆ ನೀವು ಮಿಸ್​ ಮಾಡೋದೆ ಇಲ್ಲ

ಭಾರತದಲ್ಲಿ ಸಾವಿರಾರು ಲಕ್ಷ ವರ್ಷಗಳಿಂದ ಆಯುರ್ವೇದದ ಔಷಧಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಆಯುರ್ವೇದದಿಂದ ರೋಗಗಳನ್ನು ತಡೆಗಟ್ಟುವುದು ಸುಲಭ ಎಂದು ಸೈನ್ಸ್​ ಕೂಡ ಹೇಳುತ್ತದೆ. ಆಯುರ್ವೇದ ಔಷಧಿಯಲ್ಲಿ ತುಳಸಿ ಕೂಡ ಒಂದು. ಇದನ್ನು ಬಳಸುವುದರಿಂದ 100ಕ್ಕೂ ಹೆಚ್ಚು ರೋಗಗಳನ್ನು ತಡೆಯಬಹುದು ಎಂಬುದು ನಿಮಗೆ ಗೊತ್ತಿದೆಯೇ..?

ಹೌದು, ಸೋಂಕುಗಳಿಂದ ನೂರಕ್ಕು ಹೆಚ್ಚು ರೋಗಗಳು ಹರಡುತ್ತದೆ. ಆದರೆ ಸಂಶೋಧನೆಯೊಂದರ ಪ್ರಕಾರ ತುಳಿಸಿ ಬಳಕೆಯು ಯಾವುದೇ ಋತುವಿನಲ್ಲಾದರೂ ಬ್ಯಾಕ್ಟೀರಿಯಾ, ವೈರಲ್ ಮತ್ತು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಯುಕ್ತಗಳನ್ನು ಒಳಗೊಂಡಿದೆ. ಹಾಗಾದ್ರೆ ತುಳಸಿ ಬಳಕೆಯಿಂದ ಏನೆಲ್ಲಾ ಪ್ರಯೋಜನವಿದೆ. ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

  • ಒತ್ತಡಕ್ಕೆ ಬ್ರೇಕ್​​: ಪ್ರಸ್ತುತ ಒತ್ತಡದ ಜೀವನದಲ್ಲಿ ತುಳಸಿ ಬಳಸುವುದು ಸಂಜೀವಿನಿ ಇದ್ದಂತೆ. ತುಳಸಿ ಬಳಸುವುದರಿಂದ ಮೆದುಳಿನಲ್ಲಿ ಸಂತೋಷದ ಹಾರ್ಮೋನ್​​ಗಳ ಉತ್ಪಾದನೆ ಹೆಚ್ಚಾಗುತ್ತದೆ. ಸಿರೊಟೋನಿನ್ ಮತ್ತು ಡೋಪಮೈನ್ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.
  • ಶ್ವಾಸಕೋಶಕ್ಕೆ ಶಕ್ತಿ: ತುಳಸಿ ಎಲೆಗಳ ರಸವು ಶ್ವಾಸಕೋಶದ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು, ಶೀತ ಮತ್ತು ಆಸ್ತಮದಂತಹ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
  • ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಲು ಸಹಕಾರಿ: ತುಳಸಿಯಿಂದ ರಕ್ತದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು. ತುಳಸಿ ಬಳಕೆಯಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುತ್ತದೆ. ಮಧುಮೇಹವನ್ನು ನಿರ್ವಹಿಸಲು ಇದು ಮುಖ್ಯವಾಗಿದೆ.
  • ಆರೋಗ್ಯಕರ ಹೃದಯ: ತುಳಸಿಯ ಸೇವನೆಯಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಇದು ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ತ್ವಚೆ ಆರೋಗ್ಯಕ್ಕೆ ಸಹಕಾರಿ: ತುಳಸಿ ಪೇಸ್ಟ್​​ ಅನ್ನು ತ್ವಚೆಯ ಮೇಲೆ ಅಪ್ಲೈ ಮಾಡುವುದರಿಂದ ಕ್ರಮೇಣ ಮೊಡವೆ, ಅಲರ್ಜಿಗಳು, ಕಲೆಗಳು ಮಾಯವಾಗುತ್ತವೆ.