personality traits based on feet
- ನಿಮ್ಮ ಪಾದ ಮತ್ತು ಬೆರಳುಗಳ ಆಕಾರ ಸಾಮುದ್ರಿಕ ಶಾಸ್ತ್ರದ ಪ್ರಕಾರ ಏನು ಹೇಳುತ್ತದೆ?
- ಪಾದದ ರಚನೆಯು ವ್ಯಕ್ತಿಯ ಭಾವನಾತ್ಮಕ ಸಂಬಂಧ ಬಗ್ಗೆ ಮಾಹಿತಿ ನೀಡುತ್ತದೆ
- ತೋರುಬೆರಳು ಹೆಬ್ಬೆರಳಿಗಿಂತ ಉದ್ದವಿದ್ದರೆ ಅದು ನಿಮ್ಮ ನಾಯಕತ್ವದ ಸಂಕೇತ
ಹಿಂದೆಯಲ್ಲ ಹುಡುಗಿ ನೋಡುವ ಶಾಸ್ತ್ರದ ಸಂದರ್ಭ ಹುಡುಗನ ಮನೆಯವರು ಆಕೆಯ ಕಾಲಿನ ಹಿಮ್ಮಡಿ, ಕುಟುಂಬಸ್ಥರ ಮಲಗುವ ಕೋಣೆ ಹಾಗೂ ಶೌಚಾಲಯವನ್ನು ನೋಡುತ್ತಿದ್ದರು. ಇವುಗಳು ಸ್ವಚ್ಛಂದವಾಗಿದ್ದರೆ, ಹುಡುಗಿ ಸಹ ಅಷ್ಟೇ ಕ್ಲೀನ್ ಅಂಡ್ ನೀಟ್ ಎಂದು ಅಂದಾಜಿಸಲಾಗುತ್ತಿತ್ತು. ಜೊತೆಗೆ ಮುಖ ಲಕ್ಷಣ, ಹಸ್ತ, ಪಾದದ ಬೆರಳು ನೋಡಿ ಯಾರು ಹೇಗೆ ಎಂದು ಸಹ ಹೇಳಲಾಗುತ್ತಿತ್ತು. ಕೆಲವೊಮ್ಮೆ ಇದು ನಿಜ ಅನಿಸೋದು ಹೌದು. ಸಾಮುದ್ರಿಕ ಶಾಸ್ತ್ರದ ಪ್ರಕಾರ, ನಮ್ಮ ಪಾದ ಮತ್ತು ಬೆರಳಿನ ರಚನೆ ನಮ್ಮ ಜೀವನದ ಗುಪ್ತ ರಹಸ್ಯ, ಪ್ರೇಮದ ಮಾಹಿತಿಯನ್ನು ಬಿಚ್ಚಿಡುತ್ತದೆ.
ಹಾಗಾದ್ರೆ ನಿಮ್ಮ ಪಾದ, ಬೆರಳನೊಮ್ಮೆ ನೋಡಿಕೊಳ್ಳಿ. ಈಗ ಈ ಲೇಖವನ್ನು ಓದಿ ನಿಮ್ಮ ಪಾದದ ಬೆರಳು ನಿಮ್ಮ ಗುಪ್ತ ವಿಚಾರಗಳ ಬಗ್ಗೆ ಏನು ಹೇಳುತ್ತದೆ. ಯಾವ ಬೆರಳಿನ ಆಕಾರ ಹೇಗಿದ್ದರೆ ಯಾವುದರ ಸೂಚನೆ ಎನ್ನುವುದನ್ನು ತಿಳಿದುಕೊಳ್ಳಿ.
ನಿಮ್ಮ ಬೆರಳುಗಳಲ್ಲಿ ಅಂತರವಿಲ್ಲದಿದ್ದರೇ ಈ ಅರ್ಥ
ನಿಮ್ಮ ಪಾದದ ಹೆಬ್ಬೆರಳು ಮತ್ತು ತೋರ್ಬೆರಳ ಮಧ್ಯೆ ಜಾಗವಿಲ್ಲದೆ ಒಂದಕ್ಕೊಂದು ಅಂಟಿಕೊಂಡಂತೆ ಇದ್ದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂತಹ ವ್ಯಕ್ತಿಗಳು ಬಹಳ ಬುದ್ಧಿವಂತರು. ಅಷ್ಟೇ ಭಾವ ಜೀವಿಗಳು. ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಪ್ರೀತಿಯಾಗಲಿ, ಸ್ನೇಹವಾಗಲಿ ಯಾವುದರಲ್ಲೂ ಸಂಘರ್ಷವುಂಟಾಗುವುದನ್ನು ಇಷ್ಟವೇ ಪಡೋದಿಲ್ಲ. ಕುಟುಂಬದ ಶಾಂತಿಗೆ ಅವರೆಂದಿಗೂ ಸಿದ್ಧ.
ಬೆರಳುಗಳ ಮಧ್ಯೆ ಅಂತರವಿದ್ರೆ ಏನರ್ಥ?
ನಿಮ್ಮ ಹೆಬ್ಬೆರಳು ಮತ್ತು ತೋರ್ಬೆರಳಿನ ಮಧ್ಯೆ ಅಂತರವಿದ್ದರೇ, ಅಂತವರು ಮುಕ್ತವಾಗಿ ಯೋಚನೆ ಮಾಡುವವರು. ಜೀವನದ ಯಾವುದೇ ನಿರ್ಧಾರವನ್ನು ಯಾರ ಹಂಗೂ ಇಲ್ಲದೆ ಸ್ವತಂತ್ರ್ಯವಾಗಿ ತೆಗೆದುಕೊಳ್ಳುವವರು. ಹತ್ತಾರು ಜನರ ಮಧ್ಯೆ ಇದ್ದರೂ ತಮ್ಮದೇ ಆದ ಗುರುತನ್ನು ಬಿಂಬಿಸಲು ಶ್ರಮಿಸುತ್ತಾರೆ. ಪ್ರೇಮಯಾನದಲ್ಲಿಯೂ ಸ್ಪೇಸ್ ಅಥವಾ ಫ್ರೀಡಂ ಅನ್ನು ನಿರೀಕ್ಷೆ ಮಾಡ್ತಾರೆ. ಇದು ಅವರ ಸಂಬಂಧದಲ್ಲಿ ಬಿರುಕು ಅಥವಾ ಸಣ್ಣ ಪುಟ್ಟ ಘರ್ಷಣೆಗೆ ಕಾರಣವಾಗುತ್ತದೆ.
ಉದ್ದವಾದ ತೋರುಬೆರಳಿನವರಿಗೆ ನಾಯಕತ್ವದ ಗುಣ ಹೆಚ್ಚು
ಸಾಕಷ್ಟು ಜನರಿಗೆ ದಪ್ಪನೆಯ ಹೆಬ್ಬರಿಳಿಗಿಂತ ತೋರು ಬೆರಳು ಉದ್ದ ಇರುತ್ತದೆ. ಅಂದರೆ ಹೆಬ್ಬೆರಿಳಿನ ಪಕ್ಕದ್ದು. ಅಂತವರಿಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ. ಕೆಲಸದ ಸ್ಥಳ, ಮನೆಯಲ್ಲಿ ಲೀಡರ್ ಶಿಪ್ ಮಾಡೋದ್ರಲ್ಲಿ ಎತ್ತಿದ ಕೈ. ಅವರ ಮಾತು ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಸಹನಾ ಶೀಲ ವ್ಯಕ್ತಿತ್ವ ಇವರಲ್ಲಿರಲಿದೆ
ಪಾದದ ಹೆಬ್ಬೆರಳಿನ ಪಕ್ಕ ಇರುವ ತೋರು ಬೆರಳು ಸಣ್ಣದಾಗಿದ್ದರೆ, ಅವರು ಮೃದು ಸ್ವಭಾವದ ವ್ಯಕ್ತಿಗಳು. ಎಲ್ಲ ಸಮಯದಲ್ಲೂ ಶಾಂತ ರೀತಿಯಲ್ಲಿ ವರ್ತಿಸುತ್ತಾರೆ. ಎಲ್ಲರ ಭಾವನೆಗಳನ್ನು ಕೇಳಿಸಿಕೊಂಡು ಗೌರವಿಸುತ್ತಾರೆ. ಸಂಬಂಧಗಳನ್ನು ನಿಭಾಯಿಸಿಟ್ಟುಕೊಳ್ಳುವುದು ಇವರಿಗೆ ಗೊತ್ತಿರುವ ಸುಲಭದ ಕಲೆ.
ಹೆಬ್ಬೆರಳಿನ ಆಕಾರ ಏನು ಹೇಳುತ್ತೆ?
ನಿಮ್ಮ ಪಾದದಲ್ಲಿರುವ ಹೆಬ್ಬೆರಳು ದುಂಡಾಗಿ ಸುಂದರವಾಗಿದ್ದರೆ ಅದು ನೀವು ಅದೃಷ್ಟವಂತರು ಎಂದು ಹೇಳುತ್ತದೆ. ಜೀವನದಲ್ಲಿ ಸುಖ-ನೆಮ್ಮದಿ, ಐಶ್ವರ್ಯವು ಹುಡುಕಿಕೊಂಡು ಬರುತ್ತದೆ ಎಂದು ಸಾಮುದ್ರಿಕ ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ.
ಹೀಗೆ ನಿಮ್ಮ ಬೆರಳಿದ್ರೆ ನಿಮಗಿದೆ ಹೆಚ್ಚು ತಾಳ್ಮೆ
ಮೃದು ಅಥವಾ ಬಾಗಿದ ರಚನೆಯ ಹೆಬ್ಬೆರಳು ಇದ್ದರೆ ಜೀವನದ ಆರಂಭಿಕ ದಿನಗಳಲ್ಲಿ ಸ್ವಲ್ಪ ಹೋರಾಟವಿರುತ್ತದೆ. ಆದರೆ ಇವರು ಕಠಿಣ ಪರಿಶ್ರಮಿಗಳಾಗಿದ್ದು, ತಮ್ಮ ತಾಳ್ಮೆಯಿಂದ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ, (ಏಜೆನ್ಸೀಸ್)